ಬೆಂಗಳೂರು : ಈ ಬಾರಿ ಕಳೆದ ವರ್ಷಕ್ಕಿಂತಲೂ ಅಧಿಕ ಚಳಿಯಿದೆ. ಜನವರಿ ಕೊನೆಯವರೆಗೂ ಕೊರೆಯುವ ಚಳಿಯ (Winter) ಎಫೆಕ್ಟ್ ತಟ್ಟಿಲಿದೆ ಎಂದು ಹವಾಮಾನ (Weather) ಇಲಾಖೆ ಮುನ್ಸೂಚನೆ ನೀಡಿದೆ.
ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಚಳಿಯಿದೆ. ಈಗಾಗಲೇ ರಾಜ್ಯದ ಜನ ಚಳಿಗೆ ಥಂಡಾ ಹೊಡೆದಿದ್ದಾರೆ. ಮುಂದಿನ ಒಂದು ವಾರಗಳ ಕಾಲ ಅಥವಾ 10 ದಿನಗಳ ಕಾಲ ದಟ್ಟ ಮಂಜು ಇರಲಿದೆ. ಇದರ ನಡುವೆ ಬೆಂಗಳೂರು ಹಾಗೂ ಸುತ್ತಮುತ್ತ ಸುಮಾರು 200 ಮೀ.ವರೆಗೆ ಶುಕ್ರವಾರ ವಿಪರೀತ ಮಂಜು ಇರಲಿದೆ. ಅದರಲ್ಲೂ ಯಲಹಂಕ, ಎಚ್‌ಎಎಲ್ ವಿಮಾನ ನಿಲ್ದಾಣ ಸುತ್ತಮುತ್ತ ಹೆಚ್ಚಿತ್ತು. ಹೀಗಾಗಿ ಗುರುವಾರ ಮಂಜು ಕವಿದ ವಾತಾವರಣದ ಮುನ್ನೆಚ್ಚರಿಕೆ ಕೊಡಲಾಗಿದೆ.
Advertisement
Advertisement
ಮಂಜಿನಲ್ಲಿ ಪ್ರಮುಖವಾಗಿ 3 ವಿಧಗಳಿವೆ. ಹಗುರ ಮಂಜು ಅಂದರೆ 800-500 ಮೀ.ವರೆಗೆ ಇರುತ್ತದೆ. 500-200 ಮೀ. ಇದ್ದರೇ ಅದನ್ನು ಮಧ್ಯಮ ಮಂಜು ಎನ್ನುತ್ತೇವೆ. 200 ಮೀ. ಕೆಳಗೆ ಹೋದರೆ ದಟ್ಟ ಮಂಜು ಎನ್ನುತ್ತೇವೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಹಗುರ ಮತ್ತು ಮಾಧ್ಯಮ ಮಂಜನ್ನು ಕಾಣುತ್ತೇವೆ. ಆದರೆ ಈ ಬಾರಿ 200 ಮೀ. ಎಂದರೆ ದಟ್ಟ ಮಂಜಿನ ಮುನ್ಸೂಚನೆಯನ್ನು ಹವಾಮಾನ ತಜ್ಞ ಪ್ರಸಾದ್ ನೀಡಿದ್ದಾರೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕದಲ್ಲಿ ಮೋದಿ ಮತ ಭೇಟೆ – ಏನಿದು ಬಿಜೆಪಿ ರಣತಂತ್ರ?
Advertisement
Advertisement
ಈ ದಟ್ಟ ಮಂಜಿನ ಬಗ್ಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕೆಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಈ ಮಂಜು ಹಾಗೂ ಚಳಿಯಿಂದಾಗಿ ಕೆಲವೊಬ್ಬರಿಗೆ ಮೂಗಿನಿಂದ ರಕ್ತ ಬರಬಹುದು, ಚರ್ಮದಲ್ಲಿ ಡ್ರೈನೇಸ್ ಬರಬಹುದು, ಚರ್ಮ ತುರಿಕೆಯಾ ಸಾಧ್ಯತೆ ಇದೆ. ವಯಸ್ಸಾದವರಿಗೆ, ಮಕ್ಕಳಿಗೆ ನಡುಕ ಉಂಟಾಗಬಹುದು ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ 10 ಅಡಿ ದೂರದ ವ್ಯಕ್ತಿಯೂ ಕಾಣದಷ್ಟು ಮಂಜು ಆವರಿಸಲಿದೆ ಎನ್ನಲಾಗಿದೆ. ಇದನ್ನೂ ಓದಿ: ಯಾದಗಿರಿ, ಕಲಬುರಗಿಗೆ ಮೋದಿ – ಎಲ್ಲಿ, ಎಷ್ಟು ಗಂಟೆಗೆ ಏನು ಕಾರ್ಯಕ್ರಮ?
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k