ರಾಜ್ಯದಲ್ಲಿ ಚಳಿಯ ಪ್ರಮಾಣ ನಿಧಾನವಾಗಿ ತಗ್ಗುತ್ತಿದ್ದು, ಬೆಂಗಳೂರು ಸೇರಿದಂತೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಬೇಸಿಗೆಯ ಅನುಭವ ನಿಧಾನವಾಗಿ ಜನರ ಅನುಭವಕ್ಕೆ ಬರುವಂತಹ ವಾತಾವರಣ ದಿನನಿತ್ಯ ಸೃಷ್ಟಿಯಾಗುತ್ತಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಮಧ್ಯಾಹ್ನದ ವೇಳೆ ಬಿಸಿಲು ಹೆಚ್ಚಾಗಲಿದೆ. ಅಲ್ಲದೇ ಉಳಿದಂತೆ ಕರ್ನಾಟಕದಾದ್ಯಂತ ಬಹುತೇಕ ಒಣಹವೆ ಮುಂದುವರೆದರೂ ಸಹ ಮೈಕೊರೆಯುವ ಚಳಿ ಎನ್ನುಂತಹ ವಾತಾವರಣದಿಂದ ಜನರು ಇದೀಗ ದೂರವಾಗಿದ್ದಾರೆ. ಮುಂಜಾನೆ ಹಾಗೂ ಸಂಜೆಯ ವೇಳೆ ಮಾತ್ರ ಚಳಿ ಇದೆ. ಇಂದಿನಿಂದ ಮುಂದಿನ ಎರಡು ದಿನಗಳಲ್ಲಿ ಮಧ್ಯಾಹ್ನದ ಹೊತ್ತಿಗೆ ಬಿಸಿಲು ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕೋಲಾರದಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 29-16
ಮಂಗಳೂರು: 31-23
ಶಿವಮೊಗ್ಗ: 33-18
ಬೆಳಗಾವಿ: 31-18
ಮೈಸೂರು: 32-18

ಮಂಡ್ಯ: 32-17
ಮಡಿಕೇರಿ: 31-16
ರಾಮನಗರ: 31-16
ಹಾಸನ: 29-16
ಚಾಮರಾಜನಗರ: 31-17
ಚಿಕ್ಕಬಳ್ಳಾಪುರ: 28-13

ಕೋಲಾರ: 28-14
ತುಮಕೂರು: 28-15
ಉಡುಪಿ: 31-22
ಕಾರವಾರ: 32-22
ಚಿಕ್ಕಮಗಳೂರು: 28-15
ದಾವಣಗೆರೆ: 32-19

ಹುಬ್ಬಳ್ಳಿ: 33-18
ಚಿತ್ರದುರ್ಗ: 30-17
ಹಾವೇರಿ: 33-18
ಬಳ್ಳಾರಿ: 32-18
ಗದಗ: 31-17
ಕೊಪ್ಪಳ: 31-18

ರಾಯಚೂರು: 32-18
ಯಾದಗಿರಿ: 32-18
ವಿಜಯಪುರ: 32-19
ಬೀದರ್: 31-18
ಕಲಬುರಗಿ: 32-18
ಬಾಗಲಕೋಟೆ: 32-18

