ಬೆಂಗಳೂರು: ಕೇಂದ್ರದ ಉದ್ದೇಶಿತ ವಕ್ಫ್ ಕಾಯ್ದೆ ತಿದ್ದುಪಡಿ ಪ್ರಸ್ತಾವಕ್ಕೆ ರಾಜ್ಯ ವಕ್ಫ್ ಬೋರ್ಡ್ (Karnataka Waqf board) ವಿರೋಧ ವ್ಯಕ್ತಪಡಿಸಿದೆ.
ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan), ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ (Anwar Basha) ನೇತೃತ್ವದಲ್ಲಿ ನಡೆದ ವಕ್ಫ್ ಬೋರ್ಡ್ ಆಡಳಿತ ಮಂಡಳಿ ಸಭೆಯಲ್ಲಿ ತಿದ್ದುಪಡಿ ಕಾಯ್ದೆಗೆ ವಿರೋಧ ಪಡಿಸಿ ನಿರ್ಣಯ ಕೈಗೊಳ್ಳಲಾಯಿತು.
ನಂತರ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ನೇತೃತ್ವದಲ್ಲಿ ಸಿಎಂಗೆ ಈ ಕುರಿತು ನಿರ್ಣಯದ ಪ್ರತಿ ನೀಡಿ ಕೇಂದ್ರಕ್ಕೆ ತಿದ್ದುಪಡಿ ಕಾಯ್ದೆ (Waqf Amendment Bill – 2024) ವಿರೋಧಿಸಿ ಪತ್ರ ಬರೆಯಲು ಮನವಿ ಮಾಡಿತು. ಇದನ್ನೂ ಓದಿ: ರಾಹುಲ್ ಗಾಂಧಿ – ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ವೀಡಿಯೋ!
ಕೇಂದ್ರ ಸರ್ಕಾರ ರಚನೆ ಮಾಡಿರುವ ಜಂಟಿ ಸಲಹಾ ಸಮಿತಿಗೂ ಯಾವುದೇ ರೀತಿಯ ಮಾಹಿತಿ ಕೊಡುವುದಿಲ್ಲ. ನಮ್ಮದು ಸ್ವಾಯತ್ತ ಸಂಸ್ಥೆಯಾಗಿದ್ದು, ಉದ್ದೇಶಿತ ತಿದ್ದುಪಡಿ ಕಾಯ್ದೆ ಸಮುದಾಯದ ಹಿತಾಸಕ್ತಿಗೆ ವಿರುದ್ಧವಾಗಿದೆ. ಇದರ ಹಿಂದಿನ ಉದ್ದೇಶ ಬೇರೆ ಇದೆ ಎಂದು ವಕ್ಫ್ ಬೋರ್ಡ್ ಆಡಳಿತ ಮಂಡಳಿ ಸಭೆ ಅಭಿಪ್ರಾಯ ಪಟ್ಟಿದ್ದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು. ಜೊತೆಗೆ ಮುಂದಿನ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಖಂಡನಾ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಕೋರಲಾಯಿತು.
ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಸದಸ್ಯರಾದ ಮೌಲನಾ ಶಾಫಿ ಸಾದಿ, ಜಿ. ಯಾಕೂಬ್, ಅಡ್ವೋಕೆಟ್ ರಿಯಾಜ್, ಅಡ್ವೋಕೆಟ್ ಅಸೀಫ್ ಅಲಿ, ಮೌಲಾನಾ ಅಜರ್ ಅಭಿದಿ ಉಪಸ್ಥಿತರಿದ್ದರು. ಇದನ್ನೂ ಓದಿ: ಡ್ರೈ ರಾಜ್ಯ ಬಿಹಾರದಲ್ಲಿ ಕಳ್ಳಭಟ್ಟಿ ಸೇವಿಸಿ ಮೂವರ ಸಾವು – ಇಬ್ಬರು ಆಸ್ಪತ್ರೆಗೆ ದಾಖಲು