ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮತದಾನ ಮುಗಿದಿದೆ. ಜಿದ್ದಾಜಿದ್ದಿನ ಶಿವಮೊಗ್ಗ, ಕಲಬುರಗಿ, ಬಳ್ಳಾರಿ ಸೇರಿದಂತೆ 14 ಕ್ಷೇತ್ರಗಳಲ್ಲಿ ಇವತ್ತು ಶೇ.68 ರಷ್ಟು (ರಾತ್ರಿ 8 ಗಂಟೆಯವರೆಗಿನ ಮಾಹಿತಿ ಪ್ರಕಾರ) ಮತದಾನವಾಗಿದೆ. ಮೊದಲ ಹಂತದಲ್ಲಿ ಶೇ.69.58ರಷ್ಟು ಮತದಾನವಾಗಿತ್ತು.
ಎಂದಿನಂತೆ ಮತಯಂತ್ರ ದೋಷ ಮುಂದುವರಿದಿದ್ದು, ಅಲ್ಲಲ್ಲಿ ಸಣ್ಣಪುಟ್ಟ ಗಲಾಟೆ ನಡೆದಿದೆ. ಶಿವಮೊಗ್ಗದಲ್ಲಿ ಅತಿ ಹೆಚ್ಚು ಶೇ.76.23 ರಷ್ಟು ಮತದಾನವಾಗಿದ್ದು, ಕಲಬುರಗಿಯಲ್ಲಿ ಶೇ.61.02ರಷ್ಟು ಮತದಾನ ನಡೆದಿದೆ.
Advertisement
Advertisement
ಒಟ್ಟಿನಲ್ಲಿ ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ ಮುಗಿದಿದ್ದು, ಫಲಿತಾಂಶಕ್ಕಾಗಿ ಮೇ.23ರವರೆಗೆ ಅಂದ್ರೆ ಇನ್ನೂ ಒಂದು ತಿಂಗಳು ಕಾಯಬೇಕು. ಅಲ್ಲಿವರೆಗೆ ಸುಮಾರು 480 ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ರೂಮ್ನಲ್ಲಿರೋ ಇವಿಎಂ-ವಿವಿಪ್ಯಾಟ್ಗಳಲ್ಲಿ ಭದ್ರವಾಗಿ ಇಡಲಿದೆ.