ಬೆಂಗಳೂರು: ವಿಧಾನಸಭೆಯಲ್ಲಿ (Vidhan Sabha) ಮುಡಾ ಅಕ್ರಮದ (Muda Scam) ಚರ್ಚೆಗೆ ಮತ್ತೆ ಪ್ರತಿಪಕ್ಷಗಳ ಪಟ್ಟು ಹಿಡಿದಿದ್ದು ಬಿಜೆಪಿ-ಜೆಡಿಎಸ್ (BJP-JDS) ಪ್ರತಿಭಟನೆ ಮುಂದುವರಿಸಿವೆ.
ಕಲಾಪ ಆರಂಭವಾಗುತ್ತಿದ್ದಂತೆ ಒಂದೇ ಒಂದು ಗಂಟೆಗೆ ಚರ್ಚೆಗೆ ಕೊಡಿ ಎಂದು ಬಿಜೆಪಿ ಶಾಸಕರು ಆಗ್ರಹಿಸಿದರು. ಇದೇ ವೇಳೆ ತುಳು ಭಾಷೆಯಲ್ಲಿ ಮಾತನಾಡಿ ಸ್ಪೀಕರ್‌ಗೆ ಚರ್ಚೆಗೆ ಕೇಳಿದ ಸುನೀಲ್ ಕುಮಾರ್ (Sunil Kumar) ತುಳುವಿನಲ್ಲಿ ಮಾತನಾಡಿ ಇಲ್ಲಿ ಚರ್ಚೆಗೆ ಕೊಟ್ಟರೇ ಏನು ಸಮಸ್ಯೆ ಎಂದರು.
ಇದಕ್ಕೆ ಏನು ಸಮಸ್ಯೆ ಇಲ್ಲ ಎಂದು ತುಳುವಿನಲ್ಲೇ ಸ್ಪೀಕರ್ ಖಾದರ್ (UT Khader) ಉತ್ತರ ನೀಡಿದ್ರೂ ಚರ್ಚೆಗೆ ಅವಕಾಶ ಕೊಡಲಿಲ್ಲ. ನಾನು ಹೇಳಿದ ಹಾಗೆ ಕೇಳಿದರೆ ನಿಮಗೆ ಏನು ಸಮಸ್ಯೆ ಎಂದು ತುಳುವಿನಲ್ಲೇ ಸ್ಪೀಕರ್ ಮರು ಪ್ರಶ್ನೆ ಹಾಕಿದ್ರು. ಈ ವೇಳೆ ಯಾವುದೋ ಭಾಷೆಯಲ್ಲಿ ಮಾತಾಡುತ್ತಿದ್ದೀರಾ ಎಂದ ಆಡಳಿತ ಪಕ್ಷದ ಕೆಲ ಶಾಸಕರು ಕಿಚಾಯಿಸಿದ್ರು. ಯಾವುದೋ ಅಲ್ಲ, ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ ಇರುವ ತುಳು ಭಾಷೆ ಎಂದ ಸ್ಪೀಕರ್ ಸಮರ್ಥಿಸಿಕೊಂಡರು. ಇದನ್ನೂ ಓದಿ: Paris Olympics 2024 | ಕ್ರೀಡೆಗಳ ಮಹಾಸಂಗಮ; ಒಲಿಂಪಿಯಾ ಬೆಟ್ಟದಲ್ಲಿ ಹುಟ್ಟಿದ ಕ್ರೀಡೆ ವಿಶ್ವವಿಖ್ಯಾತಿಯಾಗಿದ್ದು ಹೇಗೆ?
ವಿರೋಧ ಪಕ್ಷಗಳ ಧರಣಿ ನಡುವೆಯೇ ಕಲಾಪ ಕಾರ್ಯಕಲಾಪಗಳನ್ನು ನಡೆಸಿದ ಸ್ಪೀಕರ್, ವಿಧೇಯಕಗಳ ಅಂಗೀಕಾರ ಪ್ರಸ್ತಾವನೆಯನ್ನು ಮುಗಿಸಿದರು. ವಿರೋಧ ಪಕ್ಷಗಳ ಗದ್ದಲದ ನಡುವೆಯೇ 6 ವಿಧೇಯಕಗಳ ಅಂಗೀಕಾರ, ನಾಲ್ಕು ನಿರ್ಣಯಗಳ ಅಂಗೀಕಾರವೂ ನಡೆಯಿತು. ಅಂತಿಮವಾಗಿ ಕಲಾಪವನ್ನ ಮಧ್ಯಾಹ್ನಕ್ಕೆ ಮುಂದೂಡಿದರು.
ಅಂಗೀಕಾರಗೊಂಡ 6 ವಿಧೇಯಕಗಳು
>.ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ತ್ವ ಸ್ಥಳಗಳ ಮತ್ತು ಅವಶೇಷಗಳ ತಿದ್ದುಪಡಿ ವಿಧೇಯಕ-2024 ಅಂಗೀಕಾರ
>.ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ ತಿದ್ದುಪಡಿ ವಿಧೇಯಕ ಅಂಗೀಕಾರ
>.ಶ್ರೀ ರೇಣುಕಾಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ-2024 ಅಂಗೀಕಾರ
>.ಕರ್ನಾಟಕ ಭೂ ಕಂದಾಯ ಎರಡನೇ ತಿದ್ದುಪಡಿ- 2024 ವಿಧೇಯಕ ಅಂಗೀಕಾರ
>.ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು ತಿದ್ದುಪಡಿ ವಿಧೇಯಕ- 2024 ಅಂಗೀಕಾರ
>.ಕರ್ನಾಟಕ ಸರ್ಕಾರಿ ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ 2024 ಅಂಗೀಕಾರ