ಬೆಂಗಳೂರು: ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ವಿರುದ್ಧ ಕೋಟಾ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ನಿಯಮ 68 ರಲ್ಲಿ ವಿಧಾನ ಪರಿಷತ್ ನಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ಅವರು, ಕೋಮು ಗಲಭೆಗಳ ಕೊಲೆಗಳಾದಾಗ ಧರ್ಮ ಜಾತಿ ರಾಜಕಾರಣ ಮಾಡಬೇಡಿ. ಕುದ್ರೋಳಿ ದೇವಸ್ಥಾನಕ್ಕೆ ಸಂಘ ಪರಿವಾರದವರು ಬಂದು ಜನಾರ್ದನ ಪೂಜಾರಿ ಹಾಳಾಗಿದ್ದಾರೆ ಎಂದು ದಿನೇಶ್ ಅಮೀನ್ ಮಟ್ಟು ಮಾತಾನಾಡುತ್ತಾರೆ. ಮಾಧ್ಯಮ ಸಲಹೆಗಾರರು ಹೀಗೆ ಮಾತಾಡುವುದು ಸರಿಯಲ್ಲ ಎಂದು ಹೇಳಿದರು.
Advertisement
ಗೌರಿ ಹತ್ಯೆಗೈದವರನ್ನು ಹಿಡಿಯಬೇಕಾದವರು ರಾಜ್ಯ ಸರ್ಕಾರ. ಆದರೆ ಮಂಗಳೂರಿನಲ್ಲಿ ಮಾನವ ಸರಪಳಿ ಮಾಡಿ “ನಾನು ಗೌರಿ ನಾವೆಲ್ಲ ಗೌರಿ” ಎಂದು ಹೇಳುವುದು ಎಷ್ಟು ಸರಿ? ಅಧಿಕಾರ ನಿಮ್ಮ ಕೈಯಲ್ಲಿದ್ದು ನೀವೇ ಹಿಡಿಯಬೇಕು. ಗೌರಿಗೆ ಹೇಳಿದಂತೆ “ನಾನು ಸಂತೋಷ್, ನಾನು ಪರೇಸ್ ಮೆಸ್ತಾ” ಎಂಬುದಾಗಿ ಯಾಕೆ ಹೇಳುವುದಿಲ್ಲ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಉಡುಪಿ ಚಲೋ ವೇಳೆ ಗೋಮೂತ್ರ ಸಿಂಪಡಣೆ ಈಗ ಏಕಿಲ್ಲ: ಅಮೀನ್ ಮಟ್ಟು ವಿವಾದಾದ್ಮಕ ಪೋಸ್ಟ್
Advertisement
ಪರೇಶ್ ಮೆಸ್ತಾ ಸಾವು ಸಹಜ ಸಾವು ಎಂದು ಸರ್ಕಾರ ಹೇಳಿದೆ. ಸ್ಕ್ರೂ ಡ್ರೈವರ್ ನಿಂದ ಚುಚ್ಚಿ ಸಂತೋಷ್ ಕೊಲೆ ಮಾಡಲಾಗಿದೆ ಎಂದು ಎಂದು ಗೃಹ ಸಚಿವರು ಹೇಳ್ತಾರೆ. ನಮಗೆ ದೀಪಕ್, ಬಷೀರ್ ಹತ್ಯೆ ಎರಡು ಒಂದೇ ಎಂದು ಹೇಳಿದರು. ಇದನ್ನೂ ಓದಿ: ಗೆದ್ರೆ ಖುಷಿಯಲ್ಲಿ, ಸೋತ್ರೆ ದು:ಖದಲ್ಲಿ ತಿನ್ನೋಣವೆಂದು 2 ಕೆಜಿ ಕಾಣೆ ಮೀನು ತಂದಿಟ್ಟುಕೊಂಡಿದ್ದೇನೆ- ಅಮೀನ್ ಮಟ್ಟು
Advertisement
ಮಂಗಳೂರು ಎಸ್.ಪಿ. ಸುಧೀಂದ್ರ ರೆಡ್ಡಿ ವರ್ಗಾವಣೆ ವಿಷಯ ಪ್ರಸ್ತಾಪಿಸಿದ ಅವರು ಸುಧೀಂದ್ರ ರೆಡ್ಡಿ ಅವರನ್ನು ವರ್ಗಾವಣೆ ಯಾಕೆ ಮಾಡಿದ್ರಿ? ಅಕ್ರಮ ಮರಳುಗಾರಿಕೆ ಮಾಡಿದ್ದಕ್ಕೆ ವರ್ಗಾವಣೆ ಮಾಡಿದ್ದೀರಿ. ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲ. ಪ್ರಾಮಾಣಿಕ ಅಧಿಕಾರಿಗಳನ್ನ ಎತ್ತಂಗಡಿ ಮಾಡಿತ್ತಿದ್ದೀರಿ ಎಂದು ಹೇಳಿ ಸರ್ಕಾರದ ವಿರುದ್ಧ ಪೂಜಾರಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ ಭಟ್ಟರ ಹಿಂದೂ ಧರ್ಮಕ್ಕೆ ಧಿಕ್ಕಾರ, ಮೋದಿ ದೊಡ್ಡ ಜಾದೂಗಾರ: ಅಮೀನ್ ಮಟ್ಟು