ಬೆಂಗಳೂರು: ಚುನಾವಣೆ ಜ್ವರ ಶುರುವಾಗ್ತಿದೆ. ಅದೇನೋ ಪಲ್ಸ್ ಗೊತ್ತಗೋತ್ತೋ ಏನೋ..? ಇಂಟರ್ನಲ್ ವರದಿಗಳನ್ನ ಪಡೆಯೋದ್ರಲ್ಲಿ ಶಾಸಕರು, ಪಕ್ಷಗಳು ತುಂಬಾ ಬ್ಯುಸಿಯಾಗಿವೆ. ಬಿಜೆಪಿಯಲ್ಲೂ ಇಂಟರ್ನಲ್ ರಿಪೋರ್ಟ್ ಪಡೆಯುತ್ತಿದ್ದಾರೆ. ಒಂದು ವರದಿ ಪ್ರಕಾರ ಘಟಾನುಘಟಿಗಳು, ಫಸ್ಟ್ ಟೈಂ ಎಲೆಕ್ಟ್ ಆಗಿರುವವರ ಕ್ಷೇತ್ರಗಳಲ್ಲಿ ವಿರೋಧಿ ಅಲೆ ತಟ್ಟುವ ಮುನ್ಸೂಚನೆ ಇದೆ. ಈಗಲೇ ಅದನ್ನ ಬಗೆಹರಿಸಿಕೊಂಡ್ರೆ ಒಳ್ಳೆಯದು ಎಂದು ವರದಿಯೊಂದು ಹೇಳಿದೆ ಎನ್ನಲಾಗಿದೆ.
ಬಿಜೆಪಿಯ ಆಂತರಿಕ ವಲಯದ ವರದಿಯಲ್ಲಿ ಉಲ್ಲೇಖವಾಗಿರುವ ಬಗ್ಗೆ ನಾನಾ ಚರ್ಚೆಗಳು ನಡೆಯುತ್ತಿದೆ. ಆ ವರದಿಯಲ್ಲಿ ಕೆಲ ಲೋಪಗಳನ್ನ ಸಹ ಗುರುತಿಸಿದ್ದು, ಕ್ಯಾಸ್ಟ್ ಕಾಂಬಿನೇಶನ್ ಸರಿಪಡಿಸಿಕೊಳ್ಳಬೇಕು, ವಿರೋಧಿ ಅಲೆ ಶುರುವಾಗುವ ಸುಳಿವು ಸಿಕ್ಕರೆ ಮೋದಿ ಅಭಿವೃದ್ದಿ ಅಜೆಂಡಾ ಬಿತ್ತಬೇಕೆಂಬ ಸಲಹೆ ವರದಿಯಲ್ಲಿ ಉಲ್ಲೇಖವಾಗಿದೆ ಎನ್ನಲಾಗಿದೆ. ಅಲ್ಲದೆ ಹೊಸದಾಗಿ ಗೆದ್ದವರ ಕ್ಷೇತ್ರಗಳ ಮೇಲೂ ನಿಗಾ ಇಡಲು ಸೂಚಿಸಿದೆ ಎನ್ನಲಾಗಿದೆ. ಹಾಗಾಗಿ ಆಂತರಿಕ ವರದಿ ಬಿಜೆಪಿ ಹೈಕಮಾಂಡ್ ಅಂಗಳಕ್ಕೂ ತಲುಪಿಲಿದ್ದು, ಕ್ಷೇತ್ರಗಳ ಸುಧಾರಣೆಗೆ ವಿಶೇಷ ಟಾಸ್ಕ್ ಕೊಡುವ ಸಾಧ್ಯತೆ ಇದೆ. ಇದನ್ನೂ ಓದಿ: ಭಾರೀ ಮಳೆಗೆ ಪಂಜ-ಉಳ್ಯ ಜಲಾವೃತ – ಆತಂಕದಲ್ಲಿ ಕೃಷಿಕರು
Advertisement
Advertisement
ಇಂಟರ್ನಲ್ ವರದಿಯಲ್ಲಿ ಏನಿದೆ?
2018ರಲ್ಲಿ ಬಿಜೆಪಿ ಗೆದ್ದಿರುವ ಕೆಲವು ಕ್ಷೇತ್ರಗಳಲ್ಲಿ ಕುಗ್ಗುತ್ತಿರುವ ಲಕ್ಷಣ ಇದೆ. ಮೊದಲ ಸಲ ಗೆದ್ದವರ ಕೆಲ ಕ್ಷೇತ್ರಗಳಲ್ಲೂ ವಿರೋಧಿ ಅಲೆ ಎದ್ದೇಳುತ್ತಿದೆ. ಘಟಾನುಘಟಿ ನಾಯಕರೆನ್ನಿಸಿಕೊಂಡಿರುವ ಕ್ಷೇತ್ರಗಳು ಅಷ್ಟು ಸುಲಭ ಇಲ್ಲ. ಬೆಂಗಳೂರಿನ 2 ಕ್ಷೇತ್ರಗಳು, ಹಳೇ ಮೈಸೂರಿನ 6 ಕ್ಷೇತ್ರಗಳಲ್ಲಿ ವೀಕ್ ಇದೆ. ಕರಾವಳಿಯ 4 ಕ್ಷೇತ್ರಗಳು, ಮುಂಬೈ ಕರ್ನಾಟಕದ 8 ಕ್ಷೇತ್ರಗಳ ಮೇಲೆ ಎಚ್ಚರವಹಿಸಿ. ಹೈದರಾಬಾದ್ ಕರ್ನಾಟಕದ 5, ಮಧ್ಯಕರ್ನಾಟಕದ 8 ಕ್ಷೇತ್ರಗಳತ್ತ ಗಮನಹರಿಸಿ. ವಿರೋಧಿ ಅಲೆ ಸೃಷ್ಟಿಯಾಗಬಹುದೆಂಬ ಮುನ್ಸೂಚನೆ ಕಡೆ ಮೋದಿ ಜಪ ಅಗತ್ಯ. ಜಾತಿ ಸಮೀಕರಣವನ್ನ ಈ ಕ್ಷೇತ್ರಗಳಲ್ಲಿ ಬಲಪಡಿಸಬೇಕಾದ ಅಗತ್ಯತೆಯೂ ಇದೆ. ಕೆಲ ಕ್ಷೇತ್ರಗಳಲ್ಲಿ ಪರ್ಯಾಯ ಮಾರ್ಗವನ್ನೂ ಕಂಡುಕೊಳ್ಳುವತ್ತ ಯೋಚನೆ ಮಾಡಬೇಕು.