ಬೆಂಗಳೂರು: ಚೀನಾದಲ್ಲಿ ನ್ಯೂಮೋನಿಯಾ (China pneumonia) ಪ್ರಕರಣ ಹೆಚ್ಚಿದ ಬೆನ್ನಲ್ಲೇ ಕೇಂದ್ರ ಸರ್ಕಾರ (Union Govt) ಎಲ್ಲಾ ರಾಜ್ಯಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿತ್ತು. ಈ ಬೆನ್ನಲ್ಲೇ ಕರ್ನಾಟಕ (Karnataka) ಸೇರಿ ಆರು ರಾಜ್ಯಗಳು ಅಲರ್ಟ್ ಆಗಿವೆ. ಸೀಸನಲ್ ಫ್ಲೂ ಬಗ್ಗೆ ಜನ ಜಾಗೃತರಾಗಿ ಇರಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದೆ.
Considering the surge in respiratory illness in China, WHO has released a general advisory for people. I request the public to follow the instructions, know the Dos and Don’ts and take measures to prevent influenza.
If symptoms aggravate, please visit your nearest Government… pic.twitter.com/rRxxUmqK3r
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 28, 2023
Advertisement
ಸೀಸನಲ್ ಫ್ಲೂ ಲಕ್ಷಣಗಳನ್ನು ವಿವರಿಸುತ್ತಾ ಮಾರ್ಗಸೂಚಿಯೊಂದನ್ನು ಪ್ರಕಟಿಸಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸಬೇಕು. ಪದೇ ಪದೇ ಕೈ ತೊಳೆಯಬೇಕು ಎಂದು ಕೋವಿಡ್ (Covid) ಮಾದರಿಯಲ್ಲೇ ಸಲಹೆ ಸೂಚನೆಗಳನ್ನು ನೀಡಿದೆ. ಕೇಂದ್ರದ ಅಲರ್ಟ್ ಬೆನ್ನಲ್ಲೇ ಇಂದು ಆರೋಗ್ಯ ಮಂತ್ರಿ ದಿನೇಶ್ ಗುಂಡೂರಾವ್ (Dinesh Gundu Rao) ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಡಿಹೆಚ್‌ಓಗಳ ಜೊತೆ ಚರ್ಚೆ ನಡೆಸಿದರು. ಇದನ್ನೂ ಓದಿ: ತಂಬಾಕು ಚೀಲಗಳಲ್ಲಿ ತುಂಬಿ ದಾಖಲೆ ಇಲ್ಲದೆ ಸಾಗಿಸ್ತಿದ್ದ 8 ಕೋಟಿ ಹಣ ಜಪ್ತಿ
Advertisement
ಕರ್ನಾಟಕ ಮಾದರಿಯಲ್ಲಿಯೇ ರಾಜಸ್ಥಾನ, ಉತ್ತರಾಖಂಡ್, ಹರಿಯಾಣ, ತಮಿಳುನಾಡು, ಗುಜರಾತ್ ಸರ್ಕಾರಗಳು ಕೂಡ ಮಾರ್ಗಸೂಚಿ ಪ್ರಕಟಿಸಿವೆ.