ಬೆಂಗಳೂರು: ಬಹುಮತ ಸಾಬೀತು ಮಾಡಲು ಸಿಎಂ ಕುಮಾರಸ್ವಾಮಿ ಅವರು ಸದನದಲ್ಲಿ ಪ್ರಸ್ತಾಪ ಸಲ್ಲಿಸಿದ್ದರು. ಆದರೆ ಇಂದು ವಿಶ್ವಾಸ ಮತಯಾಚನೆಗೆ ಮುಂದಾಗದೇ ಬಹುಮತ ಸಾಬೀತು ಮಾಡಲು ನಿಯಮಗಳ ಹೆಸರು ಹೇಳಿ ಅನಗತ್ಯ ಚರ್ಚೆ ಮಾಡುತ್ತಾರೆ. ಆದ್ದರಿಂದ ನಾವು ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸ ಮತಯಾಚನೆ ಮಾಡದೇ ಕಾಲದೂಡಲು ಚರ್ಚೆಗೆ ಸ್ಪೀಕರ್ ಅವರ ಅನುಮತಿಯೊಂದಿಗೆ ಚರ್ಚೆಗೆ ದಾರಿ ಮಾಡಿದ್ದಾರೆ. ಸಿದ್ದರಾಮಯ್ಯ, ಕೃಷ್ಣಬೈರೇಗೌಡ, ಎಚ್‍ಕೆ ಪಾಟೀಲ್ ಅವರು ರೂಲ್ ಮುಂದೂಡಲು ಮನವಿ ಮಾಡಿದ್ದಾರೆ. ಆದರೆ ಇದು ಬಹುಮತ ಸಾಬೀತು ಮಾಡಲು ತಡವಾಗಲಿದೆ. ಆದ್ದರಿಂದಲೇ ನಾವು ಈ ಕ್ರಮವನ್ನು ಕೈಗೊಂಡಿದ್ದೇವೆ ಎಂದರು. ಅವರಿಗೆ ಕೋರ್ಟ್ ಅಭಿಪ್ರಾಯದ ಬಗ್ಗೆ ಅನುಮಾನ ಇದ್ದರೆ ಕೋರ್ಟಿಗೆ ತೆರಳಬೇಕು ವಿನಾ: ಸದನದಲ್ಲಿ ಅನಗತ್ಯ ಚರ್ಚೆ ನಡೆಸುವುದು ಸೂಕ್ತವಲ್ಲ ಎಂದರು.
Advertisement
Advertisement
ಮುಖ್ಯಮಂತ್ರಿಗಳು ವಿಶ್ವಾಸಮತ ಎಂದು ಚರ್ಚೆಯನ್ನು ಪ್ರಾರಂಭ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ, ಕುಮಾರಸ್ವಾಮಿ ಬೇರೆ ಬೇರೆ ವಿಚಾರಕ್ಕೆ ಚರ್ಚೆ ನಡೆಸುತ್ತಿದ್ದಾರೆ. ಈ ರೀತಿ ಆಡಳಿತ ಪಕ್ಷ ಮಾಡುವಂತಿಲ್ಲ, ಆಡಳಿತ ಪಕ್ಷ ಗಿಮಿಕ್ ಮಾಡುತ್ತಿದ್ದು, ಬಹುಮತ ಸಾಬೀತು ಪಡಿಸುವ ಕ್ರಮವನ್ನು ತಡ ಮಾಡುತ್ತಿದ್ದಾರೆ ಎಂಬ ಭಯ ನಮಗೆ ಕಾಡುತ್ತಿದೆ. ಹಾಗಾಗಿ ವಿಶ್ವಾಸ ಮತ ಸಾಬೀತು ಮಾಡಬೇಕು ಎಂದು ಸ್ಪೀಕರ್ ಅವರಿಗೂ ಮನವಿ ಮಾಡಿದ್ದೇವೆ. ಆದರೆ ಸ್ಪೀಕರ್ ಅವರು ಸರ್ಕಾರ ಉಳಿಸುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.
Advertisement
Advertisement
ಸದ್ಯ ಸ್ಪೀಕರ್ ಅವರಿಗೆ ನಿರ್ದೇಶನ ಮಾಡಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಆ ಮೂಲಕ ರಾಜ್ಯಪಾಲರು ಸ್ಪೀಕರ್ ಅವರಿಗೆ ಮಾಡಿ ಬೇಗ ವಿಶ್ವಾಸ ಮತ ಸಾಬೀತು ಪಡಿಸಬೇಕು ಎಂಬುದು ನಮ್ಮ ಒತ್ತಾಯ ಎಂದರು. ಇದುವರೆಗೂ ಕರ್ನಾಟಕದ ಇತಿಹಾಸದಲ್ಲಿ 7 ಬಾರಿ ವಿಶ್ವಾಸ ಮತಯಾಚನೆ ಮಾಡಿದ್ದಾರೆ. ಎಲ್ಲಾ ಸಂದರ್ಭದಲ್ಲೂ 1 ದಿನದಲ್ಲೇ ಚರ್ಚೆಯೊಂದಿಗೆ ನಿರ್ಧಾರ ಮಾಡಿ ಮತಕ್ಕೆ ಹಾಕಲಾಗಿತ್ತು. ಆದರೆ ಇಂದು ಸಂಖ್ಯಾ ಬಲ ಇಲ್ಲದ ಸರ್ಕಾರವನ್ನು ಉಳಿಸಲು ಎಲ್ಲರೂ ಪ್ರಯತ್ನ ನಡೆಸುತ್ತಿದ್ದಾರೆ.