ಕರ್ನಾಟಕದಲ್ಲಿ ಮತ್ತೆ ನೈಟ್ ಕರ್ಫ್ಯೂಗೆ ಚಿಂತನೆ

Public TV
1 Min Read
NIGHT CURFEW 2 1

ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ಕೇಸ್‍ಗಳ ಸಂಖ್ಯೆ ಏರಿಕೆ ಕಾಣುತ್ತಿದ್ದಂತೆ ಇತ್ತ ಹೊಸವರ್ಷ ಸನಿಹದಲ್ಲಿದೆ. ಜನ ಹೊಸ ವರ್ಷಾಚರಣೆಗೆಂದು ಗುಂಪುಗೂಡಿ ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚಾಗುವ ಮುನ್ನಾ ಕರ್ನಾಟಕ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

NIGHT CURFEW 4 1

ಕೇಂದ್ರ ಸರ್ಕಾರದ ಸೂಚನೆಯ ಬೆನ್ನಲ್ಲೇ ಟಫ್ ರೂಲ್ಸ್ ಜಾರಿಗೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದ್ದು, ನಿನ್ನೆಯಿಂದ ಟಫ್ ರೂಲ್ಸ್ ಜಾರಿ ಮಾಡಿದೆ. ಹೊಸ ವರ್ಷ, ಮದುವೆ ಸೀಸನ್, ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ನೈಟ್ ಕರ್ಫ್ಯೂ, ನಿಷೇಧಾಜ್ಞೆ ಹೊರಡಿಸಿದೆ. ಜೊತೆಗೆ ಸಭೆ ಸಮಾರಂಭಕ್ಕೆ 100 ರಿಂದ 250 ಜನರಿಗಷ್ಟೇ ಅವಕಾಶ, ಪಬ್ ಬಾರ್‌ಗಳಿಗೆ ಕಠಿಣ ನಿಯಮ ಮತ್ತು ಜಿಮ್, ಥಿಯೇಟರ್‌ಗಳಿಗೆ ಮಹಾ ಸರ್ಕಾರ ಅಂಕುಶ ಹಾಕಿದೆ. ಇದನ್ನೂ ಓದಿ: ಕೋವಿಡ್ ಫೈನ್ – 2 ದಿನಗಳಲ್ಲಿ 1.5 ಕೋಟಿ ರೂ. ಸಂಗ್ರಹ

KAMAL PANTH

ಈಗಾಗಲೇ ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷ ಆಚರಣೆಗೆ ಅವಕಾಶ ಇಲ್ಲ. ಹೊಸವರ್ಷಾರಣೆ ದಿನ ಪಬ್, ಬಾರ್‌ಗಳಲ್ಲಿ ವಿಶೇಷ ಕಾರ್ಯಕ್ರಮಕ್ಕೆ ಅವಕಾಶ ನಿರಾಕರಿಸಲಾಗಿದ್ದು, ಎಂಜಿರೋಡ್, ಬ್ರೀಗೆಡ್ ರೋಡ್‍ನಲ್ಲಿ ಸಂಭ್ರಮಾಚರಣೆಗೆ ನಿಷೇಧ ಹೇರುವ ಬಗ್ಗೆ ಸರ್ಕಾರದಿಂದ ಆದೇಶ ಜಾರಿ ಮಾಡಲಾಗುತ್ತೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಬಟ್ಟೆ ಮಾಸ್ಕ್ ಬೇಡ.. ಎನ್95, ಕೆ95 ಮಾಸ್ಕ್‌ಗಳನ್ನೇ ಬಳಸಿ – ತಜ್ಞರ ಸಲಹೆ

ಈ ನಡುವೆ ಬೆಂಗಳೂರು ಸಹಿತ ರಾಜ್ಯದ್ಯಾಂತ ಡಿ.30 ರಿಂದ ಜ.1ರ ವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲು ಸಿದ್ಧತೆ ಮಾಡಿಕೊಂಡಿದೆ ಎಂದು ಮೂಲಗಳಿಂದ ವರದಿಯಾಗಿದ್ದು, ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

Share This Article