ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆ ರಾಜ್ಯದಲ್ಲಿ 2 ಹಂತದಲ್ಲಿ ನಡೆಯಲಿದೆ. ಮೇ 18 ಹಾಗೂ 23ರಂದು ಚುನಾವಣೆ ನಡೆಯಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಕಲಬುರಗಿ, ರಾಯಚೂರು ಹಾಗೂ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ ಮತದಾನ ನಡೆದಿತ್ತು.
ಬೆಂಗಳೂರು ಕೇಂದ್ರ
8 ವಿಧಾನಸಭಾ ಕ್ಷೇತ್ರಗಳಿರುವ ಬೆಂಗಳೂರು ಸೆಂಟ್ರಲ್ ನಲ್ಲಿ 1,956 ಮತದಾನದ ಕೇಂದ್ರಗಳಿತ್ತು. ಇಲ್ಲಿ 19,31,456 ಮಂದಿ ಮತದಾರರಿದ್ದರು. ಇದು ಅತೀ ಕಡಿಮೆ ಮತದಾನವಾಗಿರುವ ಕ್ಷೇತ್ರದಲ್ಲಿ ಮೊದಲನೆಯದಾಗಿದ್ದು, ಇಲ್ಲಿ 28 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದರು. 26 ಮಂದಿ ಸ್ಪರ್ಧಿಸಿದ್ದರು. ಇದರಲ್ಲಿ 24 ಮಂದಿ ಠೇವಣಿ ಕಳೆದುಕೊಂಡಿದ್ದರು. ಈ ಕ್ಷೇತ್ರಗಳಲ್ಲಿ 10,74,602 ಮಂದಿ ಮತದಾನಗೈದಿದ್ದು, ಶೇ. 55.64ರಷ್ಟು ಮತದಾನವಾಗಿತ್ತು.
Advertisement
Advertisement
ಬೆಂಗಳೂರು ದಕ್ಷಿಣ:
ಬೆಂಗಳೂರು ದಕ್ಷಿಣದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಇದು ಅತ್ಯಂತ ಕಡಿಮೆ ಮತದಾನವಾಗಿರುವ ಎರಡನೇ ಕ್ಷೇತ್ರವಾಗಿದೆ. ಇಲ್ಲಿ 1,926 ಮತದಾನ ಕೇಂದ್ರಗಳಿತ್ತು. ಈ ಕ್ಷೇತ್ರಗಳಲ್ಲಿ 19,98,724 ಮತದಾರರಿದ್ದರು. ಇಲ್ಲಿ 28 ಮಂದಿ ನಾಮಪತ್ರ ಸಲ್ಲಿಸಿದ್ದು, 23 ಮಂದಿ ಸ್ಪರ್ಧಿಸಿದ್ದರು. ಅಲ್ಲದೆ 21 ಮಂದಿ ತಮ್ಮ ಠೇವಣಿ ಕಳೆದುಕೊಂಡಿದ್ದರು. ಚುನಾವಣೆಯಲ್ಲಿ ಒಟ್ಟು 11,14,359 ಮತದಾನ ಮಾಡಿದ್ದು, ಶೇ. 55.75 ರಷ್ಟು ಮತದಾನವಾಗಿತ್ತು.
Advertisement
ಕಲಬುರಗಿ:
ಕಲಬುರಗಿಯು ಅತೀ ಕಡಿಮೆ ಮತದಾನ ಮಾಡಿರುವ ಕ್ಷೇತ್ರಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಒಟ್ಟು 8 ವಿಧಾನಸಭಾ ಕ್ಷೇತ್ರಗಳಿರುವ ಕಲಬುರಗಿಯಲ್ಲಿ 1,946 ಮತದಾನ ಕೇಂದ್ರಗಳಿತ್ತು. ಇಲ್ಲಿ 17,21,990 ಮತದಾರರಿದ್ದರು. ಹಾಗೂ 17 ಮಂದಿ ನಾಮಪತ್ರ ಸಲ್ಲಿಸಿದ್ದರು. ಹಾಗೆಯೇ 8 ಮಂದಿ ಸ್ಪರ್ಧೆ ಮಾಡಿ 6 ಮಂದಿ ತಮ್ಮ ಠೇವಣಿ ಕಳೆದುಕೊಂಡಿದ್ದರು. ಈ ಕ್ಷೇತ್ರಗಳಲ್ಲಿ ಒಟ್ಟು 9,98,086 ಮತದಾನ ಮಾಡಿದ್ದು, ಶೇ. 57.96 ರಷ್ಟು ಮತದಾನವಾಗಿತ್ತು.
Advertisement
ರಾಯಚೂರು:
ನಾಲ್ಕನೇ ಸ್ಥಾನದಲ್ಲಿರುವ ರಾಯಚೂರು ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 1, 878 ಮತದಾನ ಕೇಂದ್ರಗಳಿತ್ತು. 16,61,606 ಮತದಾರರಿದ್ದರು. ಈ ಕ್ಷೇತ್ರಗಳಲ್ಲಿ 13 ಮಂದಿ ನಾಮಪತ್ರ ಸಲ್ಲಿಸಿದ್ದು, 11 ಮಂದಿ ಸ್ಪರ್ಧಿಸಿದ್ದರು. ಅದರಲ್ಲಿ 9 ಮಂದಿ ತಮ್ಮ ಠೇವಣಿ ಕಳೆದುಕೊಂಡಿದ್ದರು. ಕ್ಷೇತ್ರಗಳಲ್ಲಿ ಒಟ್ಟು 9,69,047 ಮಂದಿ ಮತದಾನ ಮಾಡಿದ್ದು, ಶೇ. 58.32 ರಷ್ಟು ಮತದಾನವಾಗಿತ್ತು.
ಬಿಜಾಪುರ:
ಅತೀ ಕಡಿಮೆ ಮತದಾನವಾಗಿರುವ ಕ್ಷೇತ್ರದಲ್ಲಿ 5ನೇ ಸ್ಥಾನದಲ್ಲಿರುವ ವಿಜಯಪುರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿಳಲ್ಲಿ 1,869 ಮತದಾನ ಕೇಂದ್ರಗಳಿತ್ತು. ಈ ಕ್ಷೇತ್ರಗಳಲ್ಲಿ 16,22,635 ಮತದಾರರಿದ್ದರು. ಇನ್ನು ಇಲ್ಲಿ 17 ಮಂದಿ ನಾಮಪತ್ರ ಸಲ್ಲಿಸಿದ್ದು, 14 ಮಂದಿ ಸ್ಪರ್ಧೆ ಮಾಡಿದ್ದರು. ಅದರಲ್ಲಿ 12 ಮಂದಿ ಠೇವಣಿ ಕಳೆದುಕೊಂಡಿದ್ದರು. ಇಲ್ಲಿ 9,66,797 ಮಂದಿ ಮತದಾನ ಮಾಡಿದ್ದು, ಶೇ.59.58 ರಷ್ಟು ಮತದಾನವಾಗಿತ್ತು. ಇದನ್ನೂ ಓದಿ: 2014ರ ಚುನಾವಣೆಯಲ್ಲಿ ಅತೀ ಹೆಚ್ಚು ಮತದಾನವಾಗಿರುವ ಕ್ಷೇತ್ರಗಳ ವಿವರ ಇಲ್ಲಿದೆ