ಆರ್‌ಸಿಬಿ ಗೆಲುವಿನ ನಶೆಯಲ್ಲಿ ತೇಲಿದ ಫ್ಯಾನ್ಸ್‌ – ಒಂದೇ ದಿನ 157 ಕೋಟಿ ಎಣ್ಣೆ ಸೇಲ್

Public TV
1 Min Read
rcb celebration 1

ಬೆಂಗಳೂರು: ಐಪಿಎಲ್‌ 2025ರ (IPL 2025) ಟ್ರೋಫಿಗಾಗಿ ನಡೆದ ಮಂಗಳವಾರ ನಡೆದ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ (RCB) ಗೆಲುವಿನ ನಶೆಯಲ್ಲಿ ಫ್ಯಾನ್ಸ್‌ ತೇಲಾಡಿದ್ದಾರೆ. ಫೈನಲ್‌ ಮ್ಯಾಚ್‌ ದಿನ ರಾಜ್ಯದಲ್ಲಿ ದಾಖಲೆಯ ಮದ್ಯ ಮಾರಾಟವಾಗಿದೆ.

ಜೂನ್ 3 ರಂದು, 1.48 ಲಕ್ಷ ಬಾಟಲ್ ಬಿಯರ್ ಬಾಕ್ಸ್‌ಗಳು ಮಾರಾಟವಾಗಿದ್ದು, 30.66 ಕೋಟಿ ರೂ. ವಹಿವಾಟು ನಡೆದಿದೆ. ಕಳೆದ ವರ್ಷ ಇದೇ ದಿನಾಂಕದಂದು ಕೇವಲ 0.36 ಲಕ್ಷ ಬಾಕ್ಸ್‌ಗಳು ಮಾರಾಟವಾಗಿ, 6.29 ಕೋಟಿ ರೂ. ಆದಾಯ ಬಂದಿತ್ತು. ಈ ಬಾರಿ ಆರ್‌ಸಿಬಿ ಫೈನಲ್‌ಗೆ ತಲುಪಿದ ಖುಷಿಯಲ್ಲಿದ್ದ ಫ್ಯಾನ್ಸ್‌ ಎಣ್ಣೆ ಕಿಕ್‌ನಲ್ಲಿ ಮಿಂದೆದ್ದಿದ್ದಾರೆ. ಇದನ್ನೂ ಓದಿ: ಐಪಿಎಲ್‌ ಟ್ರೋಫಿ ಒಳಗಡೆ ಏನಿದೆ – ಚೆಕ್‌ ಮಾಡಿ ನೋಡಿದ ಕೊಹ್ಲಿ

virat kohli kannada flag

ಬಿಯರ್‌ ಅಷ್ಟೇ ಅಲ್ಲ, ಇತರ ಆಲ್ಕೋಹಾಲ್‌ಯುಕ್ತ ಮದ್ಯಗಳು ಕೂಡ ಭರ್ಜರಿಯಾಗಿ ಸೇಲ್‌ ಆಗಿವೆ. 127.88 ಕೋಟಿ ರೂ. ಮೌಲ್ಯದ 1.28 ಲಕ್ಷ ಬಾಕ್ಸ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ದಿನ ಮದ್ಯ ಮಾರಾಟದಿಂದ ಕೇವಲ 19.41 ಕೋಟಿ ರೂ.ಬಂದಿತ್ತು.

ಒಟ್ಟಾರೆಯಾಗಿ, ಮಂಗಳವಾರ ಒಂದು ದಿನದಲ್ಲಿ ರಾಜ್ಯವು ಮದ್ಯ ಮಾರಾಟದಿಂದ 157.94 ಕೋಟಿ ರೂ. ಗಳಿಸಿದೆ. ಹಿಂದಿನ ವರ್ಷದ ಜೂನ್‌ 3 ರಂದು ಒಟ್ಟು 25 ಕೋಟಿ ರೂ. ಮಾತ್ರ ಬಂದಿತ್ತು. 132.24 ಕೋಟಿ ರೂ.ಗಳ ಹೆಚ್ಚಳವಾಗಿದೆ. ಇದನ್ನೂ ಓದಿ: ಆರ್‌ಸಿಬಿ ಫ್ಯಾನ್ಸ್‌ಗೆ ಚಾಂಪಿಯನ್ ಟ್ರೋಫಿ ತೋರಿಸಿ ಖುಷಿಪಟ್ಟ ಕಿಂಗ್ ಕೊಹ್ಲಿ

RCB Team

ಐಪಿಎಲ್‌ ಪ್ರಾರಂಭವಾದ 18 ವರ್ಷಗಳ ನಂತರ ಇದು ಆರ್‌ಸಿಬಿಯ ಮೊದಲ ಐಪಿಎಲ್ ಗೆಲುವು. ಆರ್‌ಸಿಬಿ ಅಂತಿಮವಾಗಿ ಐಪಿಎಲ್ 2025 ಅನ್ನು ಗೆದ್ದಂತೆ, ಬೆಂಗಳೂರು ರೆಡ್‌ ಕಾರ್ಪೆಟ್‌ನಲ್ಲಿ ಮಿಂಚಿತು. ಅಭಿಮಾನಿಗಳು ಬೀದಿಗಿಳಿದು ‘ಆರ್‌ಸಿಬಿ.. ಕೊಹ್ಲಿ’, ‘ಈ ಸಲ ಕಪ್ ನಮ್ದು’ ಎಂದು ಘೋಷಣೆ ಕೂಗಿ ಸಂಭ್ರಮಿಸುತ್ತಿದ್ದಾರೆ. ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ಇಂದು ಬೆಂಗಳೂರಿಗೆ ಬಂದಿಳಿದಿದ್ದು, ವಿಜಯೋತ್ಸವ ಆಚರಿಸಲು ಮುಂದಾಗಿದೆ.

Share This Article