ಬೆಂಗಳೂರು: ಪಿಯುಸಿ ಪರೀಕ್ಷೆಗೆ (PUC Exam) ಸರ್ಕಾರ ಹೊಸ ಅಂಕ ಮಾದರಿ ಜಾರಿಗೊಳಿಸಿದೆ. 2023-24ನೇ ಸಾಲಿನ ವರ್ಷದಿಂದಲೇ ಹೊಸ ನಿಯಮ ಜಾರಿಗೆ ಬರಲಿದೆ. ಪ್ರಾಯೋಗಿಕ ಪರೀಕ್ಷೆ (Practical Exam) ಇಲ್ಲದ ವಿಷಯಗಳಿಗೆ ಇನ್ನು ಮುಂದೆ 20 ಆಂತರಿಕ ಅಂಕ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಭಾಷಾ ವಿಷಯಗಳು ಮತ್ತು ಕೋರ್ ಸಬ್ಜೆಕ್ಟ್‌ಗಳಿಗೆ ಈ ನಿಯಮ ಅನ್ವಯ ಆಗಲಿದೆ.
ಇಷ್ಟು ದಿನ ವಿಜ್ಞಾನ (Science) ವಿಷಯಗಳಿಗೆ 30 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿತ್ತು. 70 ಅಂಕಕ್ಕೆ ಥಿಯರಿ ಇತ್ತು. ಪ್ರಾಯೋಗಿಕ ಪರೀಕ್ಷೆ ಇಲ್ಲದೆ ವಿಷಯಗಳಿಗೆ ಇನ್ನು ಮುಂದೆ ಆಂತರಿಕ ಅಂಕ ನೀಡಲು ನಿರ್ಧಾರ ಮಾಡಲಾಗಿದೆ. 100 ಅಂಕಕ್ಕೆ ಇದ್ದ ನಿಯಮ ಬದಲಾವಣೆ ಮಾಡಿ 80 ಅಂಕ ಥಿಯರಿ, 20 ಆಂತರಿಕ ಅಂಕ ನೀಡುವ ನಿಯಮ ಜಾರಿ ಮಾಡಲಾಗಿದೆ.
ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿಗೆ ಈ ನಿಯಮ ಅನ್ವಯ ಆಗಲಿದೆ. ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿದ್ಯಾರ್ಥಿಗಳ ದೃಷ್ಟಿಯಿಂದ ಈ ನಿಯಮ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಂಗಾಳ ಪಂಚಾಯತ್ ಚುನಾವಣೆ ಮತ ಎಣಿಕೆ ವೇಳೆ ಮತ್ತೆ ಘರ್ಷಣೆ – ಕಚ್ಚಾಬಾಂಬ್ ಸ್ಫೋಟ
ಹೊಸ ನಿಯಮದಲ್ಲಿ ಏನಿದೆ?
ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ 20 ಅಂಕ ಆಂತರಿಕ ಅಂಕ ನೀಡಲಾಗುತ್ತದೆ. ಭಾಷಾ ವಿಷಯ ಮತ್ತು ಕೋರ್ ವಿಷಯಗಳಿಗೆ ಈ ನಿಯಮ ಅನ್ವಯ ಆಗಲಿದೆ. 2023-24ನೇ ಸಾಲಿನಿಂದಲೇ ಹೊಸ ನಿಯಮ ಜಾರಿ ಆಗಲಿದೆ.
ಪ್ರಾಯೋಗಿಕ ವಿಷಯಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಎಲೆಕ್ಟ್ರಾನಿಕ್, ಗಣಕ ವಿಜ್ಞಾನ, ಗೃಹ ವಿಜ್ಞಾನ, ಕರ್ನಾಟಕ, ಹಿಂದುಸ್ಥಾನಿ ಸಂಗೀತ ಮತ್ತು NSQF ವಿಷಯಗಳು, IT ಆಟೋಮೊಬೈಲ್, ರಿಟೇಲ್, ಬ್ಯೂಟಿ, ವೆಲ್ ನೆಸ್ ಕೋರ್ಸ್ ಗೆ ಈ ನಿಯಮ ಇಲ್ಲ. ಇವುಗಳಿಗೆ 70:30 ಅಂಕಗಳ ಮಾದರಿಯಲ್ಲಿ ಪರೀಕ್ಷೆ ಮುಂದುವರಿಯುತ್ತದೆ. 70 ಅಂಕ ಥಿಯರಿ, ಪ್ರಾಯೋಗಿಕ ಅಂಕ 30 ಮುಂದುವರಿಕೆ ಆಗಲಿದೆ. ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ 20 ಅಂತರಿಕ ಅಂಕ ನೀಡಲಾಗುತ್ತದೆ. 100 ಅಂಕಕ್ಕೆ ಇದ್ದ ಪರೀಕ್ಷೆ ಇನ್ನು ಮುಂದೆ 80 ಅಂಕ ಥಿಯರಿ, 20 ಆಂತರಿಕ ಅಂಕಗಳಲ್ಲಿ ನಡೆಯಲಿದೆ.
ಆಂತರಿಕ ಮೌಲ್ಯಮಾಪನ ನಿಯಮ ಹೇಗೆ?
ಒಂದನೇ ಕಿರು ಪರೀಕ್ಷೆ, 2 ನೇ ಕಿರುಪರೀಕ್ಷೆ ಹಾಗೂ ಮಧ್ಯ ವಾರ್ಷಿಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳಲ್ಲಿ ಉತ್ತಮವಾದ ಎರಡನ್ನು 10 ಅಂಕಕ್ಕೆ ಪರಿವರ್ತನೆ ಮಾಡುವುದು. ತರಗತಿ, ಪ್ರಾಜೆಕ್ಟ್, ಅಸೈಟ್ ಮೆಂಟ್ ಗೆ 10 ಅಂಕಗಳು ಇರಲಿದೆ. ಇದರಲ್ಲಿ ಅಸೈನ್ ಮೆಂಟ್ ಬರವಣಿಗೆಗೆ 5 ಅಂಕ. ಪ್ರಸ್ತುತ ಪಡಿಸುವಿಕೆಗೆ 3 ಅಂಕ ಹಾಗೂ ಸಂದರ್ಶನಕ್ಕೆ 2 ಅಂಕ ನೀಡಲಾಗುತ್ತದೆ.
ಈ ವರ್ಷದ ಮಧ್ಯ ವಾರ್ಷಿಕ ಪರೀಕ್ಷೆಯಲ್ಲಿ 80-20 ಅಂಕ ಮಾದರಿಯಲ್ಲಿ ಪರೀಕ್ಷೆ ನಡೆಸಲು ಆದೇಶ ಮಾಡಲಾಗಿದೆ. 80 ಅಂಕಕ್ಕೆ ವಿದ್ಯಾರ್ಥಿ ಪಾಸ್ ಆಗಲು 24 ಅಂಕ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಕಿರು ಪರೀಕ್ಷೆ, ಮಧ್ಯ ವಾರ್ಷಿಕ ಪರೀಕ್ಷೆ ಹಾಜರಾಗಿದೇ ಇದ್ದರೆ 80 ಅಂಕಕ್ಕೆ 35 ಅಂಕವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಪಡೆಯಬೇಕು.
ಒಂದು ಕಿರು ಪರೀಕ್ಷೆ, ಮಧ್ಯ ವಾರ್ಷಿಕ ಪರೀಕ್ಷೆ ಹಾಜರಾಗದೇ ಇರುವವರಿಗೆ ಕೆಲ ನಿಯಮದ ಅಡಿ ಅಂಕಗಳ ಪರಿಗಣನೆಗೆ ಸೂಚನೆ ನೀಡಲಾಗಿದೆ. 2023-24ನೇ ಸಾಲಿನ ವಿದ್ಯಾರ್ಥಿಗಳಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ಪುನರಾವರ್ತಿತ ವಿದ್ಯಾರ್ಥಿಗಳು, ಖಾಸಗಿಯಾಗಿ ದ್ವಿತೀಯ ಪಿಯುಸಿ ಪರೀಕ್ಷೆ ತೆಗೆದುಕೊಳ್ಳುವವರಿಗೆ ಈ ನಿಯಮ ಜಾರಿ ಇಲ್ಲ.100 ಅಂಕಕ್ಕೆ ಪರೀಕ್ಷೆ ಬರೆಯಬೇಕು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]