ಬೆಂಗಳೂರು: 100 ಸಿಸಿ ಸಾಮರ್ಥ್ಯದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ನಿಷೇಧ ಹೇರಿರುವ ಸಾರಿಗೆ ಇಲಾಖೆ ಈಗ, ಈ ವಾಹನಗಳ ಪಟ್ಟಿಯನ್ನು ಪಟ್ಟಿಯನ್ನು ಬಿಡುಗಡೆ ಮಾಡಿ ನೋಂದಣಿಗೆ ಸಂಬಂಧಿಸಿದಂತೆ ಸೂಚನೆಗಳನ್ನು ಪ್ರಕಟಿಸಿದೆ.
ಈ ವಾಹನಗಳನ್ನು ನೋಂದಣಿ ಮಾಡಿಸಬೇಕಾದರೆ ಒಂದು ಸೀಟಿಗೆ ಬದಲಾಯಿಸಿಕೊಂಡು, ಬೈಕಿನ ಆಸನ ಸಾಮರ್ಥ್ಯ ಒಂದು ಎಂಬುದಾಗಿ ನಮೂದಿಸಿದ ದಾಖಲೆಗಳನ್ನು ಸಲ್ಲಿಸಿದ್ದಲ್ಲಿ ಮಾತ್ರ ಈ ವಾಹನವನ್ನು ನೋಂದಾಯಿಸಲಾಗುವುದು ಎಂದು ಸಾರಿಗೆ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ.
Advertisement
100 ಸಿಸಿ ಕಡಿಮೆ ಸಾಮರ್ಥ್ಯ ಹೊಂದಿರುವ ದ್ವಿಚಕ್ರ ವಾಹನಗಳು: ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್(87.8 ಸಿಸಿ), ಟಿವಿಎಸ್ ಸ್ಪೋಟ್ರ್ಸ್ (99.77ಸಿಸಿ), ಹೀರೋ ಎಸ್‍ಎಫ್ ಡಿಲಕ್ಸ್ (97.2 ಸಿಸಿ), ಹೀರೋ ಸ್ಪ್ಲೆಂಡರ್ ಪ್ಲಸ್ (97.2 ಸಿಸಿ), ಟಿವಿಎಕ್ಸ್ ಎಕ್ಸ್‍ಎಲ್ 100 (99.7 ಸಿಸಿ), ಹೀರೋ ಸ್ಪ್ಲೆಂಡರ್ ಪ್ರೋ (97.2 ಸಿಸಿ), ಬಜಾಜ್ ಸಿಟಿ 100 (99.27ಸಿಸಿ), ಹೀರೋ ಎಸ್‍ಎಫ್ ಡಿಲಕ್ಸ್ ಎಕೋ (97ಸಿಸಿ), ಹೀರೋ ಪ್ಯಾಷನ್ ಪ್ರೋ ಐ3ಎಸ್ (97.2 ಸಿಸಿ).
Advertisement
ಅಪಘಾತದಿಂದಾಗಿ ಹಿಂಬದಿ ಸವಾರರು ಮೃತಪಡುವುದನ್ನು ತಡೆಯುವ ನಿಟ್ಟಿನಲ್ಲಿ ಹೈಕೋರ್ಟ್ ಆದೇಶದಂತೆ ಕರ್ನಾಟಕ ಸರ್ಕಾರ ಮೋಟಾರು ವಾಹನ ಕಾಯ್ದೆಯಲ್ಲಿ ಈ ನಿಯಮವನ್ನು ರಾಜ್ಯಾದ್ಯಂತ ಜಾರಿಗೆ ತರಲು ತೀರ್ಮಾಸಿದೆ. ಈ ಕುರಿತು ಎಲ್ಲ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ರವಾನಿಸಲಾಗಿದೆ. ಮೋಟಾರು ವಾಹನ ಕಾಯ್ದೆಯ ನಿಯಮಗಳಲ್ಲಿ 100 ಸಿಸಿ ಸಾಮರ್ಥ್ಯಕ್ಕಿಂತ ಕಡಿಮೆ ಇರುವ ಬೈಕ್‍ಗಳಲ್ಲಿ ಹಿಂಬದಿ ಸಾವರರು ಪ್ರಯಾಣ ಮಾಡಲು ಸೂಕ್ತವಲ್ಲ ಎಂದು ತಿಳಿಸಲಾಗಿದೆ.