ಬರಗೂರು ಸಮಿತಿಯ ಪಠ್ಯದಲ್ಲಿ ಲೋಪವಿತ್ತು ಎನ್ನುವ ಬಿಜೆಪಿಯವರು ಸದನದಲ್ಲಿ ಅನುಮೋದನೆ ಪಡೆಯುವಾಗ ಬ್ಲೂ ಫಿಲ್ಮ್ ನೋಡ್ತಿದ್ರಾ?: ಕಾಂಗ್ರೆಸ್

Public TV
1 Min Read
text book bjp

ಬೆಂಗಳೂರು: ಬರಗೂರು ಸಮಿತಿಯ ಪಠ್ಯದಲ್ಲಿ ಲೋಪವಿತ್ತು ಎಂದು ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿ ನಾಯಕರು ಅಂದು ಸದನದಲ್ಲಿ ಅನುಮೋದನೆ ಪಡೆಯುವಾಗ ಬ್ಲೂ ಫಿಲ್ಮ್ ನೋಡ್ತಿದ್ರಾ? ತಪ್ಪಿದ್ದರೆ ಅಂದೇ ಪ್ರಶ್ನಿಸಬಹುದಿತ್ತಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಟ್ವಿಟ್ಟರ್ ಮೂಲಕ ವಾಗ್ದಾಳಿ ನಡೆಸಿದೆ.

congress flag

ಟ್ವೀಟ್‍ನಲ್ಲಿ ಏನಿದೆ?
ಬರಗೂರು ಸಮಿತಿಯ ಪಠ್ಯದಲ್ಲಿ ಲೋಪವಿತ್ತು ಎಂದು ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿ ನಾಯಕರು ಅಂದು ಸದನದಲ್ಲಿ ಅನುಮೋದನೆ ಪಡೆಯುವಾಗ ಬ್ಲೂ ಫಿಲ್ಮ್ ನೋಡ್ತಿದ್ರಾ? ತಪ್ಪಿದ್ದರೆ ಅಂದೇ ಪ್ರಶ್ನಿಸಬಹುದಿತ್ತಲ್ಲ? ಇವರು ಪರಿಷ್ಕರಿಸಿದ್ದನ್ನು ಸದನದ ಮುಂದೆ ತರುವ ಧೈರ್ಯವಿಲ್ಲವೇ? ಈಗ ಇಂತಹ ಸುಳ್ಳಿನ ಸರ್ಕಸ್ ನಡೆಸುತ್ತಿರುವುದು ಏಕೆ? ಈ ಸರ್ಕಾರ ಪರಿಷ್ಕರಿಸಿದ ಇಡೀ ಪಠ್ಯವೇ ಅವಾಂತರಗಳ ಮೂಟೆಯಾಗಿದೆ. ಇದನ್ನೂ ಓದಿ: ಆನ್‌ಲೈನ್ ಕ್ಲಾಸ್‌ನಲ್ಲಿ ಹೋಂ ವರ್ಕ್ ಬದಲಿಗೆ ಅಶ್ಲೀಲ ವೀಡಿಯೋ ಕಳಿಸಿ ತಗಲಾಕ್ಕೊಂಡ 6ನೇ ಕ್ಲಾಸ್ ವಿದ್ಯಾರ್ಥಿ

ಕಾಸರಗೋಡು ಹೋರಾಟವನ್ನೂ ಸಹ ತಿರುಚಲಾಗಿದೆ, ಕಯ್ಯಾರ ಕಿಂಞಣ್ಣ ರೈ ಬದಲಿಗೆ ಗೋವಿಂದ ಪೈ ಅವರ ಹೆಸರು ಸೇರಿಸಿದ ಈ ತಿರುಚಿವಿಕೆ ಏಕೆ ಬಿ.ಸಿ ನಾಗೇಶ್ ಮತ್ತು ಬಿಜೆಪಿ ಅವರೇ? ಬಂಟ ಸಮುದಾಯದ ಮೇಲೆ ಅಷ್ಟೊಂದು ಅಸಹನೆ ಇದೆಯೇ ಬಿಜೆಪಿಗೆ? ಗೊಂದಲಗಳಿಗೆ ಪಠ್ಯಗಳನ್ನು ವಾಪಸ್ ಪಡೆಯುವುದೇ ಪರಿಹಾರ. ಪಠ್ಯ ಪರಿಷ್ಕರಣೆ ಮಾಡಲು ಮುಂದಾಗಿದ್ದ ಸರ್ಕಾರದ ಸ್ಥಿತಿ ಬಾಯಲ್ಲಿ ಬಿಸಿ ತುಪ್ಪ ಇಟ್ಟುಕೊಂಡಂತಾಗಿದೆ. ತಪ್ಪು ಮಾಡಲು ಒಂದು ಸಮಿತಿ, ತಪ್ಪನ್ನು ಸರಿಪಡಿಸಲು ಮತ್ತೊಂದು ಸಮಿತಿ, ಅವರು ಮಾಡುವ ತಪ್ಪನ್ನು ಸರಿಪಡಿಸಲು ಇನ್ನೊಂದು ಸಮಿತಿಯೇ. ಕುಂಠಿತಗೊಳ್ಳುವ ಮಕ್ಕಳ ಶಿಕ್ಷಣಕ್ಕೆ, ಆರ್ಥಿಕ ನಷ್ಟಕ್ಕೆ ಹೊಣೆ ಯಾರು? ಇಷ್ಟು ಹಠ ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಇದನ್ನೂ ಓದಿ: ಶಿವಸೇನಾ ಬಾಳಾಸಾಹೇಬ್ ಎಂದು ಹೆಸರಿಟ್ಟುಕೊಂಡ ರೆಬೆಲ್ ಶಾಸಕರ ಗುಂಪು

Live Tv

Share This Article
Leave a Comment

Leave a Reply

Your email address will not be published. Required fields are marked *