ಬೆಂಗಳೂರು: ಕರ್ನಾಟಕ (Karnataka) ಶಿಕ್ಷಕರ ಅರ್ಹತಾ ಪರೀಕ್ಷೆಯ (TET) ಫಲಿತಾಂಶವನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.
ಡಿ.7 ರಂದು ರಾಜ್ಯದಾದ್ಯಂತ ಏಕಕಾಲದಲ್ಲಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಪರೀಕ್ಷೆ ನಡೆದಿತ್ತು. ಪತ್ರಿಕೆ 1 ರಲ್ಲಿ 29,377 ಅಭ್ಯರ್ಥಿಗಳು (37.00%) ಅರ್ಹತೆ ಪಡೆದರೆ ಪತ್ರಿಕೆ 2 ರಲ್ಲಿ 68,006 ಅಭ್ಯರ್ಥಿಗಳು (28.67%) ಅರ್ಹತೆ ಪಡೆದಿದ್ದಾರೆ.
1ರಿಂದ 5ನೇ ತರಗತಿಗೆ ಬೋಧಿಸುವ ಶಿಕ್ಷಕರ ಅರ್ಹತೆಗಾಗಿ 309 ಕೇಂದ್ರಗಳಲ್ಲಿ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು. ಅರ್ಜಿ ಸಲ್ಲಿಸಿದ್ದ 85 ಸಾವಿರ ಅಭ್ಯರ್ಥಿಗಳಲ್ಲಿ 79 ಸಾವಿರ ಮಂದಿ (93.35%) ಹಾಜರಾಗಿದ್ದರು.
6 ರಿಂದ 8ನೇ ತರಗತಿ ಬೋಧಿಸುವ ಶಿಕ್ಷಕರ ಅರ್ಹತೆಗಾಗಿ ಮಧ್ಯಾಹ್ನ 2ರಿಂದ 913 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದವು. ಅರ್ಜಿ ಸಲ್ಲಿಸಿದ್ದ 2.50 ಲಕ್ಷ ಅಭ್ಯರ್ಥಿಗಳ ಪೈಕಿ, 2.37 ಲಕ್ಷ (94.79%) ಮಂದಿ ಪರೀಕ್ಷೆ ಬರೆದಿದ್ದರು. ಇದನ್ನೂ ಓದಿ: ಕ್ರಿಸ್ಮಸ್, ನ್ಯೂ ಇಯರ್‌ಗೆ ಕೌಂಟ್‌ಡೌನ್ – 15 ಲಕ್ಷ ವೆಚ್ಚದ ಲೈಟಿಂಗ್‌ನಲ್ಲಿ ಬ್ರಿಗೇಡ್ ರೋಡ್ ಕಲರ್‌ಫುಲ್
ಪತ್ರಿಕೆ -1
ಅರ್ಜಿ ಸಲ್ಲಿಸಿದವರು – 85,042
ಪರೀಕ್ಷೆಗೆ ಹಾಜರಾದವರು – 79,395
ಗೈರು ಹಾಜರಾದವರು – 5,647
ಶೇ.60ಕ್ಕೂ ಹೆಚ್ಚು ಅಂಕ ಪಡೆದವರು – 22,741
ಶೇ.55 ಕ್ಕಿಂತ ಹೆಚ್ಚು ಶೇ.60 ಕ್ಕಿಂತ ಕಡಿಮೆ ಅಂಕ ಪಡೆದವರು (ಎಸ್‌ಸಿ/ಎಸ್‌ಟಿ/ ಪ್ರವರ್ಗ-1 ಮತ್ತು ಪಿಹೆಚ್) – 6,636
ಅರ್ಹತೆ ಪಡೆದವರು – 29,377
ಶೇಖಡವಾರು ಅರ್ಹತೆ ಪಡೆದವರು – 37%
ಪತ್ರಿಕೆ -2
ಅರ್ಜಿ ಸಲ್ಲಿಸಿದವರು – 2,50,189
ಪರೀಕ್ಷೆಗೆ ಹಾಜರಾದವರು – 2,37,163
ಗೈರು ಹಾಜರಾದವರು – 13,026
ಶೇ.60ಕ್ಕೂ ಹೆಚ್ಚು ಅಂಕ ಪಡೆದವರು – 53,126
ಶೇ.55 ಕ್ಕಿಂತ ಹೆಚ್ಚು ಶೇ.60 ಕ್ಕಿಂತ ಕಡಿಮೆ ಅಂಕ ಪಡೆದವರು (ಎಸ್‌ಸಿ/ಎಸ್‌ಟಿ/ ಪ್ರವರ್ಗ-1 ಮತ್ತು ಪಿಹೆಚ್) – 14,880
ಅರ್ಹತೆ ಪಡೆದವರು (ಸಮಾಜ ವಿಜ್ಞಾನ) – 40,642
ಅರ್ಹತೆ ಪಡೆದವರು (ಗಣಿತ) – 27,364
ಒಟ್ಟು ಅರ್ಹತೆ ಪಡೆದವರು – 68,006
ಶೇಖಡವಾರು ಅರ್ಹತೆ ಪಡೆದವರು – 28.67%

