ನವದೆಹಲಿ: ಕರ್ತವ್ಯಪಥದಲ್ಲಿ ನಡೆಯಲಿರುವ ಗಣರಾಜೋತ್ಸವದ (Republic Day) ಪರೇಡ್‍ನಲ್ಲಿ ಭಾಗಿಯಾಗಲು ರಾಜ್ಯದ (Karnataka) ಸ್ತಬ್ಧಚಿತ್ರ (Tableau) ಒಂದೇ ವಾರದಲ್ಲಿ ಸಿದ್ಧವಾಗುತ್ತಿದೆ.
ನಾರಿ ಶಕ್ತಿ ಪರಿಕಲ್ಪನೆಯ ಟ್ಯಾಬ್ಲೊವನ್ನು (Naari Shakti) ಕೇವಲ ಎಂಟು ದಿನಗಳಲ್ಲಿ ನಿರ್ಮಿಸಲಾಗಿದ್ದು, ಇದೀಗ ಅಂತಿಮ ಹಂತದ ಕೆಲಸಗಳು ನಡೆಯುತ್ತಿದೆ. ಪರೇಡ್‍ನಲ್ಲಿ ಕರ್ನಾಟಕದ ಕಲಾ ತಂಡ ಕೂಡ ಭಾಗಿಯಾಗುತ್ತಿದೆ. ಕೊಪ್ಪಳ ಚಿತ್ರದುರ್ಗ, ಬೆಂಗಳೂರಿನ 18 ಮಂದಿ ನಂದಿ ಧ್ವಜ ಕುಣಿತದ ಕಲಾವಿದರು ಈ ಬಾರಿಯ ಪರೇಡ್‍ನಲ್ಲಿ ಭಾಗಿಯಾಗುತ್ತಿದ್ದಾರೆ. ಈ ಮಧ್ಯೆ, ಟ್ಯಾಬ್ಲೋ ವಿಚಾರದಲ್ಲಿ ಅನಪೇಕ್ಷಿತ ರಾಜಕೀಯ ಕೂಡ ನಡೆದಿದೆ.
Advertisement
Advertisement
ಕೊನೆ ಹಂತದಲ್ಲಿ ರಾಜ್ಯದ ಟ್ಯಾಬ್ಲೋಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದನ್ನು ನಾಟಕ. ಚುನಾವಣೆ ಗಿಮಿಕ್ ಎಂದು ಡಿಕೆಶಿವಕುಮಾರ್ ಇತ್ತೀಚಿಗೆ ಟೀಕಿಸಿದರು. ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಕರ್ನಾಟಕದ ವಿಚಾರ ಬಂದಾಗ ಎಲ್ಲರೂ ಒಂದಾಗಬೇಕು. ಸಣ್ಣತನ ಬಿಟ್ಟು ಒಂದಾಗಬೇಕು. ಈಗ್ಲಾದ್ರೂ ಕಾಂಗ್ರೆಸ್‍ನವರು ಪಾಠ ಕಲಿಯಲಿ ಎಂದು ಸಿಎಂ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಟೆಂಡರ್ ಶ್ಯೂರ್ ಕಾಮಗಾರಿಯಲ್ಲಿ ಭಾರೀ ಅಕ್ರಮ – ಸಿದ್ದು ವಿರುದ್ಧ ಸಾಕ್ಷ್ಯಗಳೊಂದಿಗೆ ಲೋಕಾಗೆ ಬಿಜೆಪಿ ದೂರು
Advertisement
Advertisement
ಸತತ 13 ಬಾರಿ ಪರೇಡ್‍ನಲ್ಲಿ ಕರ್ನಾಟಕದ ಟ್ಯಾಬ್ಲೋ ಇತ್ತು. ಈ ವರ್ಷ ಬೇಡ ಎಂದು ಕೇಂದ್ರ ಹೇಳಿತ್ತು. ಆದರೆ ಸಿಎಂ ಬೊಮ್ಮಾಯಿ, ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಪ್ರಯತ್ನದ ಕಾರಣ ಕೊನೆ ಕ್ಷಣದಲ್ಲಿ ರಾಜ್ಯದ ಟ್ಯಾಬ್ಲೋಗೆ ಕೇಂದ್ರ ಅನುಮತಿಸಿತ್ತು. ಅಂದ ಹಾಗೆಯೇ, ದೆಹಲಿಯ ಕರ್ತವ್ಯಪಥದಲ್ಲಿ ಇಂದು ತ್ರಿವಿಧ ದಳಗಳು ಫುಲ್ ಡ್ರೆಸ್ ರಿಹರ್ಸಲ್ ನಡೆಸಿದವು. ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಇದನ್ನೂ ಓದಿ: ಕೋಲಾರದಲ್ಲಿ ಸ್ಪರ್ಧೆ- ಸಿದ್ದರಾಮಯ್ಯಗೆ ಸಿದ್ಧಗೊಂಡಿರುವ ಮನೆಯ ವಿಶೇಷತೆ ಏನು?
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k