– ಆಂತರಿಕ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ
ಬೆಂಗಳೂರು: ದೇಶದ ಚುನಾವಣಾ ವ್ಯವಸ್ಥೆಗೆ ಬಳಸಿಕೊಳ್ಳುತ್ತಿರುವ ಇವಿಎಂ (Electronic Voting Machines) ಮೇಲಿನ ವಿಶ್ವಾಸರ್ಹತೆಯ ಬಗ್ಗೆ ಸಮೀಕ್ಷೆಯೊಂದು ಹೊರಬಿದ್ದಿದೆ. ಕೇಂದ್ರ ಚುನಾವಣಾ ಆಯೋಗದ ಪರವಾಗಿ ಇರುವ ಸಮೀಕ್ಷೆ ಕರ್ನಾಟಕದಿಂದಲೇ ಬಿಡುಗಡೆ ಆಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಜುಗರ ತರಿಸಿದೆ. ಇದು ವಿಪಕ್ಷಗಳ ಬಾಯಿಗೂ ಆಹಾರವಾಗಿದೆ.
ಹೌದು. ಇವಿಎಂ (EVM) ವಿಶ್ವಾಸಾರ್ಹತೆ ಕುರಿತ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಜನ, ದೇಶದ ಈಗಿನ ಚುನಾವಣಾ ಪದ್ದತಿ ಸರಿಯಾಗಿಯೇ ಇದೆ. ಇವಿಎಂ ನಿಖರ ಫಲಿತಾಂಶ ಕೊಡುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನೂ ಓದಿ: Ballari Firing Case | ತನಿಖೆ ನಡೆಯುತ್ತಿದೆ, ಯಾರನ್ನೂ ಬಿಡಲ್ಲ – ಸಚಿವ ಜಮೀರ್ ವಾರ್ನಿಂಗ್

ಬಿಹಾರ ಚುನಾವಣೆಗೆ (Bihar Election) ಮುನ್ನ ರಾಹುಲ್ ಗಾಂಧಿಯವರು ಇವಿಎಂ, ಮತಗಳ್ಳತನ ಮತ್ತು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ದೊಡ್ಡ ಮಟ್ಟದ ಅಭಿಯಾನ ನಡೆಸಿದ್ದರು. ಕರ್ನಾಟಕದಲ್ಲಿ ಬೆಂಗಳೂರಿನ ಮಹದೇವಪುರ ಮತ್ತು ಕಲಬುರಗಿಯ ಆಳಂದ ಕ್ಷೇತ್ರಗಳಲ್ಲೂ ವೋಟ್ ಚೋರಿ ನಡೆದಿದೆ ಎಂದು ದಾಖಲೆ ಸಮೇತ ಆರೋಪ ಮಾಡಿದ್ದರು. ಕರ್ನಾಟಕದಲ್ಲೂ ಇದು ದೊಡ್ಡಮಟ್ಟದ ಸದ್ದು ಮಾಡಿತ್ತು. ಈಗ,ಕರ್ನಾಟಕದ ಕಾಂಗ್ರೆಸ್ ಸರ್ಕಾರದ ರಾಜ್ಯ ಮೌಲ್ಯಮಾಪನ ಪ್ರಾಧಿಕಾರ ಸಮೀಕ್ಷೆಯೊಂದನ್ನ ನಡೆಸಿದೆ.
ಈ ಪ್ರಾಧಿಕಾರವು ಮೈಸೂರು ಮೂಲದ ಗ್ರಾಸ್‌ರೂಟ್ಸ್ ರಿಸರ್ಚ್ ಆ್ಯಂಡ್ ಅಡ್ವೊಕಸಿ ಮೂವ್‌ಮೆಂಟ್’ (GREEM) ಸಂಸ್ಥೆಯ ಮೂಲಕ 2025ರ ಮೇ ತಿಂಗಳಿನಲ್ಲಿ ಈ ಸಮೀಕ್ಷೆ ನಡೆಸಿತ್ತು. ಈ ಪ್ರಾಧಿಕಾರವು, ರಾಜ್ಯ ಸರ್ಕಾರದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಧೀನದಲ್ಲಿದೆ. ಸಮೀಕ್ಷೆಯಲ್ಲಿನ ಫಲಿತಾಂಶದ ಪ್ರಕಾರ ಶೇ. 83.61ರಷ್ಟು ಜನ, ಇವಿಎಂ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಜನತೆ ನಮ್ಮ ದೇಶದ ಚುನಾವಣೆಗಳು ಮುಕ್ತವಾಗಿದೆ ಮತ್ತು ನ್ಯಾಯಸಮ್ಮತವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದರ ಜೊತೆಗೆ, ಇತ್ತೀಚಿನ ದಿನಗಳಲ್ಲಿ ನಮಗೆ ಇವಿಎಂ ಮೇಲಿನ ನಂಬಿಕೆ ಹೆಚ್ಚಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರೆಸಾರ್ಟ್ ಮಾಲೀಕರ ಕಾರು ಚಾಲಕನ ಮೇಲೆ ಹಲ್ಲೆ – ಮೊಬೈಲ್, ಹಣ ದೋಚಿದ ಕಿಡಿಗೇಡಿಗಳು

ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರ ನೇತೃತ್ವದಲ್ಲಿ 102 ವಿಧಾನಸಭಾ ಕ್ಷೇತ್ರದಲ್ಲಿನ 5,100 ಜನರ ಅಭಿಪ್ರಾಯ ಕ್ರೋಢೀಕರಿಸಿ ಈ ಸಮೀಕ್ಷೆ ಹೊರತರಲಾಗಿದೆ. ಬೆಂಗಳೂರು, ಬೆಳಗಾವಿ, ಕಲಬುರಗಿ ಮತ್ತು ಮೈಸೂರು ವಿಭಾಗದಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಸರ್ವೇಯಲ್ಲಿ ಫಲಿತಾಂಶದಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೇನಂದರೆ 2023ರಲ್ಲಿ ಶೇ. 77.9ರಷ್ಟು ಜನರು ಇವಿಎಂ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದರು. ಈಗಿನ ಫಲಿತಾಂಶ ಅದನ್ನು ಮೀರಿರುವುದು, ಇವಿಎಂ ವಿರುದ್ಧ ಆರೋಪ ಮಾಡುತ್ತಿದ್ದ ಕಾಂಗ್ರೆಸ್‌ಗೆ ತಿರುಗೇಟು ಕೊಟ್ಟಂತಾಗಿದೆ.
ಸಮೀಕ್ಷೆಯ ಪ್ರಮುಖ ಅಂಶಗಳೇನು?
ಸಮೀಕ್ಷೆಯಲ್ಲಿ 5,100 ಮಂದಿ ಭಾಗಿಯಾಗಿದ್ದು ಶೇ.83.61ರಷ್ಟು ಮಂದಿ ಮತಯಂತ್ರದ ಪರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇವಿಎಂಗಳು ನಿಖರ ಫಲಿತಾಂಶ ನೀಡುತ್ತವೆ. ಭಾರತದಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಯುತ್ತವೆ ಎಂದು ಬಹುತೇಕ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿಎಂ ಸೂಚನೆ ಕೊಟ್ಟರೆ ಕಾಲೇಜು ಹೆಣ್ಣುಮಕ್ಕಳಿಗೆ ಋತುಚಕ್ರ ರಜೆ: ಡಾ. ಎಂ.ಸಿ.ಸುಧಾಕರ್
ಸಮೀಕ್ಷೆಯಲ್ಲಿ ಪಾಲ್ಗೊಂಡ 5,100 ಜನರಲ್ಲಿ ಶೇ.95.75 ರಷ್ಟು ಮಂದಿ 2024ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದೇವೆ ಎಂದಿದ್ದಾರೆ. ಶೇ.95.44ರಷ್ಟು ಜನರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳ ವಿವರ ಸರಿ ಇರುವುದಾಗಿ ದೃಢಪಡಿಸಿದ್ದಾರೆ.
ಚುನಾವಣೆಗಳು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಯುತ್ತವೆ ಎಂದು ಶೇ.84.55 ಜನರು ಹೇಳಿದ್ದಾರೆ. ಅದರಲ್ಲೂ ಕಲಬುರಗಿ ವಿಭಾಗದಲ್ಲಿ ಅತೀ ಹೆಚ್ಚು ಅಂದ್ರೆ ಶೇ.84.67ರಷ್ಟು ಜನರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಪೈಕಿ ಶೇ.10.19ರಷ್ಟು ಜನರು ಈ ಅಭಿಪ್ರಾಯವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ.
ಬೆಳಗಾವಿ ವಿಭಾಗದ ಶೇ.69.62ರಷ್ಟು ಜನರು ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತವಾಗಿ ನಡೆಯುತ್ತವೆ ಎಂದು ಹೇಳಿದರೆ ಶೇ.19.24ರಷ್ಟು ಜನರು ಈ ಅಭಿಪ್ರಾಯವನ್ನು ಬಲವಾಗಿ ಸಮರ್ಥಿಸಿದ್ದಾರೆ.
ಇವಿಎಂಗಳು ನಿಖರ ಫಲಿತಾಂಶಗಳನ್ನು ನೀಡುತ್ತವೆ ಎಂದು ಶೇ.83.61ರಷ್ಟು ನಾಗರಿಕರು ನಂಬಿದ್ದಾರೆ. ಕಲಬುರಗಿ ವಿಭಾಗದಲ್ಲಿ ಈ ನಂಬಿಕೆ ಅತೀ ಹೆಚ್ಚಾಗಿದ್ದು ಶೇ.83.24ರಷ್ಟು ಜನರು ಈ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಶೇ 11.24 ಜನರು ಬಲವಾಗಿ ನಿಖರ ಫಲಿತಾಂಶ ಬಗ್ಗೆ ಒಪ್ಪಿಕೊಂಡಿದ್ದಾರೆ.
ಮೈಸೂರು ವಿಭಾಗದಲ್ಲಿ ಶೇ.70.67ರಷ್ಟು ಜನರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.17.92ರಷ್ಟು ಜನರು ಬಲವಾಗಿ ಇದನ್ನು ಸಮರ್ಥಿಸಿದ್ದಾರೆ. ಅಲ್ಲದೇ, ಇವಿಎಂಗಳ ಮೇಲಿನ ನಂಬಿಕೆ 2023ರಲ್ಲಿ ಶೇ.77.90ರಷ್ಟಿದ್ದರೆ, ಈಗ ಶೇ.83.61ಕ್ಕೆ ವೃದ್ಧಿಸಿದೆ ಎಂದೂ ಈ ಸಮೀಕ್ಷೆ ಹೇಳಿದೆ.

