ಬೆಂಗಳೂರಲ್ಲಿ ಹೆಚ್ಚಿದ ಬೀದಿ ನಾಯಿ ಹಾವಳಿ – ಬಿಬಿಎಂಪಿಯಿಂದ ವರ್ಷಕ್ಕೆ ಕೋಟಿ, ಕೋಟಿ ರೂ. ಖರ್ಚು!

Public TV
2 Min Read
DOGS 1

ಬೆಂಗಳೂರು: ಸಿಲಿಕಾನ್ ಸಿಟಿಯ ಯಾವುದೇ ಏರಿಯಾಗೆ ಹೋಗಿ, ಯಾವುದೇ ರೋಡ್‍ಗೆ ಹೋಗಿ ಅಲ್ಲಿ ನಿಮಗೆ ಸ್ವಾಗತ ಮಾಡೋದು ಮಾತ್ರ ಬೀದಿನಾಯಿಗಳು (Stray Dogs). ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ನಾಯಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಅದೇ ರೀತಿ ನಾಯಿಗಳಿಂದ ಕಚ್ಚಿಸಿಕೊಂಡವರ ಸಂಖ್ಯೆಯೂ ಅಷ್ಟೇ ಏರಿಕೆಯಾಗ್ತನೇ ಇದೆ. ಜೊತೆಗೆ ಬಿಬಿಎಂಪಿ (BBMP) ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದು, ಇದಕ್ಕಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ.

BBMP

ನಾಯಿಗಳ ದಾಳಿಯಿಂದ ಅದೆಷ್ಟೋ ಜನ ಆಸ್ಪತ್ರೆಗೆ ಸೇರಿದ್ದಾರೆ. ಅದರಲ್ಲೂ ಬೀದಿನಾಯಿಗಳ ಗುಂಪು ಮಕ್ಕಳ ಮೇಲೆ ದಾಳಿ ಮಾಡಿ ಪ್ರಾಣವನ್ನೇ ತೆಗೆಯೋ ಮಟ್ಟಿಗೆ ಹೋಗಿದ್ದ ನಿದರ್ಶನಗಳು ಬೆಂಗಳೂರಿನಲ್ಲಿ ನಡೆದಿದೆ. ಬೀದಿನಾಯಿಗಳನ್ನು ನಿಯಂತ್ರಣ ಮಾಡಬೇಕು, ಅದರ ಸಂತಾನವನ್ನು ಕಡಿಮೆ ಮಾಡಬೇಕು, ಪ್ರತಿಬೀದಿ ನಾಯಿಗೂ ರೇಬಿಸ್ ಇಂಜೆಕ್ಷನ್ ನೀಡಬೇಕು ಅಂತಾ ಬಿಬಿಎಂಪಿ ಕೋಟ್ಯಂತರ ರೂ. ಖರ್ಚು ಮಾಡ್ತಿದೆ. ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಬೆಂಗಳೂರಿನಲ್ಲಿ ಒಟ್ಟು 3 ಲಕ್ಷ ನಾಯಿಗಳಿದ್ದು ಅದರಲ್ಲಿ ಅರ್ಧ ಬೀದಿನಾಯಿಗಳಾದರೆ, ಉಳಿದವು ಸಾಕು ನಾಯಿಗಳು. ಬಿಬಿಎಂಪಿಯ ಅಂಕಿ ಅಂಶಗಳ ಪ್ರಕಾರ ಕಳೆದ ಒಂದು ವರ್ಷದಲ್ಲಿ 17 ಸಾವಿರಕ್ಕೂ ಹೆಚ್ಚು ಜನರಿಗೆ ನಾಯಿ ಕಚ್ಚಿದೆ. ಬಿಬಿಎಂಪಿ ನಿರಂತರ ಪ್ರಯತ್ನದಿಂದ ನಾಯಿಗಳ ನಿಯಂತ್ರಣ ಆಗ್ತಿದೆ. ಕಳೆದ ಮೂರು ವರ್ಷದಿಂದ 40 ಸಾವಿರಕ್ಕೂ ಹೆಚ್ಚು ಜನರಿಗೆ ಕಚ್ಚಿತ್ತು. ಅದರ ಸಂಖ್ಯೆ ಕಡಿಮೆಯಾಗಿದೆ. ಜೊತೆಗೆ ನಾಯಿ ಸಂತಾನ ನಿಯಂತ್ರಣದ ಚುಚ್ಚುಮದ್ದುನ್ನು ಪ್ರತಿ ತಿಂಗಳು ಕನಿಷ್ಠ 10,000 ನಾಯಿಗಳಿಗೆ ನೀಡಲಾಗ್ತಿದೆ. ಹಾಗೆಯೇ ರೇಬಿಸ್ ಲಸಿಕೆಯನ್ನು ಸಹ ನೀಡಲಾಗ್ತಿದೆ ಅಂತಾ ಬಿಬಿಎಂಪಿ ಪಶುಪಾಲನೆ ಅಧಿಕಾರಿ ಡಾ. ರವಿ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಹೆಚ್ಚಿನ ಸಮಯ ಫಿಕ್ಸ್? – ಮಧ್ಯರಾತ್ರಿ 2 ಗಂಟೆವರೆಗೂ ಅವಕಾಶ ಸಾಧ್ಯತೆ

DOGS

ದಿನಕ್ಕೆ ಸರಾಸರಿ 70ಕ್ಕೂ ಹೆಚ್ಚು ಜನಕ್ಕೆ ಬೀದಿ ನಾಯಿಗಳು ಕಚ್ಚುತ್ತಿವೆ. ಸಿಲಿಕಾನ್ ಸಿಟಿಯಲ್ಲಿರೋ ನಾಯಿಗಳ ಸಂಖ್ಯೆ ಎಷ್ಟು, ನಾಯಿಗಳ ಕಡಿತದ ಸಂಖ್ಯೆ ಎಷ್ಟು ಎಂಬ ಅಂಕಿ ಅಂಶಗಳನ್ನು ನೋಡೋದಾದರೆ, 2019-2020 – 42,818 ಪ್ರಕರಣ ದಾಖಲಾಗಿತ್ತು. 2020-2021 – 18,629 ಪ್ರಕರಣ, 2021-2022 – 17,610 ಪ್ರಕರಣ ದಾಖಲಾಗುವ ಮೂಲಕ ಒಟ್ಟು – 70,057 ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಝಿಕಾ ವೈರಸ್‌ ಭೀತಿ – ಚಿಕಿತ್ಸಾ ಕ್ರಮ ಪಟ್ಟಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

DOG 2

ವಲಯವಾರು ಬೀದಿ ನಾಯಿಗಳ ಸಂಖ್ಯೆ:
ಪೂರ್ವ ವಲಯ – 44,302
ಪಶ್ಚಿಮ ವಲಯ – 28,482
ದಕ್ಷಿಣ ವಲಯ – 39,562
ಆರ್.ಆರ್.ನಗರ – 23,170
ದಾಸರಹಳ್ಳಿ – 23,170
ಯಲಹಂಕ – 36,219
ಬೊಮ್ಮನಹಳ್ಳಿ – 38,940
ಮಹದೇವಪುರ – 46,233

DOGS 2

ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಯೋಕೆ ಬಿಬಿಎಂಪಿ ಕೂಡ ಮುಂದಾಗಿದ್ದು, ನಾಯಿಗಳ ಹಾವಳಿ ತಡೆಯೋಕೆ ವರ್ಷಕ್ಕೆ 3 ರಿಂದ 5 ಕೋಟಿ ರೂ. ಖರ್ಚು ಮಾಡುತ್ತಿದೆ. ಹಾಗೆಯೇ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕೋಕೆ ಕೋಟಿ, ಕೋಟಿ ಖರ್ಚು ಆಗ್ತಿದೆ. ಆದರೆ, ನಾಯಿಗಳ ನಿಯಂತ್ರಣ ಮಾತ್ರ ಸಾಧ್ಯವಾಗ್ತಿಲ್ಲ. ಇದಕ್ಕೆ ಕಾರಣವನ್ನು ನೀಡಲು ಬಿಬಿಎಂಪಿ ವಿಫಲವಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *