ರಾಜ್ಯದ ಹಲವೆಡೆ ಮೋಡ ಮುಸುಕಿದ ವಾತಾವರಣವಿದ್ದು, ಕರಾವಳಿ ಮತ್ತು ದಕ್ಷಿಣ ಕರ್ನಾಟಕದ ಒಳನಾಡು ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಪ್ರದೇಶಗಳಲ್ಲಿ ಈಗಾಗಲೇ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಕಳೆದ ಒಂದು ವಾರದಿಂದ ಮುಂಜಾನೆ ತುಂತುರು ಹನಿಬೀಳುತ್ತಿದ್ದು, ಸಂಜೆಯ ಹೊತ್ತಿಗೆ ಭಾರೀ ಮಳೆಯಾಗುತ್ತಿದೆ. ಇಂದು ಕೂಡ ಸಿಲಿಕಾನ್ ಸಿಟಿಯಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದ್ದು, ಇಂದೂ ಸಹ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 27-19
ಮಂಗಳೂರು: 28-24
ಶಿವಮೊಗ್ಗ: 27-21
ಬೆಳಗಾವಿ: 26-20
ಮೈಸೂರು: 28-20
ಮಂಡ್ಯ: 29-21
ರಾಮನಗರ: 29-24
ಮಡಿಕೇರಿ: 22-17
ಹಾಸನ: 25-19
ಚಾಮರಾಜನಗರ: 29-20
ಚಿಕ್ಕಬಳ್ಳಾಪುರ: 26-18
ಕೋಲಾರ: 27-19
ತುಮಕೂರು: 27-19
ಉಡುಪಿ: 28-24
ಕಾರವಾರ: 28-25
ಚಿಕ್ಕಮಗಳೂರು: 24-18
ದಾವಣಗೆರೆ: 28-21
ಚಿತ್ರದುರ್ಗ: 28-21
ಹಾವೇರಿ: 28-21
ಗದಗ: 29-21
ಕೊಪ್ಪಳ: 31-22
ರಾಯಚೂರು: 29-22
ಯಾದಗಿರಿ: 28-23
ವಿಜಯಪುರ: 27-19
ಬೀದರ್: 26-21
ಕಲಬುರಗಿ: 27-22
ಬಾಗಲಕೋಟೆ: 29-22