ಅಕಾಲಿಕ ಮಳೆಯಿಂದ ಸದ್ಯಕ್ಕೆ ರಾಜ್ಯಕ್ಕೆ ವಿರಾಮ ಇಲ್ಲ. ಮತ್ತೆ ಕೆಲವು ದಿನ ರಾಜ್ಯದಲ್ಲಿ ಧಾರಾಕಾರ ಮಳೆ ಆಗಬಹುದು ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯಬ್ಬರಿಸುವ ನಿರೀಕ್ಷೆ ಇದೆ. ರಾಜಧಾನಿ ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಲ್ಲೂ ಇಂದಿನಿಂದ ಮತ್ತೆ ಕೆಲವು ದಿನ ಮಳೆ ಆಗಬಹುದು. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲೂ ಧಾರಾಕಾರ ಮಳೆಯ ಎಚ್ಚರಿಕೆ ನೀಡಲಾಗಿದೆ. ಆದರೆ ಹವಾಮಾನ ಇಲಾಖೆ ಅಧಿಕೃತವಾಗಿ ಮಳೆಯ ಮುನ್ನೆಚ್ಚರಿಕೆ ನೀಡಿಲ್ಲ.
ಈ ನಡುವೆ ನವೆಂಬರ್ 26ರಿಂದ ಚಂಡಮಾರುತ ಮಳೆ ಆಗಲಿದ್ದು, ನವೆಂಬರ್ 29ರವರೆಗೂ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ. ಚಿಂತಾಮಣಿ ತಾಲೂಕಿನಲ್ಲಿ ವಾಡಿಕೆಯಿಂದ ಎರಡು ಪಟ್ಟು ಅಂದರೆ 1,500 ಮಿಲಿ ಮೀಟರ್ ಮಳೆ ಆಗಿದೆ. ಚಿಕ್ಕಬಳ್ಳಾಪುರ, ಕೋಲಾರ, ತುಮಕೂರಲ್ಲಿ ನವೆಂಬರ್ ತಿಂಗಳಲ್ಲಿ ವಾಡಿಕೆಯ 60 ಮಿಲಿ ಮೀಟರ್ ಮಳೆಗಿಂತ 300 ಮಿಲಿ ಮೀಟರ್ ಮಳೆ ಆಗಿದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 27-19
ಮಂಗಳೂರು: 32-24
ಶಿವಮೊಗ್ಗ: 31-21
ಬೆಳಗಾವಿ: 29-20
ಮೈಸೂರು: 29-19
ಮಂಡ್ಯ: 29-19
ರಾಮನಗರ: 28-20
ಮಡಿಕೇರಿ: 27-17
ಹಾಸನ: 28-19
ಚಾಮರಾಜನಗರ: 29-19
ಚಿಕ್ಕಬಳ್ಳಾಪುರ: 27-19
ಕೋಲಾರ: 27-19
ತುಮಕೂರು: 28-19
ಉಡುಪಿ: 32-25
ಕಾರವಾರ: 32-26
ಚಿಕ್ಕಮಗಳೂರು: 27-18
ದಾವಣಗೆರೆ: 30-21
ಚಿತ್ರದುರ್ಗ: 28-20
ಹಾವೇರಿ: 31-21
ಬಳ್ಳಾರಿ: 29-22
ಗದಗ: 30-21
ಕೊಪ್ಪಳ: 30-22
ರಾಯಚೂರು: 31-23
ಯಾದಗಿರಿ: 30-21
ವಿಜಯಪುರ: 30-21
ಬೀದರ್: 30-19
ಕಲಬುರಗಿ: 31-21
ಬಾಗಲಕೋಟೆ: 27-19