ಬೆಂಗಳೂರು: ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆಗಿನ ಪರಿಶೀಲನಾ ಸಭೆಯಲ್ಲಿ ಕರ್ನಾಟಕ ಪೊಲೀಸ್ ಅಪ್ಲಿಕೇಶನ್ ಅನ್ನು ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದು, ಪೊಲೀಸರ ಸೇವೆಯನ್ನು ಮತ್ತಷ್ಟು ಸರಳವಾಗಿ ಜನರಿಗೆ ಒದಗಿಸಲು ಸಹಕಾರಿಯಾಗಿದೆ.
`ಕರ್ನಾಟಕ ಸ್ಟೇಟ್ ಪೊಲೀಸ್’ ಹೆಸರಿನಲ್ಲಿ ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಮೊಬೈಲ್ ಫೋನ್ ಗಳಲ್ಲಿ ಬಳಕೆ ಮಾಡಲು ಅವಕಾಶವಿದೆ. ಅಲ್ಲದೇ ಆ್ಯಪ್ ಪ್ರಮುಖವಾಗಿ ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆಯಲ್ಲಿ ಲಭ್ಯವಿದೆ.
Advertisement
Advertisement
ವಿಶೇಷತೆಗಳೇನು?
ಕರ್ನಾಟಕ ಪೊಲೀಸ್ ಆ್ಯಪ್ ಅನ್ನು ಎಲ್ಲರು ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದ್ದು, ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದು ಮಾಡುವ ಮೂಲಕ ಆ್ಯಪ್ ಗೆ ಚಾಲನೆ ನೀಡಬೇಕಾಗುತ್ತದೆ. ಬಳಿಕ ಬಳಕೆದಾರರು ನೀಡಿರುವ ನಂಬರ್ ಮೂಲಕ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂದೇಶ ರವಾನೆ ಮಾಡಬಹುದಾಗಿದೆ.
Advertisement
ಆ್ಯಪ್ ನಲ್ಲಿ ಎಸ್‍ಒಎಸ್ ಬಟನ್ ಸಹ ಲಭ್ಯವಿದ್ದು, ತುರ್ತು ಸಮಯದಲ್ಲಿ ಈ ಬಟನ್ ಮೇಲೆ ಒತ್ತುವ ಮೂಲಕ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದಾಗಿದೆ. ಫೋನ್ ನ ಜಿಪಿಎಸ್ ಲೋಕೇಶಷನ್ ಮೂಲಕ ತಾವಿರುವ ಸ್ಥಳದ ಬಗ್ಗೆಯೂ ಮಾಹಿತಿ ನೀಡಬಹುದಾಗಿದೆ.
Advertisement
ವಿಶೇಷವಾಗಿ ಆ್ಯಪ್ ದೂರು ದಾಖಲಿಸಲು ಅವಕಾಶ ನೀಡಲಾಗಿದ್ದು, ಸಾರ್ವಜನಿಕರಿಗೆ ಹತ್ತಿರದ ಪೊಲೀಸ್ ಠಾಣೆಯ ಮಾಹಿತಿ, ಮೊಬೈಲ್ ನಂಬರ್, ಇ-ಮೇಲ್, ಪೊಲೀಸ್ ಅಧಿಕಾರಿಗಳ ಮಾಹಿತಿ ಸೇರಿದಂತೆ ಗೂಗಲ್ ಮ್ಯಾಪ್ ಜಿಪಿಎಸ್ ಮೂಲಕ ಪೊಲೀಸ್ ಠಾಣೆಯ ಮಾರ್ಗವನ್ನು ಪಡೆಯಬಹುದಾಗಿದೆ. ಈಗಾಗಲೇ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಬಗ್ಗೆ ಎಫ್‍ಐಆರ್ ಪ್ರತಿಯನ್ನು ಡೌನ್‍ಲೋಡ್ ಮಾಡಿಕೊಳ್ಳುವ ಹಾಗೂ ಕಳ್ಳತವಾದ ವಾಹನಗಳ ಬಗ್ಗೆ ವಿವರವನ್ನು ಪಡೆಯುವ ಆಯ್ಕೆ ಆ್ಯಪ್ ನಲ್ಲಿ ಲಭ್ಯವಿದೆ.
https://www.facebook.com/CMofKarnataka/photos/a.720456501336150.1073741828.708459142535886/1718420591539731/?type=3&theater
ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಟೋ, ವಿಡಿಯೋ, ಫೈಲ್ ಗಳು ಮತ್ತು ಆಡಿಯೋಗಳನ್ನು ಸಹ ಆಪ್ ಲೋಡ್ ಮಾಡಬಹುದಾಗಿದೆ. ಕರ್ನಾಟಕ ಯಾವುದೇ ಠಾಣೆಯಲ್ಲೂ ನಾಪತ್ತೆಯಾಗಿರುವ ಪ್ರಕರಣಗಳ ಮಾಹಿತಿಯನ್ನು ವಿಕ್ಷೀಸಬಹುದಾಗಿದೆ. ಅಲ್ಲದೇ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ನೀಡುವ ಎಲ್ಲಾ ಮಾಹಿತಿಯನ್ನು ಈ ಆ್ಯಪ್ ಮೂಲಕ ಪಡೆಯಬಹುದಾಗಿದೆ.
ಪ್ರತಿಯೊಂದು ಪೊಲೀಸ್ ನಿರ್ವಹಣಾ ಕೊಠಡಿಯೂ ಸಹ ಆ್ಯಪ್ ನೊಂದಿಗೆ ಸಂಪರ್ಕ ಹೊಂದಿದ್ದು, ದೂರುಗಳ ಕುರಿತು ಪ್ರತಿಕ್ರಿಯೆ ಪಡೆಯಬಹುದು. ಸಾರ್ವಜನಿಕರು ನೀಡುವ ಪ್ರತಿ ದೂರಿಗೂ ಪ್ರತ್ಯೇಕ ಸಂಖ್ಯೆಯನ್ನು ನೀಡಲಾಗುತ್ತದೆ. ಅಲ್ಲದೇ ದೂರು ಸ್ವೀಕೃತಿ ಆಗಿರುವ ಕುರಿತು ಮೇಸೆಜ್ ದೂರದಾರರ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
ಈಗಾಗಲೇ ಗೂಗಲ್ ಸ್ಟೋರ್ ನಲ್ಲಿ ಬಿಡುಗಡೆಯಾಗಿರುವ ಕೆಎಸ್‍ಪಿ ಆ್ಯಪ್ ಕುರಿತು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 4.6 ಸ್ಟಾರ್ ರೇಟಿಂಗ್ ಪಡೆದಿದೆ. ಇದೂವರೆಗೂ 10 ಸಾವಿರಕ್ಕೂ ಅಧಿಕ ಮಂದಿ ಡೌನ್ಲೋಡ್ ಮಾಡಿದ್ದಾರೆ.
ಆ್ಯಂಡ್ರಾಯ್ಡ್ ಅಪ್ಲಿಕೇಶನ್ ಡೌನ್‍ಲೋಡ್ ಮಾಡಲು ಕ್ಲಿಕ್ ಮಾಡಿ: ಕರ್ನಾಟಕ ಸ್ಟೇಟ್ ಪೊಲೀಸ್
https://www.facebook.com/CMofKarnataka/photos/a.720456501336150.1073741828.708459142535886/1718300214885102/?type=3&theater