KSOU ಕರ್ಮಕಾಂಡ: 500 ಸಿಬ್ಬಂದಿ ಜಾಗಕ್ಕೆ 1,300 ಸಿಬ್ಬಂದಿ ನೇಮಕ; ಆದಾಯ 86 ಕೋಟಿ, ಖರ್ಚು 263 ಕೋಟಿ

Public TV
2 Min Read
KSOU

ಮೈಸೂರು: ಇನ್ನೆರೆಡು ವರ್ಷಗಳಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮುಚ್ಚಿ ಹೋಗಲಿದೆಯೇ? ಎನ್ನುವ ಪ್ರಶ್ನೆ ಹುಟ್ಟುವಂತೆ ಮಾಡಿದೆ ವಿಶ್ವವಿದ್ಯಾಲಯದ 2023-24ರ ಆಯವ್ಯಯ.

ಹೌದು. ವಿಶ್ವವಿದ್ಯಾಲಯಕ್ಕೆ ಇರುವುದು 86 ಕೋಟಿ ಆದಾಯ. ಆದ್ರೆ ವಿವಿ ಖರ್ಚು ಮಾಡುತ್ತಿರುವುದು 263 ಕೋಟಿ ರೂ. ಹೆಚ್ಚುವರಿಯಾಗಿ 177 ಕೋಟಿ ಖರ್ಚು ಮಾಡಿದೆ. ಸರ್ಕಾರದಿಂದ ವಿವಿಗೆ ಒಂದು ಪೈಸೆ ಅನುದಾನವೂ ಬರುವುದಿಲ್ಲ. ಆದ್ರೂ ಖರ್ಚು ಮಾತ್ರ ಆದಾಯಕ್ಕಿಂತ ಮೂರು ಪಟ್ಟು ಹೆಚ್ಚಿದೆ. ಇದನ್ನೂ  ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಸುದ್ದಿ ಪ್ರಸಾರವಾಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು

Jagadish Babu

ವಿವಿಯ ಖಾತೆಯಲ್ಲಿನ ಡೆಪಾಸಿಟ್ ಹಣವನ್ನೇ ತೆಗೆದು ಖರ್ಚು ಮಾಡಲು ವಿವಿಯ ಕುಲಪತಿ ಮುಂದಾಗಿದ್ದಾರೆ. ಇದೇ ರೀತಿ 2-3 ವರ್ಷ ಹಣ ವ್ಯಯ ಮಾಡಿದ್ರೆ ಸಂಪೂರ್ಣ ಹಣ ಬರಿದಾಗಲಿದೆ. ಈ ರೀತಿ ಹಣ ಬರಿದಾದ್ರೆ ವಿವಿಯ ನೌಕರರಿಗೂ ವೇತನ ನೀಡುವುದಕ್ಕೂ ಸಮಸ್ಯೆಯಾಗುವ ಸ್ಥಿತಿ ಎದುರಾಗಲಿದೆ. ಇದನ್ನೂ  ಓದಿ: ತಮಿಳುನಾಡಿಗೆ ಕಾವೇರಿ ನೀರು; ಇಂದು ಕೆಆರ್‌ಎಸ್ ಡ್ಯಾಂ ಮುತ್ತಿಗೆಗೆ ಅನ್ನದಾತರ ಕರೆ

ರಾಜ್ಯ ಮುಕ್ತ ವಿವಿಯಲ್ಲಿ ಯುಜಿಸಿ ಹಾಗೂ ಸರ್ಕಾರದ ನಿಯಮಗಳಿಗೆ ಎಳ್ಳಷ್ಟು ಬೆಲೆಯೇ ಇಲ್ಲ. ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿ ಅಕ್ರಮ ನೇಮಕಾತಿಯೂ ನಡೆದಿದೆ. ನಿಯಮಗಳ ಪ್ರಕಾರ 500 ಬೋಧಕೇತರ ಸಿಬ್ಬಂದಿಗೆ ಮಾತ್ರ ಅವಕಾಶವಿದೆ. ಆದರೆ ಮುಕ್ತ ವಿವಿಯಲ್ಲಿ 1,300ಕ್ಕೂ ಹೆಚ್ಚು ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂಬ ಆರೋಪವಿದೆ. ವಿವಿಯ ಅಕ್ರಮದ ವಿರುದ್ಧ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ಹೆಚ್.ಕೆ ಜಗದೀಶ್ ಬಾಬು ಈ ಮಾಹಿತಿ ನೀಡಿದ್ದಾರೆ.

ಅಲ್ಲದೇ ಕಳೆದ ಮಾರ್ಚ್ ತಿಂಗಳಿನಲ್ಲಿ ಬಳ್ಳಾರಿಯ ಪ್ರಾದೇಶಿಕ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಪುಸ್ತಕ ಇಟ್ಟುಕೊಂಡೇ ಪರೀಕ್ಷೆ ಬರೆದಿದ್ದಾರೆ. ಇದರಿಂದ ಭ್ರಷ್ಟಾಚಾರ ನಡೆದಿದೆ ಎಂಬ ಅನುಮಾನವಿದೆ. ಇದನ್ನ ನಮ್ಮಲ್ಲೇ ತನಿಖೆ ಮಾಡಿ ಮುಚ್ಚಿಹಾಕುವುದು ಬೇಡ. ಈ ಹಿಂದೆಯೂ ಒಂದು ಕೆಎಸ್‌ಒಯು ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಲಾಗಿದೆ. ಅದೇ ರೀತಿ ಈ ಪ್ರಕರಣವನ್ನೂ ಉನ್ನತಮಟ್ಟದ ತನಿಖೆಗೆ ನೀಡಬೇಕು ಎಂದು ಜಗದೀಶ್ ಬಾಬು ಒತ್ತಾಯಿಸಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article