ಬೆಂಗಳೂರು: ಗ್ರಾಮ ಸ್ವರಾಜ್ಯದ ಕನಸು ಕಾಣುತ್ತಿರುವ ಸರ್ಕಾರ ಸ್ವರಾಜ್ಯದ ಬದಲು ದಿವಾಳಿ ಆಗೋಕೆ ಹೊರಟಿದೆ. ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೆ ಅಗತ್ಯವಾದ ಹಣ ಸಂಗ್ರಹ ಮಾಡೋದ್ರಲ್ಲಿ ಕಳೆದ 3 ವರ್ಷಗಳಿಂದ ಸಿಎಂ ಸಿದ್ದರಾಮಯ್ಯ ಸರ್ಕಾರ ಹಿಂದೆ ಬಿದ್ದಿದೆ. ಇದರಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.
ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೆ ಅಗತ್ಯವಾದ ಹಣ ಸಂಗ್ರಹ ಮಾಡೋದ್ರಲ್ಲಿ ಕಳೆದ 3 ವರ್ಷಗಳಿಂದ ರಾಜ್ಯ ಸರ್ಕಾರ ಹಿಂದೆ ಬಿದ್ದಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಅಂಕಿ ಅಂಶದ ಪ್ರಕಾರ ಕಳೆದ 3 ವರ್ಷಗಳಲ್ಲಿ ಬರೋಬ್ಬರಿ 2 ಸಾವಿರ ಕೋಟಿಗಳಷ್ಟು ಸರ್ಕಾರ ಟ್ಯಾಕ್ಸ್ ಸಂಗ್ರಹ ಮಾಡಬೇಕು.
Advertisement
2014-15ನೇ ಸಾಲಿನಲ್ಲಿ 837 ಕೋಟಿ ರೂ. ಟ್ಯಾಕ್ಸ್ ಬೇಡಿಕೆ ಇತ್ತು. ಆದರೆ 228 ಕೋಟಿ ರೂ. ಮಾತ ಸಂಗ್ರಹವಾಗಿದೆ. 608 ಕೋಟಿ ರೂ. ಗಳಷ್ಟು ತೆರಿಗೆ ಹಣ ಇನ್ನೂ ಬಾಕಿಯಿದೆ. 2015-16ನೇ ಸಾಲಿನಲ್ಲಿ 877 ಕೋಟಿ ಸಂಗ್ರಹ ಮಾಡಬೇಕಿತ್ತು. ಆದ್ರೆ ಸಂಗ್ರಹ ಮಾಡಿದ್ದು ಕೇವಲ 216 ಕೋಟಿ. ಬಾಕಿ 660 ಕೋಟಿ ಉಳಿಸಿಕೊಂಡಿದೆ. 2016-17ನೇ ಸಾಲಿನಲ್ಲಿ ಟ್ಯಾಕ್ಸ್ ಬೇಡಿಕೆ 957 ಕೋಟಿ ಇತ್ತು ಆದ್ರೆ ವಸೂಲಿ ಮಾಡಿರೋದು 151 ಕೋಟಿ. ಬಾಕಿ ಇರೋದು 805 ಕೋಟಿ. ಒಟ್ಟಾರೆ 2671 ಕೋಟಿ ಟ್ಯಾಕ್ಸ್ ಕಲೆಕ್ಟ್ ಮಾಡಬೇಕಿದ್ದ ಸರ್ಕಾರ ಮಾಡಿದ್ದು ಮಾತ್ರ 595 ಕೋಟಿ. 3 ವರ್ಷಗಳಿಂದ 2073 ಕೋಟಿ ಟ್ಯಾಕ್ಸ್ ಸಂಗ್ರಹ ಬಾಕಿ ಇದೆ.
Advertisement
ಕರ್ನಾಟಕ ಗ್ರಾಮ ಸ್ವರಾಜ್ & ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕಾರ ವಾಸದ ಕಟ್ಟಡ, ವಾಣಿಜ್ಯ ಕಟ್ಟಡಗಳು, ಕಾರ್ಖಾನೆ, ಐಟಿ ಪಾರ್ಕ್, ವಿಂಡ್ ಮಿಲ್, ಮನರಂಜನಾ ತೆರಿಗೆ, ಮೊಬೈಲ್ ಟವರ್ ಇದೆಲ್ಲದಕ್ಕೂ ಟ್ಯಾಕ್ಸ್ ವಿಧಿಸಬೇಕು. ಆದ್ರೆ ಸರ್ಕಾರ ಇವರಿಂದ ಒಂದೇ ಒಂದು ರೂಪಾಯಿ ಟ್ಯಾಕ್ಸ್ ಸಂಗ್ರಹ ಮಾಡಿಲ್ಲ. ಇನ್ನು ಗ್ರಾಮ ಪಂಚಾಯ್ತಿಗಳು ಸಂಗ್ರಹ ಮಾಡಿರೋ 595 ಕೋಟಿ ಹಣವನ್ನು ಇಲಾಖೆಯ ಬೊಕ್ಕಸಕ್ಕೆ ನೀಡಿಲ್ಲ. ಇನ್ನೂ ತೆರಿಗೆ ಸಂಗ್ರಹ ಮಾಡಿಲ್ಲದನ್ನು ಒಪ್ಪಿಕೊಂಡ ಗ್ರಾಮೀಣಾಭಿವೃದ್ಧಿ ಸಚಿವರು ಬರದ ಹಿನ್ನೆಲೆಯಲ್ಲಿ ಕೆಲ ಜಿಲ್ಲೆಗಳಲ್ಲಿ ಟಾಕ್ಸ್ ಸಂಗ್ರಹ ಮಾಡಿಲ್ಲ ಎಂದು ಹೇಳುತ್ತಿದ್ದಾರೆ.