ಬೆಂಗಳೂರು: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೊಸ ಆದ್ಯತಾ ಪಡಿತರ ಚೀಟಿ (BPL) ಕಾರ್ಡ್ ಹಂಚಿಕೆಗೆ ಕೊನೆಗೂ ರಾಜ್ಯ ಸರ್ಕಾರ (Government Of Karnataka) ನಿರ್ಧಾರ ಮಾಡಿದೆ.
ಹೊಸದಾಗಿ ಬಿಪಿಎಲ್ ಕಾರ್ಡ್ (BPL Card) ಹಂಚಿಕೆಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಈ ಮೂಲಕ ಹೊಸ ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿದ್ದ ಜನರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಇದನ್ನೂ ಓದಿ: ಪಾಕ್ ಕದನಕ್ಕೂ ಮುನ್ನವೇ ಇಂಗ್ಲೆಂಡ್‌ಗೆ ಆಘಾತ – ಹೆಸರಿಲ್ಲದ ವೈರಸ್‌ಗೆ ತುತ್ತಾದ ಸ್ಟೋಕ್ಸ್ ಪಡೆ
ಹೊಸದಾಗಿ 1,55,927 ಕಾರ್ಡ್ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ವರ್ಷ ಆಗಸ್ಟ್ ಅಂತ್ಯದ ವರೆಗೆ ಆನ್ ಲೈನ್ ಮೂಲಕ ಸುಮಾರು 2,77,662 ಅರ್ಜಿಗಳು ಬಿಪಿಎಲ್ ಕಾರ್ಡ್‌ಗೆ ಸಲ್ಲಿಕೆ ಆಗಿದ್ದವು. ಈಗ ಅವುಗಳ ಪರಿಶೀಲನೆ ಮಾಡಿರೋ ರಾಜ್ಯ ಸರ್ಕಾರ ಅರ್ಹತೆ ಪಡೆದ 1,55,927 ಅರ್ಜಿಗಳಿಗೆ ಕಾರ್ಡ್ ನೀಡಲು ಆದೇಶ ಮಾಡಿದೆ. ಇದನ್ನೂ ಓದಿ: ಜರ್ಮನಿಗೆ 8.5 ಲಕ್ಷ ರೂ. ದಂಡ ವಿಧಿಸಿದ ಫಿಫಾ
ಹೊಸ ಕಾರ್ಡ್ ನೀಡುವೆ ವೇಳೆ ಸರ್ಕಾರ ನಿಗದಿ ಮಾಡಿರುವ ಮಾನದಂಡಗಳು ಪಾಲನೆ ಆಗಬೇಕು ಅಂತ ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೆ ಕಾರ್ಡ್ ಹಂಚಿಕೆ ವೇಳೆ 2017 ರಿಂದ 2021ರ ವರೆಗೆ ಅರ್ಜಿ ಸಲ್ಲಿಕೆಯಾದವರಿಗೆ ಮೊದಲ ಆದ್ಯತೆ ನೀಡಬೇಕು ಅಂತ ತಿಳಿಸಿದೆ. ಅಲ್ಲದೆ ಬಿಪಿಎಲ್ ಕಾರ್ಡ್ ಹಂಚಿಕೆ ವೇಳೆ ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಯಾವ ಜಿಲ್ಲೆಗೆ ಎಷ್ಟು ಕಾರ್ಡ್ ಹಂಚಿಕೆ?
ಬೆಂಗಳೂರು (Bengaluru) – 13,532, ಬೆಳಗಾವಿ- 10,874, ಕಲಬುರಗಿ- 15,432, ವಿಜಯಪುರ-10,980, ಬಾಗಲಕೋಟ-7,290, ಬೆಂಗಳೂರು ಪೂರ್ವ- 6,279, ಬೆಂಗಳೂರು ಉತ್ತರ- 4,484, ಬೆಂಗಳೂರು ದಕ್ಷಿಣ- 4,149, ಬೆಂಗಳೂರು – 7,438, ಹಾಸನ- 5,251, ಕೊಪ್ಪಳ- 6,709, ಯಾದಗಿರಿ- 4,289, ಮೈಸೂರು (Mysuru)- 5,046, ರಾಯಚೂರು- 5027 ಕಾರ್ಡ್‌ಗಳನ್ನು ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ.