2017ನೇ ಸಾಲಿನ ಕರ್ನಾಟಕ ಚಲನಚಿತ್ರ ರಾಜ್ಯ ಪ್ರಶಸ್ತಿಯನ್ನು ನಾಲ್ಕು ವರ್ಷಗಳ ನಂತರ ಸರಕಾರ ಪ್ರದಾನ ಮಾಡಲಾಗುತ್ತಿದೆ. ಡಾ.ರಾಜ್ ಕುಮಾರ್ ಹುಟ್ಟು ಹಬ್ಬದ ದಿನದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು 2017ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ
Advertisement
ಪ್ರತಿ ವರ್ಷವೂ ಆಯಾ ಕ್ಯಾಲೆಂಡರ್ ವರ್ಷದ ಚಲನಚಿತ್ರ ಪ್ರಶಸ್ತಿಯನ್ನು ನೀಡುತ್ತಾ ಬಂದಿರುವುದು ವಾಡಿಕೆ ಆಗಿತ್ತು. 2017ರಿಂದ ಈವರೆಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿಲ್ಲ. 2017ರಲ್ಲಿ ಎರಡು ಬಾರಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದ್ದರೂ, ನಾನಾ ಕಾರಣಗಳಿಂದಾಗಿ ನಿಗದಿತ ದಿನಾಂಕಗಳಂದು ಅವುಗಳು ನಡೆಯಲಿಲ್ಲ. ಇದನ್ನೂ ಓದಿ : ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ
Advertisement
Advertisement
2018 ನವೆಂಬರ್ 24 ರಂದು ಬೆಂಗಳೂರಿನಲ್ಲಿ 2017ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಬೇಕಿತ್ತು. ಮಂಡ್ಯದ ಬಳಿ ಬಸ್ಸೊಂದು ಕೆರೆಗೆ ಬಿದ್ದು ಹಲವರು ಪ್ರಾಣ ಕಳೆದುಕೊಂಡರು. ಜತೆಗೆ ಅಂದೇ ಅಂಬರೀಶ್ ಕೂಡ ನಿಧನರಾದರು. ಹಾಗಾಗಿ ಪ್ರದಾನ ಸಮಾರಂಭ ನಡೆಯಲಿಲ್ಲ. ನಂತರ ಕೊರೋನಾ ಮತ್ತಿತರ ಕಾರಣಗಳನ್ನು ಕೊಟ್ಟು ಪ್ರಶಸ್ತಿ ವಿತರಿಸಲಿಲ್ಲ. ಕೊನೆಗೂ ಏ.24 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?
Advertisement
ಈ ಸಮಾರಂಭದಲ್ಲಿ ಡಾ.ವಿಷ್ಣುವರ್ಧನ್ ಪ್ರಶಸ್ತಿಯನ್ನು ಜಿ.ಎನ್.ಲಕ್ಷ್ಮೀಪತಿ, ಡಾ.ರಾಜ್ ಕುಮಾರ್ ಪ್ರಶಸ್ತಿಯನ್ನು ನಿರ್ದೇಶಕಿ ಲಕ್ಷ್ಮಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಎಸ್.ನಾರಾಯಣ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆದರ್ಶ ಈಶ್ವರಪ್ಪ ಅವರ ಶುದ್ದಿ, ಕೋಡ್ಲು ರಾಮಕೃಷ್ಣ ಅವರ ಮಾರ್ಚ್ 24 ಮತ್ತು ಅಭಯ ಸಿಂಹ ನಿರ್ದೇಶನದ ಪಡ್ಡಾಯಿ ಕ್ರಮವಾಗಿ ಪ್ರಥಮ, ದ್ವಿತಿಯಾ, ತೃತಿಯ ಪ್ರಶಸ್ತಿಗಳು ಪಡೆದಿವೆ. ಅತ್ಯುತ್ತಮ ಮನರಂಜನಾ ಸಿನಿಮಾವಾಗಿ ಪುನೀತ್ ರಾಜ್ ಕುಮಾರ್ ನಟನೆಯ ‘ರಾಜಕುಮಾರ’ ಆಯ್ಕೆಯಾಗಿದೆ.