ಬೆಂಗಳೂರು: 2016ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನ ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಕವಿತಾ ಲಂಕೇಶ್ ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿಯಿಂದ ಸಿಎಂಗೆ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ ಸಲ್ಲಿಕೆಯಾಗಿದೆ. ಏಪ್ರಿಲ್ 24ರಂದು ಡಾ. ರಾಜ್ ಕುಮಾರ್ ಹುಟ್ಟುಹಬ್ಬದ ದಿನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಅಮರಾವತಿ ಚಿತ್ರಕ್ಕಾಗಿ ಅಚ್ಯುತ್‍ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಬ್ಯೂಟಿಫುಲ್ ಮನಸುಗಳು ಚಿತ್ರಕ್ಕಾಗಿ ಶೃತಿ ಹರಿಹರನ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 126 ಚಿತ್ರಗಳಲ್ಲಿ ಅಮರಾವತಿ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನ ಗಿಟ್ಟಿಸಿಕೊಂಡಿದೆ.
Advertisement
2016ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪೂರ್ಣ ಪಟ್ಟಿ
Advertisement
* ಅತ್ಯುತ್ತಮ ನಟ – ಅಚ್ಯುತ್‍ಕುಮಾರ್ (ಅಮರಾವತಿ)
* ಅತ್ಯುತ್ತಮ ನಟಿ – ಶೃತಿ ಹರಿಹರನ್ (ಬ್ಯೂಟಿಫುಲ್ ಮನಸುಗಳು)
* ಮೊದಲ ಅತ್ಯುತ್ತಮ ಚಿತ್ರ – ಅಮರಾವತಿ
* ದ್ವಿತೀಯ ಅತ್ಯುತ್ತಮ ಚಿತ್ರ – ರೈಲ್ವೇ ಚಿಲ್ಡ್ರನ್
* ತೃತೀಯ ಅತ್ಯುತ್ತಮ ಚಿತ್ರ- ಅಂತರ್ಜಲ
Advertisement
* ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ- ಮೂಡ್ಲ ಸೀಮೆಯಲಿ
* ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ- ಕಿರಿಕ್ ಪಾರ್ಟಿ
* ಅತ್ಯುತ್ತಮ ಮಕ್ಕಳ ಚಿತ್ರ – ಜೀರ್ ಜಿಂಬೆ
* ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಚಿತ್ರ- ಮದಿಪು (ತುಳು ಭಾಷೆ)
* ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ- ರಾಮ ರಾಮಾ ರೇ
Advertisement
* ಅತ್ಯುತ್ತಮ ಪೋಷಕ ನಟ – ನವೀನ್ ಡಿ ಪಡೀಲ್ (ಕುಡ್ಲ ಕೆಫೆ)
* ಅತ್ಯುತ್ತಮ ಪೋಷಕ ನಟಿ – ಅಕ್ಷತಾ ಪಾಂಡವಪುರ (ಪಲ್ಲಟ)
* ಅತ್ಯುತ್ತಮ ಕಥೆ – ನಂದಿತಾ ಯಾದವ್ (ರಾಜು ಎದೆಗೆ ಬಿದ್ದ ಅಕ್ಷರ)
* ಅತ್ಯುತ್ತಮ ಚಿತ್ರಕಥೆ – ಅರವಿಂದ ಶಾಸ್ತ್ರಿ(ಕಹಿ)
* ಅತ್ಯುತ್ತಮ ಸಂಭಾಷಣೆ – ಬಿಎಂ ಗಿರಿಧರ್ (ಅಮರಾವತಿ)
* ಅತ್ಯುತ್ತಮ ಛಾಯಾಗ್ರಹಣ- ಶೇಖರ್ ಚಂದ್ರ (ಮುಂಗಾರು ಮಳೆ 2)
* ಅತ್ಯುತ್ತಮ ಸಂಗೀತ ನಿರ್ದೇಶಕ- ಎಂಆರ್ ಚರಣ್ ರಾಜ್ (ಜೀರ್ ಜಿಂಬೆ)
* ಅತ್ಯುತ್ತಮ ಸಂಕಲನ – ಸಿ. ರವಿಚಂದ್ರನ್ (ಮಮ್ಮಿ)
* ಅತ್ಯುತ್ತಮ ಬಾಲನಟ – ಮಾ. ಮನೋಹರ್ ಕೆ (ರೈಲ್ವೆ ಚಿಲ್ಡ್ರನ್)
* ಅತುತ್ತಮ ಬಾಲನಟಿ – ಬೇಬಿ ಸಿರಿವಾನಳ್ಳಿ (ಜೀರ್‍ಜಿಂಬೆ)
* ಅತ್ಯುತ್ತಮ ಬಾಲನಟಿ – ಬೇಬಿ ರೇವತಿ (ಬೇಟಿ)
* ಅತ್ಯುತ್ತಮ ಕಲಾ ನಿರ್ದೇಶನ- ಶಶಿಧರ ಅಡಪ (ಉಪ್ಪಿನ ಕಾಗದ)
* ಅತ್ಯುತ್ತಮ ಗೀತ ರಚನೆ- ಕಾರ್ತಿಕ್ ಸರಗೂಡು (ಜೀರ್ ಜಿಂಬೆ ಚಿತ್ರದ ದೊರೆ ಓ ದೊರೆ ಹಾಡಿಗಾಗಿ)
* ಅತ್ಯುತ್ತಮ ಗಾಯಕ – ವಿಜಯ್ ಪ್ರಕಾಶ್ – ಬ್ಯೂಟಿಫುಲ್ ಮನಸುಗಳು ಚಿತ್ರದ ನಮ್ಮೂರಲ್ಲಿ ಚಳಿಗಾಲದಲ್ಲಿ ಹಾಡಿಗಾಗಿ)
* ಅತ್ಯುತ್ತಮ ಗಾಯಕಿ ಸಂಗೀತಾ ರವೀಂದ್ರನಾಥ್ (ಜಲ್ಸಾ ಚಿತ್ರದ ನನ್ನೆದೆ ಬೀದಿಗೆ ಹಾಡಿಗಾಗಿ)
ತೀರ್ಪುಗಾರರ ವಿಶೇಷ ಪ್ರಶಸ್ತಿ
* ವಸ್ತ್ರಾಲಂಕಾರ- ಚಿನ್ಮಯ್ (ಸಂತೆಯಲ್ಲಿ ನಿಂತ ಕಬೀರ ಚಿತ್ರಕ್ಕೆ)
* ಅತ್ಯುತ್ತಮ ನಿರ್ಮಾಣ ನಿರ್ವಾಹಕ- ಕೆವಿ ಮಂಜಯ್ಯ (ಮುಂಗಾರು ಮಳೆ-2 ಚಿತ್ರಕ್ಕೆ)
ರಾಜ್ಯ ಚಲನಚಿತ್ರ ಪ್ರಶಸ್ತಿ 2016 – ಮೊದಲನೆ ಅತ್ಯುತ್ತಮ ಚಿತ್ರ : ಅಮರಾವತಿ #Amaravati gets Best Film awards pic.twitter.com/NO5mRY47L8
— PublicTV (@publictvnews) April 11, 2017
Karnataka state film awards 2016 – Best Actor – Achyuth Kumar, Film- #Amaravati pic.twitter.com/PDGyMc703B
— PublicTV (@publictvnews) April 11, 2017