ಬೆಂಗಳೂರು: `ಬೆಳಗ್ಗೆ ಎದ್ದರೆ ಸಾಕು ಹೊರಗೆ ಕಾಲಿಡೋಕೆ ಆಗಲ್ಲ, ಚಳಿಯಪ್ಪಾ ಚಳಿ’ ಇದು ಸದ್ಯ ಬೆಂಗಳೂರಿನ (Bengaluru) ಪರಸ್ಥಿತಿ. ಹಾಗಾಗಿ ಚಳಿ ಇನ್ನೂ ಎಷ್ಟು ದಿನ ಇರುತ್ತೆ? ಇದ್ರಿಂದ ಜನರ ಆರೋಗ್ಯದಲ್ಲಾದ ಏರುಪೇರುಗಳೇನು? ಅನ್ನೋ ಚಿಂತೆ ಜನರಲ್ಲಿ ಮನೆ ಮಾಡಿದ್ದು, ಹವಾಮಾನ ಇಲಾಖೆ (Meteorological Department) ಆರೋಗ್ಯ (Health) ಸಲಹೆ ನೀಡಿದೆ.
Advertisement
ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಚಳಿಯಿದೆ. ಬೆಂಗಳೂರಿಗೂ ಸಹ ಕೊರವ ಚಳಿಯ ಎಫೆಕ್ಟ್ ತಟ್ಟಿದ್ದು, ಸಿಲಿಕಾನ್ ಸಿಟಿ ಜನ ಥಂಡಾ ಹೊಡೆದಿದ್ದಾರೆ. ಈ ಚಳಿ ಕಾಟ ಈ ತಿಂಗಳ ಕೊನೆಯವರೆಗೂ ಇರಲಿದೆ ಅಂತಾ ಹವಾಮಾನ ಇಲಾಖೆ ಹೇಳಿದೆ. ಆದ್ರೆ ಸಂಕ್ರಾಂತಿವರೆಗೆ (Sankranti Festival) ಹೆಚ್ಚು ಶೀತ, ಚಳಿಗಾಳಿ ಇರಲಿದೆ. ಮುಂದಿನ ವಾರದಲ್ಲಿ ಕಡಿಮೆಯಾಗಲಿದೆ ಎಂದು ಹವಾಮಾನ ತಜ್ಞ ಪ್ರಸಾದ್ ಹೇಳಿದ್ದಾರೆ. ಇದನ್ನೂ ಓದಿ: ಪಿಲ್ಲರ್ ದುರಂತ ಬಳಿಕ ಮತ್ತೊಂದು ಎಡವಟ್ಟು – ಬ್ರಿಗೇಡ್ ರಸ್ತೆಯಲ್ಲಿ 30 ಅಡಿ ಆಳಕ್ಕೆ ಕುಸಿದ ರಸ್ತೆ
Advertisement
ಕಳೆದ ಕೆಲ ದಿನಗಳಿಂದ ಹೆಚ್ಚಾಗಿದ್ದು, ಬಹುತೇಕ ಕಡೆ ಕನಿಷ್ಠ ಉಷ್ಣಾಂಶ ಕೂಡ ಗಮನಾರ್ಹವಾಗಿ ಇಳಿಕೆ ಕಂಡಿದೆ. ನಿನ್ನೆ ಅತೀ ಕಡಿಮೆ ಕನಿಷ್ಠ ಉಷ್ಣಾಂಶ ಬಾಗಲಕೋಟೆಯಲ್ಲಿ 8.4 ದಾಖಲಾಗಿದೆ. ಇಂದು ಬೀದರ್, ವಿಜಯಪುರ, ಬಾಗಲಕೋಟೆ, ಬಳ್ಳಾರಿ ಹಾಗೂ ಮಂಡ್ಯ (Mandya) ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸಹ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ರುಚಿಯಾದ ಅನಾನಸ್ ಕೇಸರಿಬಾತ್ ಮಾಡಿ ಮಕ್ಕಳಿಗೆ ನೀಡಿ
Advertisement
Advertisement
ಇನ್ನೂ ಶೀತ ಅಲೆಯ ಬಗ್ಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕೆಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಈ ಚಳಿಯಿಂದ ಮೂಗಿನಿಂದ ರಕ್ತ ಬರಬಹುದು, ಚರ್ಮದಲ್ಲಿ ಡ್ರೈನೆಸ್ (ಚರ್ಮ ಒಣಗುವಿಕೆ) ಉಂಟಾಗಬಹುದು, ಚರ್ಮ ತುರಿಕೆಯ ಸಾಧ್ಯತೆ ಹಾಗೂ ವೃದ್ಧರು ಮಕ್ಕಳಿಗೆ ನಡುಕ ಉಂಟಾಗಬಹುದು ಎಚ್ಚರಿಕೆ ನೀಡಿದ್ದಾರೆ.
ಆದ್ದರಿಂದ ತಲೆ, ಕೈ, ಕಾಲಿಗೆ ಸಾಕ್ಸ್ ಹಾಕಬೇಕು, ಕಿವಿಗೆ ಹತ್ತಿ ಇಟ್ಟುಕೊಳ್ಳಬೇಕು, ಸೂರ್ಯನ ಬೆಳಕಿಗೆ ಮೈ ಒಡ್ಡಿ ನಿಲ್ಲಬೇಕು ಎಂದು ಹವಾಮಾನ ತಜ್ಞ ಪ್ರಸಾದ್ ಸಲಹೆ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k