ಮಾಂಡೋಸ್ ಚಂಡಮಾರುತದ ಅಬ್ಬರದ ಬಳಿಕ ಕೊಂಚ ರಿಲ್ಯಾಕ್ಸ್ ನೀಡಿದ್ದ ವರುಣಾದೇವ ಮತ್ತೊಮ್ಮೆ ಎಂಟ್ರಿ ಕೊಟ್ಟಿದ್ದಾನೆ. ರಾಜ್ಯಕ್ಕೆ ಅನೇಕ ಕಡೆ ಮುಂದಿನ ಮೂರ್ನಾಲ್ಕು ದಿನ ಮಳೆಯಾಗುವ ಸಾಧ್ಯತೆ ಇರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನೈರುತ್ಯ ಬಂಗಾಳಕೊಲ್ಲಿಯಲ್ಲಿ ಪ್ರಬಲ ವಾಯುಭಾರ ಕುಸಿತದ ಹಿನ್ನೆಲೆ ಸದ್ಯ ರಾಜ್ಯದಲ್ಲಿ ಮಳೆಯಾಗಲಿದೆ. ವಾಯುಭಾರ ಕುಸಿತದ ಎಫೆಕ್ಟ್ ರಾಜ್ಯದ ದಕ್ಷಿಣ ಒಳನಾಡಿನ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಕೋಲಾರ, ಕೊಡುಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಶೀತಗಾಳಿ ಹಾಗೂ ಚಳಿ ಹೆಚ್ಚಾಗಲಿದೆ.
ಬೆಂಗಳೂರಿನಲ್ಲಿ ಬೆಳಿಗ್ಗೆಯಿಂದಲೇ ಬಹುತೇಕ ಕಡೆಗಳಲ್ಲಿ ಛಡಿ ಮಳೆ ಕಾಟ ನೀಡಿದೆ. ಮುಂದಿನ ಎರಡು ದಿನ ಇದೇ ಪರಿಸ್ಥಿತಿ ಬೆಂಗಳೂರಲ್ಲೂ ಮುಂದುವರೆಯಲಿದ್ದು, ಬೆಳಗ್ಗಿನ ವೇಳೆ ಹೆಚ್ಚು ಮಂಜು ಕವಿಯುವ ಸಾಧ್ಯತೆ ಇದೆ. ಅಲ್ಲದೆ ಕನಿಷ್ಠ ತಾಪಮಾನ ಕೂಡ ಸಾಮಾನ್ಯಕ್ಕಿಂತ ಇಳಿಕೆ ಕಾಣುವ ಸಾಧ್ಯತೆ ಇದೆಯಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ರಾಜಧಾನಿಯಲ್ಲಿಂದು ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇನ್ನೂ ರಾಮನಗರದಲ್ಲಿ ಅತ್ಯಂತ ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 27-18
ಮಂಗಳೂರು: 33-24
ಶಿವಮೊಗ್ಗ: 33-19
ಬೆಳಗಾವಿ: 32-19
ಮೈಸೂರು: 29-19
ಮಂಡ್ಯ: 29-19
ಮಡಿಕೇರಿ: 27-17
ರಾಮನಗರ: 27-7
ಹಾಸನ: 28-18
ಚಾಮರಾಜನಗರ: 28-19
ಚಿಕ್ಕಬಳ್ಳಾಪುರ: 27-17
ಕೋಲಾರ: 26-19
ತುಮಕೂರು: 29-18
ಉಡುಪಿ: 34-24
ಕಾರವಾರ: 33-25
ಚಿಕ್ಕಮಗಳೂರು: 29-18
ದಾವಣಗೆರೆ: 32-20
ಹುಬ್ಬಳ್ಳಿ: 33-20
ಚಿತ್ರದುರ್ಗ: 31-19
ಹಾವೇರಿ: 33-20
ಬಳ್ಳಾರಿ: 32-21
ಗದಗ: 32-19
ಕೊಪ್ಪಳ: 32-20
ರಾಯಚೂರು: 32-20
ಯಾದಗಿರಿ: 33-21
ವಿಜಯಪುರ: 33-20
ಬೀದರ್: 31-19
ಕಲಬುರಗಿ: 33-19
ಬಾಗಲಕೋಟೆ: 33-19