Bengaluru CityCoronaDistrictsKarnatakaLatestLeading NewsMain Post

ರಾಜ್ಯದಲ್ಲಿ 600 ಮಂದಿಗೆ ಕೊರೊನಾ – ಸೋಂಕಿಗೆ ಇಬ್ಬರು ಬಲಿ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಇಳಿಮುಖವಾಗುತ್ತಿದ್ದು, ನಿನ್ನೆ 941 ಇದ್ದ ಕೊರೊನಾ ಸೋಂಕಿತರ ಸಂಖ್ಯೆ ಇಂದು 600ಕ್ಕೆ ಇಳಿಕೆಯಾಗಿದೆ. ರಾಜ್ಯದಲ್ಲಿಂದು 600 ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಇಂದು ರಾಜ್ಯದಲ್ಲಿ 589 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 40,09,287 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 28,046 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,87,14,120 ಮಂದಿಗೆ ಟೆಸ್ಟ್ ಮಾಡಲಾಗಿದೆ.

ಕೋವಿಡ್‌ನಿಂದ ಎರಡು ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,205 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ದರ ಶೇ.2.13 ಇದೆ. 5,212 ಸಕ್ರಿಯ ಪ್ರಕರಣಗಳಿವೆ. ಇಂದು 28,046 ಮಂದಿಯನ್ನು (6,332 ರ‍್ಯಾಪಿಡ್ ಆಂಟಿಜನ್, 21,714 ಆರ್‌ಟಿ-ಪಿಸಿಆರ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 2,173 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.

ಬೆಂಗಳೂರು ನಗರದಲ್ಲೇ 312 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 11, ಬಾಗಲಕೋಟೆ 5, ಬಳ್ಳಾರಿ 6, ಬೆಳಗಾವಿ 10, ಬೀದರ್ 0, ಚಾಮರಾಜನಗರ 11, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 8, ಚಿತ್ರದುರ್ಗ 2, ದಕ್ಷಿಣ ಕನ್ನಡ 22, ದಾವಣಗೆರೆ 3, ಧಾರವಾಡ 13, ಗದಗ 2, ಹಾಸನ 19, ಹಾವೇರಿ 2, ಕಲಬುರಗಿ 7, ಕೊಡಗು 22, ಕೋಲಾರ 15, ಕೊಪ್ಪಳ 2, ಮಂಡ್ಯ 6, ಮೈಸೂರು 54, ರಾಯಚೂರು 8, ರಾಮನಗರ 22, ಶಿವಮೊಗ್ಗ 9, ತುಮಕೂರು 3, ಉಡುಪಿ 14, ಉತ್ತರ ಕನ್ನಡ 10, ವಿಜಯಪುರದಲ್ಲಿ 1 ಪ್ರಕರಣ ಪತ್ತೆಯಾಗಿದ್ದು ಯಾದಗಿರಿಯಲ್ಲಿ ಶೂನ್ಯ ಪ್ರಕರಣ ವರದಿಯಾಗಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Live Tv

Leave a Reply

Your email address will not be published.

Back to top button