ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಆಗುತ್ತಿದೆ. ನಿನ್ನೆ 939 ಇದ್ದ ಸೋಂಕಿನ ಪ್ರಕರಣಗಳ ಸಂಖ್ಯೆ ಇಂದು 1,425ಕ್ಕೆ ಏರಿಕೆಯಾಗಿದೆ. ನಿನ್ನೆಯಂತೆ ಇಂದೂ ಒಂದು ಮರಣ ಪ್ರಕರಣ ದಾಖಲಾಗಿದೆ.
Advertisement
ಇಂದು ರಾಜ್ಯದಲ್ಲಿ 1,459 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,49,147 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 23,150 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,76,38,495 ಮಂದಿಗೆ ಟೆಸ್ಟ್ ಮಾಡಲಾಗಿದೆ.
Advertisement
Advertisement
ಕೋವಿಡ್‌ನಿಂದ ಇಂದು ಒಂದೇ ಒಂದು ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,092 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ಶೇ.6.15 ಇದೆ. 8,861 ಸಕ್ರಿಯ ಪ್ರಕರಣಗಳಿವೆ. ಇಂದು 23,150 ಮಂದಿಯನ್ನು (9,335 ರ‍್ಯಾಪಿಡ್ ಆಂಟಿಜನ್, 13,815 RTPCR) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 85,475 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.
Advertisement
ಬೆಂಗಳೂರು ನಗರದಲ್ಲೇ 1,198 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 19, ಬಾಗಲಕೋಟೆಯಲ್ಲಿ 2, ಬಳ್ಳಾರಿಯಲ್ಲಿ 15, ಬೆಳಗಾವಿ 12, ಬೀದರ್ ನಲ್ಲಿ 4, ಚಾಮರಾಜನಗರದಲ್ಲಿ 5, ಚಿಕ್ಕಬಳ್ಳಾಪುರದಲ್ಲಿ 4, ದಕ್ಷಿಣ ಕನ್ನಡದಲ್ಲಿ 12, ದಾವಣಗೆರೆಯಲ್ಲಿ 4, ಧಾರವಾಡದಲ್ಲಿ 17, ಕಲಬುರಗಿ ಹಾಗೂ ಕೊಡಗಿನಲ್ಲಿ ತಲಾ 7, ಕೋಲಾರದಲ್ಲಿ 8, ಮಂಡ್ಯದಲ್ಲಿ 5, ಮೈಸೂರಿನಲ್ಲಿ 53, ರಾಯಚೂರಿನಲ್ಲಿ 3, ಶಿವಮೊಗ್ಗ 9, ತುಮಕೂರಿನಲ್ಲಿ 18, ಉಡುಪಿಯಲ್ಲಿ 3, ಉತ್ತರ ಕನ್ನಡದಲ್ಲಿ 7, ವಿಯಪುರದಲ್ಲಿ 12 ಹಾಗೂ ಯಾದಗಿರಿಯಲ್ಲಿ 1 ಪ್ರಕರಣ ದಾಖಲಾಗಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.