ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಆಗುತ್ತಿದ್ದು, ನಿನ್ನೆ 1,151 ರಷ್ಟು ಪತ್ತೆಯಾಗಿದ್ದ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಂದು 939ಕ್ಕೆ ಇಳಿದಿದೆ. ಕೆಲ ದಿನಗಳ ಬಳಿಕ ಒಂದು ಮರಣ ಪ್ರಕರಣ ದಾಖಲಾಗಿಲ್ಲ.
Advertisement
ಇಂದು ರಾಜ್ಯದಲ್ಲಿ 1,204 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,47,688 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 11,750 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,76,15,345 ಮಂದಿಯನ್ನು ಟೆಸ್ಟ್ ಮಾಡಲಾಗಿದೆ.
Advertisement
Advertisement
ಕೋವಿಡ್‌ನಿಂದ ಇಂದು ಒಂದೇ ಒಂದು ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,091 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ಶೇ.7.99 ಇದೆ. 8,896 ಸಕ್ರಿಯ ಪ್ರಕರಣಗಳಿವೆ.
Advertisement
ಇಂದು 11,750 ಮಂದಿಯನ್ನು (3,762 ರ‍್ಯಾಪಿಡ್ ಆ್ಯಂಟಿಜನ್, 7,988 ಆರ್‌ಟಿ-ಪಿಸಿಆರ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 1,02,781 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು ನಗರದಲ್ಲೇ 813 ಪ್ರಕರಣಗಳು ದಾಖಲಾಗಿದ್ದು, ಬಾಗಲಕೋಟೆಯಲ್ಲಿ 2, ಬಳ್ಳಾರಿಯಲ್ಲಿ 10, ಬೆಳಗಾವಿ 8, ಬೀದರ್, ಚಾಮರಾಜನಗರದಲ್ಲಿ ತಲಾ 5, ದಕ್ಷಿಣ ಕನ್ನಡದಲ್ಲಿ 9, ಧಾರವಾಡದಲ್ಲಿ 2, ಕಲಬುರಗಿಯಲ್ಲಿ 18, ಕೊಡಗಿನಲ್ಲಿ 7, ಕೋಲಾರದಲ್ಲಿ 4, ಮಂಡ್ಯದಲ್ಲಿ 13, ಮೈಸೂರಿನಲ್ಲಿ 18, ರಾಯಚೂರಿನಲ್ಲಿ 3, ಉಡುಪಿಯಲ್ಲಿ 2, ಉತ್ತರ ಕನ್ನಡದಲ್ಲಿ 3, ಯಾದಗಿರಿ, ಹಾಸನ, ಹಾವೇರಿ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ. ವಿಜಯಪುರ, ರಾಮನಗರ, ಕೊಪ್ಪಳ, ಗದಗ, ದಾವಣಗೆರೆ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಾತ್ರ ಶೂನ್ಯ ಪ್ರಕರಣ ದಾಳಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.