ಬೆಂಗಳೂರು: ಕೊರೊನಾ ಭೀತಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಕೊರೊನಾ ಸೋಂಕಿನ ಸಂಖ್ಯೆಯೂ ಸಹ ಕಡಿಮೆಯಾಗಿದೆ. ಇಂದು 118 ಮಂದಿಗೆ ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದಿದ್ದು, 121 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಒಟ್ಟು ರಾಜ್ಯದಲ್ಲಿ 1,715 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇಂದು ಶೂನ್ಯ ಪ್ರಮಾಣ ದಾಖಲಾಗಿದೆ. 0.74% ಜನರು ಸೋಂಕಿನಿಂದ ಬಳಲುತ್ತಿದ್ದು, 0.11% ಮೃತ ಪ್ರಮಾಣದರವಿದೆ. ಇಂದು 58,221 ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ಒಟ್ಟು 15,881 ಸ್ಯಾಂಪಲ್ (ಆರ್‌ಟಿಪಿಸಿಆರ್ 9,822 ಮತ್ತು 6,059 ರ‍್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಲಹರಿ ಮ್ಯೂಸಿಕ್ ಸಂಸ್ಥೆಗೆ ಮತ್ತೊಂದು ಗರಿ: ಅಂಗ ಸಂಸ್ಥೆ ಎಂಆರ್‌ಟಿ ಆಡಿಯೋ ಸಂಸ್ಥೆಗೆ ಗೋಲ್ಡ್ ಅವಾರ್ಡ್
ಆರೋಗ್ಯ ಇಲಾಖೆ ವರದಿ ಪ್ರಕಾರ, ಬೆಳಗಾವಿ 01, ಬೆಂಗಳೂರು ನಗರ 107, ದಕ್ಷಿಣ ಕನ್ನಡ 06, ಕೋಲಾರ 03, ಮೈಸೂರು 01 ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಉಳಿದ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣಗಳು ದಾಖಲಾಗಿದೆ.