ಬೆಂಗಳೂರು: ಇಂದು ರಾಜ್ಯದಲ್ಲಿ 8,906 ಹೊಸ ಕೇಸ್ ಗಳು ಪತ್ತೆಯಾಗಿದ್ದು, 508 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದಲ್ಲಿ ಒಟ್ಟು 30,39,958 ಜನರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಸೋಂಕಿನಿಂದ ಇಂದು ನಾಲ್ವರು ಮೃತಪಟ್ಟಿದ್ದಾರೆ. ಒಟ್ಟು ರಾಜ್ಯದಲ್ಲಿ 29,63,056 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.5.42ಕ್ಕೆ ಏರಿಕೆಯಾಗಿದ್ದು, ಮರಣ ಪ್ರಮಾಣ ಶೇ.0.04 ಇದೆ. ಇದನ್ನೂ ಓದಿ: ರೂಲ್ಸ್ ಬ್ರೇಕ್ – ರಥೋತ್ಸವದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು ಭಾಗಿ
ಇಂದು ಬೆಂಗಳೂರು ನಗರದಲ್ಲಿ 7,113 ಜನರಿಗೆ ಸೋಂಕು ಪತ್ತೆಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ.
1,65,880 ಜನರಿಗೆ ರಾಜ್ಯದಲ್ಲಿ ಇಂದು ಕೊರೊನಾ ಲಸಿಕೆ ಹಾಕಲಾಗಿದೆ. ಒಟ್ಟು 1,64,261 ಸ್ಯಾಂಪಲ್ (ಆರ್ಟಿ-ಪಿಸಿಆರ್ 1,35,291+ 28,970 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದುವರೆಗೂ ರಾಜ್ಯದಲ್ಲಿ 333 ಮಂದಿಯಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ. ಇದನ್ನೂ ಓದಿ: ಜಾಕ್ವೆಲಿನ್ ಕುತ್ತಿಗೆ ಮೇಲೆ ಲವ್ ಬೈಟ್ – ಫೋಟೋ ವೈರಲ್
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 6, ಬಳ್ಳಾರಿ 43, ಬೆಳಗಾವಿ 70, ಬೆಂಗಳೂರು ಗ್ರಾಮಾಂತರ 111, ಬೆಂಗಳೂರು ನಗರ 7,113, ಬೀದರ್ 13, ಚಾಮರಾಜನಗರ 10, ಚಿಕ್ಕಬಳ್ಳಾಪುರ 36, ಚಿಕ್ಕಮಗಳೂರು 22, ಚಿತ್ರದುರ್ಗ 15, ದಕ್ಷಿಣ ಕನ್ನಡ 295, ದಾವಣಗೆರೆ 12, ಧಾರವಾಡ 56, ಗದಗ 16, ಹಾಸನ 139, ಹಾವೇರಿ 0, ಕಲಬುರಗಿ 58, ಕೊಡಗು 26, ಕೋಲಾರ 65, ಕೊಪ್ಪಳ 3, ಮಂಡ್ಯ 183, ಮೈಸೂರು 203, ರಾಯಚೂರು 4, ರಾಮನಗರ 28, ಶಿವಮೊಗ್ಗ 66, ತುಮಕೂರು 53, ಉಡುಪಿ 186, ಉತ್ತರ ಕನ್ನಡ 52, ವಿಜಯಪುರ 22 ಮತ್ತು ಯಾದಗಿರಿಯಲ್ಲಿ 0 ಪಾಸಿಟಿವ್ ಪ್ರಕರಣ ದಾಖಲಾಗಿದೆ.