ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 10 ಸಾವಿರಕ್ಕಿಂತ ಕಡಿಮೆ ಇದ್ದು, ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ಇಂದು 8,425 ಹೊಸ ಕೇಸ್ ದಾಖಲಾಗಿದ್ದು, 47 ಜನರು ಸಾವನ್ನಪ್ಪಿದ್ದಾರೆ.
Advertisement
ಪಾಸಿಟಿವಿಟಿ ರೇಟ್ 6.51%ಕ್ಕೆ ಇಳಿಕೆ ಕಂಡಿದೆ. ಒಟ್ಟು ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 97,781 ರಷ್ಟಿದೆ. ಬೆಂಗಳೂರಿನಲ್ಲಿ ಒಟ್ಟು 3,822 ಹೊಸ ಕೇಸ್ ಪತ್ತೆಯಾಗಿದ್ದು, ಇಂದು 17 ಮರಣ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಲತಾ ಮಂಗೇಶ್ಕರ್ ನಿಧನಕ್ಕೆ ಸಂತಾಪ – ರಜೆ ಫೋಷಿಸಿದ ಮಹಾರಾಷ್ಟ್ರ ಸರ್ಕಾರ!
Advertisement
Advertisement
ರಾಜ್ಯದಲ್ಲಿ ಒಟ್ಟು 19,800 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಒಟ್ಟು 37,58,997 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.0.55% ಏರಿದೆ. ಒಟ್ಟು 1,29,337 ಸ್ಯಾಂಪಲ್ (ಆರ್ಟಿ ಪಿಸಿಆರ್ 99,023+ 30,314 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಇಂದು ಬೆಂಗಳೂರು ನಗರ 3822, ಬೆಳಗಾವಿ 221, ಬಾಗಲಕೋಟೆ 81, ಬಳ್ಳಾರಿ 249, ಬೆಂಗಳೂರು ಗ್ರಾಮಾಂತರ 92, ಬೀದರ್ 75, ಚಾಮರಾಜನಗರ 161, ಚಿಕ್ಕಬಳ್ಳಾಪುರ 100, ಚಿಕ್ಕಮಗಳೂರು 87, ಚಿತ್ರದುರ್ಗ 183, ದಕ್ಷಿಣ ಕನ್ನಡ 163, ದಾವಣಗೆರೆ 56, ಧಾರವಾಡ 211, ಗದಗ 50, ಹಾಸನ 276, ಹಾವೇರಿ 88, ಕಲಬುರಗಿ 195, ಕೊಡಗು 219, ಕೋಲಾರ 114, ಕೊಪ್ಪಳ 99, ಮಂಡ್ಯ 241, ಮೈಸೂರು 582, ರಾಯಚೂರು 34, ರಾಮನಗರ 45, ಶಿವಮೊಗ್ಗ 183, ತುಮಕೂರು 318, ಉಡುಪಿ 175, ಉತ್ತರ ಕನ್ನಡ 141, ವಿಜಯಪುರ 135 ಮತ್ತು ಯಾದಗಿರಿಯಲ್ಲಿ 29 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Google Chrome – 8 ವರ್ಷಗಳ ನಂತರ ಹೊಸ ಲೋಗೋ!