ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾದಿಂದ ಗುಣಮುಖರಾಗಿ ಒಟ್ಟು 330 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 6 ಜನರು ಮೃತಪಟ್ಟಿದ್ದಾರೆ.
ಬೆಂಗಳೂರು ನಗರದಲ್ಲಿ 256 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 2 ಮರಣ ಪ್ರಕರಣ ದಾಖಲಾಗಿದೆ.
Advertisement
Advertisement
ರಾಜ್ಯದಲ್ಲಿ 330 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 7,132 ಸಕ್ರಿಯ ಪ್ರಕರಣಗಳು ಇದ್ದು, ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 29,98,199 ಜನರಿಗೆ ಕೊರೊನಾ ಬಂದಿದೆ. 29,52,708 ಜನರು ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.1.31 ರಷ್ಟಿದ್ದರೆ, ಪಾಸಿಟಿವಿಟಿ ರೇಟ್ ಶೇ.0.41 ರಷ್ಟಿದೆ. ಇದನ್ನೂ ಓದಿ: ಮಗನ ಮದುವೆಗೆ 4 ಕೆಜಿ, 280 ಗ್ರಾಂ ತೂಕದ ಮದುವೆ ಕಾರ್ಡ್ ಮಾಡಿಸಿದ ತಂದೆ!
Advertisement
ಇಂದು ಒಟ್ಟು 1,10,556 ಸ್ಯಾಂಪಲ್ (ಆರ್ಟಿ ಪಿಸಿಆರ್ 93,481+ 17,075 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ವಿಜಯಪುರ, ಚಿತ್ರದುರ್ಗ, ರಾಯಚೂರು, ರಾಮನಗರ, ಹಾವೇರಿ, ಗದಗ, ಮತ್ತು ಯಾದಗಿರಿಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಣಬಲ, ಜಾತಿಬಲದಿಂದ ಕಾಂಗ್ರೆಸ್ ಚುನಾವಣೆ ಗೆಲ್ತಿತ್ತು, ಆದ್ರೆ ಈಗ ಅವರಿಗೆ ಅಡ್ರೆಸ್ಸಿಲ್ಲ: BSY
ಬಳ್ಳಾರಿ 5, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 256, ಬೀದರ್ 1, ಚಿತ್ರದುರ್ಗ 1, ಚಾಮರಾಜನಗರ 2, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 66, ದಕ್ಷಿಣ ಕನ್ನಡ 13, ದಾವಣಗೆರೆ 2, ಧಾರವಾಡ 20, ಹಾಸನ 12, ಕಲಬುರಗಿ 02, ಕೊಡಗು 14, ಕೋಲಾರ 17, ಮಂಡ್ಯ 03, ಮೈಸೂರು 10, ಶಿವಮೊಗ್ಗ 07, ತುಮಕೂರು 08, ಉಡುಪಿ 05, ಉತ್ತರ ಕನ್ನಡ 14 ಜನರಿಗೆ ಸೋಂಕು ಬಂದಿದೆ.