ಬೆಂಗಳೂರು: ಶಕ್ತಿ ಯೋಜನೆ, ಡೀಸೆಲ್ ದರ ಏರಿಕೆ ಸೇರಿದಂತೆ ಇತ್ಯಾದಿ ಕಾರಣಗಳಿಂದ ನಷ್ಟಕ್ಕೆ ಸಿಲುಕಿರುವ ಸರ್ಕಾರ ಈಗ ಕೊನೆಗೆ ಅನಿವಾರ್ಯವಾಗಿ ಪ್ರಯಾಣ ದರವನ್ನು ಏರಿಕೆ ಮಾಡಲು ಮುಂದಾಗುತ್ತಿದೆ.
ಬಿಎಂಟಿಸಿ ಬಸ್ ದರ ಏರಿಕೆಯಾಗಿ 10 ವರ್ಷ ಆಗಿದ್ದರೆ ಕೆಎಸ್‌ಆರ್‌ಟಿಸಿ ದರ ಏರಿಕೆಯಾಗಿ 5 ವರ್ಷವಾಗಿದೆ. ಹೀಗಾಗಿ ಇಂದಿನ ಕ್ಯಾಬಿನೆಟ್ ಸಭೆಯ ಬಳಿಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದರ ಏರಿಕೆಯ ಪ್ರಮಾಣದ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ.
Advertisement
Advertisement
ನಾಲ್ಕು ನಿಗಮಗಳಿಂದ ಬೇರೆ ಬೇರೆ ದರ ಏರಿಕೆಗೆ ಪ್ರಸ್ತಾವನೆ ಬಂದಿದೆ. ಬಿಎಂಟಿಸಿಯಿಂದ 42%, ಎನ್‌ಡಬ್ಲ್ಯೂ ಕೆಎಸ್‌ಆರ್‌ಟಿಸಿಯಿಂದ 25%, ಕೆಎಸ್‌ಆರ್‌ಟಿಸಿ ಮತ್ತು ಕೆಕೆಆರ್‌ಟಿಸಿಯಿಂದ 28% ದರ ಏರಿಕೆಗೆ ಪ್ರಸ್ತಾವನೆ ಬಂದಿದೆ. ನಾಲ್ಕು ನಿಗಮಗಳ ಪ್ರಸ್ತಾವನೆಯನ್ನು ಅಳೆದು ತೂಗಿ ಕೊನೆಯದಾಗಿ 15% ಬಸ್ ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆಯಿದೆ.
Advertisement
ಈ ಹಿಂದೆ ಯಾವಾಗ ಬಸ್ ದರ ಏರಿಕೆಯಾಗಿತ್ತು?
2020 ಫೆಬ್ರವರಿ 26ರಂದು ಕೆಎಸ್ ಆರ್ ಟಿಸಿ ,ಕೆಕೆಆರ್ ಟಿಸಿ ಹಾಗೂ ಎನ್ ಡಬ್ಲೂ ಕೆಎಸ್ ಆರ್ ಟಿ 12% ಏರಿಕೆಯಾಗಿತ್ತು. 2014 ರಲ್ಲಿ ಬಿಎಂಟಿಸಿ 17% ದರ ಏರಿಕೆ ಮಾಡಿತ್ತು. ನಂತರ ತರ 2015 ರಲ್ಲಿ 2% ಕಡಿಮೆ ಮಾಡಿ 15% ದರ ಕಡಿಮೆ ಮಾಡಲಾಗಿತ್ತು.