– ಶ್ರೀರಾಮುಲು ನಿಗೂಢ ನಡೆ, ಪಕ್ಷದ ನಾಯಕರ ಭೇಟಿಗೆ ಹಿಂಜರಿಕೆ?
ಬೆಂಗಳೂರು: ಕೋರ್ ಕಮಿಟಿ ಸಭೆಯ ಹಂಗಾಮಾ ನಂತರ ಬಿಜೆಪಿಯಲ್ಲಿ ಗೋಜಲು ಹೆಚ್ಚಾಗಿದೆ. ನಾಯಕರ ನಡುವೆ ಅಂತರವೂ ಹೆಚ್ಚಾಗಿದೆ. ಎಲ್ಲರೂ ರಾಜ್ಯಾಧ್ಯಕ್ಷ ಚುನಾವಣೆಗೆ ಹೈಕಮಾಂಡ್ ಯಾವ ಸೂತ್ರ ಕಳಿಸಲಿದೆಯೋ ಎಂದು ಕಾಯುತ್ತಿದ್ದಾರೆ. ಇತ್ತ ರೆಡ್ಡಿ ಜತೆ ವಾಕ್ಸಮರ ಬಳಿಕ ಶ್ರೀರಾಮುಲು ಅತ್ತ ರಾಜ್ಯ ನಾಯಕರ ಭೇಟಿಯೂ ಮಾಡದೇ, ದೆಹಲಿಗೂ ಹೋಗದೇ ಅಚ್ಚರಿ ಹುಟ್ಟಿಸಿದ್ದಾರೆ.
Advertisement
ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಚುನಾವಣೆ ಸಂಬಂಧ ರಾಜ್ಯ ಬಿಜೆಪಿ ಶಾಸಕರು, ಸಂಸದರು, ಮಾಜಿಗಳ ಅಭಿಪ್ರಾಯ ಸಂಗ್ರಹಿಸಿರುವ ಹೈಕಮಾಂಡ್ ಸದ್ಯದಲ್ಲೇ ಮಹತ್ವದ ಸಂದೇಶ ಕಳಿಸಲಿದ್ದಾರಂತೆ. ರಾಜ್ಯಾಧ್ಯಕ್ಷ ಚುನಾವಣೆಗೆ ಸಹಮತ ಸೂತ್ರ ರೆಡಿ ಮಾಡಿರುವ ಹೈಕಮಾಂಡ್, ಚುನಾವಣಾ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಾಣ್ ಮೂಲಕ ಕಳಿಸಿಕೊಡಲಿದೆ. ರಾಜ್ಯಾಧ್ಯಕ್ಷ ಆಯ್ಕೆ ಸಂದರ್ಭದಲ್ಲೇ ಕೋರ್ ಕಮಿಟಿ ಹಾಗೂ ರಾಜ್ಯ ಪದಾಧಿಕಾರಿ ಪಟ್ಟಿಯಲ್ಲಿ ಯತ್ನಾಳ್ ಟೀಮ್ ಸದಸ್ಯರಿಗೂ ಸ್ಥಾನ ಕೊಡಲು ಹೈಕಮಾಂಡ್ ಸೂತ್ರವೊಂದನ್ನು ರೆಡಿ ಮಾಡಿದೆ ಎನ್ನಲಾಗಿದೆ. ಈ ಮೂಲಕ ಬಿಜೆಪಿ ಮನೆ ಗೊಂದಲಕ್ಕೆ ತೆರೆ ಎಳೆಯುವ ಲೆಕ್ಕಾಚಾರ. ಇದನ್ನೂ ಓದಿ: ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತು ಕಾಂಗ್ರೆಸ್ಗೆ ಹವ್ಯಾಸವಾಗಿದೆ – ಎನ್.ರವಿಕುಮಾರ್
Advertisement
Advertisement
ಇತ್ತ ವಿಜಯೇಂದ್ರ ವಿರುದ್ಧ ಸ್ಪರ್ಧೆಗೆ ಯತ್ನಾಳ್ ಭರ್ಜರಿ ತಯಾರಿ ನಡೆಸ್ತಿದ್ದಾರೆ. ತಮ್ಮ ಸ್ಪರ್ಧೆ ಖಚಿತ, ಜಯ ನಿಶ್ಚಿತ ಎಂದಿರುವ ಯತ್ನಾಳ್, ಚುನಾವಣೆ ನಡೆದರೆ ವಿಜಯೇದ್ರ ಸೋಲಿಸುವ ಉಮೇದಿನಲ್ಲಿದ್ದಾರೆ. ವಿಜಯೇಂದ್ರ ಸಹ ತಾವೂ ಎಲ್ಲದಕ್ಕೂ ಸಿದ್ಧ ಎನ್ನುವ ಕೌಂಟರ್ ಕೊಟ್ಟಿದ್ದಾರೆ.
Advertisement
ಮಾಜಿ ಸಂಸದ ಶ್ರೀರಾಮುಲು ಇಷ್ಟು ದಿನ ಬಳ್ಳಾರಿಯಲ್ಲಿದ್ದವರು, ಇಂದು ಬೆಳಗ್ಗೆ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನಲ್ಲಿ ಕೋರ್ಟ್ ಕೆಲಸಕ್ಕೆ ಬಂದಿದ್ದವರು ಕೆಲಸ ಮುಗಿಸಿ ತಕ್ಷಣ ಬಳ್ಳಾರಿಗೆ ವಾಪಸ್ ಹೊರಟರು. ಬೆಂಗಳೂರಿಗೆ ಬಂದಿದ್ರೂ ಯಾರ ಕಣ್ಣಿಗೂ ರಾಮುಲು ಕಾಣಿಸಿಕೊಳ್ಳಲಿಲ್ಲ. ಯಾವ ರಾಜ್ಯ ನಾಯಕರ ಭೇಟಿಯೂ ಮಾಡಲಿಲ್ಲ. ಖುದ್ದು ಜೆಪಿ ನಡ್ಡಾ, ಅಮಿತ್ ಶಾ ಅವರೇ ಆಹ್ವಾನ ಕೊಟ್ಟಿದ್ರೂ ಇನ್ನೂ ದೆಹಲಿಗೂ ಹೋಗದೇ ರಾಮುಲು ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: ಶ್ರೀರಾಮುಲು ಪಕ್ಷ ಸಿದ್ಧಾಂತ ಒಪ್ಪಿ ಬಂದ್ರೆ ಸ್ವಾಗತ: ಕೆ.ಎನ್ ರಾಜಣ್ಣ
ಒಟ್ಟಿನಲ್ಲಿ ರಾಜ್ಯ ಕೇಸರಿ ಮನೆಯಲ್ಲಿ ಎಲ್ಲವೂ ಅಳತೆ ಮೀರಿ ನಡೀತಿದೆ. ಒಗ್ಗಟ್ಟು, ಹೊಂದಾಣಿಕೆ ಕಾಣೆಯಾಗಿ, ಒಬ್ಬೊಬ್ಬರೂ ಒಂದೊಂದು ದಿಕ್ಕಿನಂತಿದ್ದಾರೆ. ಹೈಕಮಾಂಡ್ ಅದ್ಯಾವ ರೀತಿ ಬಿಜೆಪಿ ಮನೆ ಸರಿಪಡಿಸುತ್ತೋ ಎನ್ನುವುದೇ ಕುತೂಹಲ.