ಸೋಮವಾರ ಎಲ್ಲದ್ದಕ್ಕೂ ಇತಿಶ್ರೀ

Public TV
2 Min Read
trust vote session 2

ಬೆಂಗಳೂರು: ರಾಜ್ಯಪಾಲರ ಆದೇಶವನ್ನು ಧಿಕ್ಕರಿಸಿದ ರಾಜ್ಯಸರ್ಕಾರ ಸೋಮವಾರಕ್ಕೆ ವಿಶ್ವಾಸ ಮತಯಾಚನೆಯನ್ನು ಮುಂದೂಡಿದಿದೆ. ಈ ಮೂಲಕ ದೋಸ್ತಿ ಸರ್ಕಾರಕ್ಕೆ ಇನ್ನು ಎರಡು ದಿನ ಜೀವದಾನ ಸಿಕ್ಕಿದೆ. ಸೋಮವಾರ 11 ಗಂಟೆಗೆ ಸದನವನ್ನು ಮುಂದೂಡಿದ ಸ್ಪೀಕರ್ ರಮೇಶ್ ಕುಮಾರ್, ಎಲ್ಲದ್ದಕ್ಕೂ ಸೋಮವಾರವೇ ಇತಿಶ್ರೀ ಹಾಡಲಾಗುವುದು ಎಂದು ಹೇಳಿದ್ದಾರೆ.

2ನೇ ದಿನವಾದ ಇಂದು ಕೂಡ ನಡೆಸಿದ್ದು ಬರೀ ಕಾಲಹರಣ. ಸಮಯ ಮುಂದೂಡಿಕೆಗೆ ನಾಟಕದ ಮೇಲೆ ನಾಟಕ. ಒಮ್ಮೆ ಸ್ಪೀಕರ್‍ಗೂ, ಮಗದೊಮ್ಮೆ ಸಿಎಂಗೂ ಪತ್ರ ಬರೆದಿದ್ದ ರಾಜ್ಯಪಾಲರು ಇವತ್ತು ಮಧ್ಯಾಹ್ನ 1.30ರ ಒಳಗೆ ವಿಶ್ವಾಸಮತ ಯಾಚನೆ ಮುಗಿಸಬೇಕು ಎಂದು ಗುರುವಾರ ಆದೇಶಿಸಿದ್ದರು. ಬೆಳಗ್ಗೆ ಕಲಾಪ ಆರಂಭವಾದಾಗ ರಾಜಭವನದ ವಿಶೇಷಾಧಿಕಾರಿ ಸದನಕ್ಕೆ ಆಗಮಿಸಿದ್ದರು.

CM HDK SESSION copy

ಮಧ್ಯಾಹ್ನ 1:30 ಆದರೂ ವಿಶ್ವಾಸಮತ ಪ್ರಕ್ರಿಯೆ ಮುಗಿಯ ಕಾರಣ ರಾಜ್ಯಪಾಲರಿಗೆ ವರದಿ ನೀಡಿದರು. ವರದಿ ಆಧರಿಸಿ ಇವತ್ತು ಕಲಾಪ ಮುಗಿಯುವುದರ ಒಳಗಡೆ ವಿಶ್ವಾಸಮತ ಮುಗಿಸಲೇಬೇಕು ಅಂತ ಮುಖ್ಯಮಂತ್ರಿಗೆ ರಾಜ್ಯಪಾಲರು ಮತ್ತೊಂದು ಆದೇಶ ಪ್ರಕಟಿಸಿದರು.

ರಾಜ್ಯಪಾಲರ ಎರಡನೇ ಲವ್‍ಲೆಟರ್ ನೋವು ತಂದಿದೆ ಅಂತ ಸಿಎಂ ಹೇಳಿದರು. ಆದರೆ ಸಂಜೆಯಾದರೂ ಮುಗಿಯದ ಲಕ್ಷಣ ಕಾಣಲಿಲ್ಲ. ದೋಸ್ತಿ ಪಕ್ಷದ ಶಾಸಕರೆಲ್ಲರೂ ಸೋಮವಾರಕ್ಕೆ ಕಲಾಪ ಮುಂದೂಡಿ, ನಾವು ನಮ್ಮ ಕ್ಷೇತ್ರದ ಸಮಸ್ಯೆ ಆಲಿಸಬೇಕು ಅಂತ ಪ್ರಸ್ತಾಪ ಮುಂದಿಟ್ಟರು.

trust vote session 1

ಮುಖ್ಯಮಂತ್ರಿ ಅವರಂತೂ, ನಾನು ಇನ್ನಷ್ಟು ಮಾತನಾಡೋದಿದೆ. ಸೋಮವಾರ ವಿಶ್ವಾಸಮತ ಮುಗಿಸಿಬಿಡೋಣ ಎಂದರು. ಇದಕ್ಕೆ ಸಿದ್ದರಾಮಯ್ಯ ಕೂಡ ದನಿಗೂಡಿಸಿದರು. ಆದರೆ ಬಿಜೆಪಿ ಶಾಸಕರು ಯಾವುದೇ ಕಾರಣಕ್ಕೂ ಮುಂದೂಡಬೇಡಿ. ಇವತ್ತೇ ವಿಶ್ವಾಸಮತ ಪ್ರಕ್ರಿಯೆ ಮುಗಿಸಿಬಿಡಿ. ಇಲ್ಲದಿದ್ದರೆ, ವಿಶ್ವಾಸಮತ ಪ್ರಕ್ರಿಯೆ ಬಗ್ಗೆ ಅನುಮಾನ ಬರಲಿದೆ ಅಂತ ಸಂಶಯ ವ್ಯಕ್ತಪಡಿಸಿದರು.

ಯಡಿಯೂರಪ್ಪ ಮಾತನಾಡಿ, ಇವತ್ತು ಎಷ್ಟು ಹೊತ್ತಾದರೂ ಸರಿ. ನಾವು ಮಾತಾಡಲ್ಲ. ಅವರೇ ಎಷ್ಟು ಹೊತ್ತಾದರೂ ಮಾತಾಡಲಿ. ನಾವ್ಯಾರೂ ಮಾತಾಡಲ್ಲ. ರಾಜ್ಯಪಾಲರಿಗೆ ಗೌರವ ಕೊಟ್ಟಂತೆ ಆಗುತ್ತದೆ ಎಂದರು. ಆದರೆ ಲೇಟಾಗ್ತಿದೆ. ಒಂದು ವಾರ ಆಗಿದೆ. ನಾವು ಮನೆಗೆ ಹೋಗಬೇಕು. ನಮ್ಮನ್ನ ಬಿಟ್ಟುಬಿಡಿ ಎಂದು ದೋಸ್ತಿ ಪಕ್ಷದ ಶಾಸಕರು ಗಲಾಟೆ ಎಬ್ಬಿಸಿದ್ರು. ಡಿಪ್ಯೂಟಿ ಸ್ಪೀಕರ್ ಸುಮ್ನೇ ಕೂತ್ಕೋಳ್ರಿ ಅಂದ್ರು ಬಿಡ್ಲಿಲ್ಲ. ಮತ್ತೆ ಬಂದ ಸ್ಪೀಕರ್ ರಮೇಶ್‍ಕುಮಾರ್ ಕೊನೆಗೆ ಸೋಮವಾರಕ್ಕೆ ಕಲಾಪ ಮುಂದೂಡಿದರು.

BSY SESSION copy

Share This Article
Leave a Comment

Leave a Reply

Your email address will not be published. Required fields are marked *