ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ ಮದ್ಯ ಮಾರಾಟವನ್ನು ಆರಂಭಿಸಿ 3 ದಿನ ಕಳೆದಿದ್ದು, ಇಂದು ಕೆಎಸ್‍ಬಿಸಿಎಲ್ (ಕರ್ನಾಟಕ ಪಾನೀಯ ನಿಯಮ) ಬರೋಬ್ಬರಿ 230 ಕೋಟಿ ರೂ. ವ್ಯಾಪಾರ ನಡೆಸಿದೆ.
ಇಂದು 15.6 ಕೋಟಿ ರೂ. ಮೌಲ್ಯದ 7 ಲಕ್ಷ ಲೀಟರ್ ಬಿಯರ್, 216 ಕೋಟಿ ರೂ. ಮೌಲ್ಯದ 39 ಲಕ್ಷ ಲೀಟರ್ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) ಮಾರಾಟವಾಗಿದೆ.
Advertisement
Advertisement
ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಮೊದಲ ದಿನ 45 ಕೋಟಿ ರೂ. ಹಾಗೂ 2ನೇ ದಿನ 197 ಕೋಟಿ ರೂ. ಮದ್ಯ ಮಾರಾಟವಾಗಿತ್ತು. ಎರಡು ದಿನದ ಮದ್ಯ ಮಾರಾಟಕ್ಕಿಂತ ಇಂದು ಹೆಚ್ಚು ಮದ್ಯ ಮಾರಾಟ ಮಾಡಲಾಗಿದೆ. ಅಲ್ಲದೇ ನಿನ್ನೆಯ ದಾಖಲೆಯನ್ನು ಮುರಿದು ಮದ್ಯದಂಗಡಿಗಳು 230 ಕೋಟಿ ರೂ. ಮೌಲ್ಯದ ಮದ್ಯ ಖರೀದಿ ಮಾಡಿವೆ. ನಿನ್ನೆ ಕೆಎಸ್‍ಬಿಸಿಎಲ್‍ನಿಂದ 2.50 ಕೋಟಿ ರೂ. ಮೌಲ್ಯದ 3.95 ಲಕ್ಷ ಕೇಸ್ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) ಹಾಗೂ 79 ಸಾವಿರ ಕೇಸ್ ಬಿಯರ್ ಪೂರೈಕೆ ಮಾಡಲಾಗಿತ್ತು.
Advertisement
Advertisement
ಇತ್ತ ಲಾಕ್‍ಡೌನ್ ನಿಂದಾಗಿ ಎಣ್ಣೆ ಇಲ್ಲದೆ 42 ದಿನಗಳನ್ನು ಮುಗಿಸಿದ ಮದ್ಯಪ್ರಿಯರಿಗೆ ಸರ್ಕಾರ ಇಂದು ಬಿಗ್ ಶಾಕ್ ನೀಡಿತ್ತು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಒಂದು ಕಡೆ ಕೋವಿಡ್ ನಿಯಂತ್ರಣ ಮತ್ತೊಂದು ಕಡೆ ಆರ್ಥಿಕ ಚಟುವಟಿಕೆ ಎರಡನ್ನೂ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಶೇ.11ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದರು. ಅಲ್ಲದೇ ರಾಜ್ಯದಲ್ಲಿ ಶೇ.17ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡುವುದಾಗಿ ತಿಳಿಸಿದ್ದರು.