– ದರ ಏರಿಕೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ
– ಬೇರೆ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ದುಬಾರಿ
ಬೆಂಗಳೂರು: ಅವೈಜ್ಞಾನಿಕವಾಗಿ ವಿದ್ಯುತ್ ದರವನ್ನು (Electricity Tariff) ಏರಿಕೆ ಮಾಡಲಾಗಿದೆ. ವಿದ್ಯುತ್ ದರ ಹೀಗೆ ಏರಿಕೆ ಮಾಡಿದರೆ ಕೈಗಾರಿಕೆ (Industry) ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (KASSIA) ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
Advertisement
ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಜೊತೆ ಮಾತನಾಡಿದ ಕಾಸಿಯಾ ಅಧ್ಯಕ್ಷ ನರಸಿಂಹ ಮೂರ್ತಿ, ರಾಜ್ಯದಲ್ಲಿ 5.62 ಲಕ್ಷ ಸಣ್ಣ ಕೈಗಾರಿಕೆಗಳು ಇದೆ. ಸರ್ಕಾರದ ವಿವಿಧ ಇಲಾಖೆಗಳಿಂದ ಎಸ್ಕಾಂಗಳಿಗೆ 11 ಸಾವಿರ ಕೋಟಿ ರೂ. ಬಾಕಿ ದುಡ್ಡು ಕೊಡುವುದು ಬಾಕಿಯಿದೆ. ಮೊದಲು ಸರ್ಕಾರ ಇದನ್ನು ಪಾವತಿ ಮಾಡಲಿ ಎಂದು ಹೇಳಿದರು.
Advertisement
Advertisement
ಈಗ ಅನ್ ಶೆಡ್ಯೂಲ್ಡ್ ಲೋಡ್ ಶೆಡ್ಡಿಂಗ್ (Load Shedding) ಮಾಡುತ್ತಿದ್ದಾರೆ. ಕೆಲವೊಮ್ಮೆ ಕೈಗಾರಿಕೆಗಳಿಗೆ ಒಂದು ಗಂಟೆಯಷ್ಟು ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಗ್ಯಾರಂಟಿ ಘೋಷಣೆಯ ಬಗ್ಗೆ ನಮ್ಮ ಅಕ್ಷೇಪ ಇಲ್ಲ. ಆದರೆ ನಮಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ರಾಜ್ಯದ ಜನರಿಗೆ ಕತ್ತಲೆ ಭಾಗ್ಯ ಖಚಿತ, ಸಾಲ ನಿಶ್ಚಿತ, ಬೆಲೆ ಏರಿಕೆ ಖಂಡಿತ – ಸುನೀಲ್ ಕುಮಾರ್ ಲೇವಡಿ
Advertisement
ಈ ಹಿಂದೆ 1 ಲಕ್ಷ ರೂ. ಬಿಲ್ ಬರುತ್ತಿದ್ದರೆ ಈಗ 1.30 ಲಕ್ಷ ರೂ., 1.40 ಲಕ್ಷ ರೂ. ಬರುತ್ತಿದೆ. ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ನಿಗದಿತ ಜಾರ್ಜ್ 23% ಹೆಚ್ಚಳ ಇದೆ. ದರ ಏರಿಕೆಯನ್ನು ಪ್ರಶ್ನಿಸಿ ನಾವು ಹೈಕೋರ್ಟ್ ಮೊರೆ ಹೋಗಲು ಸಮಿತಿ ನಿರ್ಧಾರ ಮಾಡಿದೆ ಎಂದು ತಿಳಿಸಿದರು.
ಇಂಧನ ಸಚಿವ ಕೆಜೆ ಜಾರ್ಜ್ ಅವರನ್ನು ಭೇಟಿ ಮಾಡಿ ನಾವು ಸಮಸ್ಯೆ ಹೇಳಿದ್ದೇವೆ. ಜಾರ್ಜ್ ಕಾಸಿಯಾಗೆ ಬಂದು ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇಲ್ಲದೇ ಇದ್ದರೆ ಈ ಏರಿಕೆಯಿಂದ ನಮಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.