-ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆ
-ಆತಂಕಕ್ಕೆ ಕಾರಣವಾಗ್ತಿದೆ ನಂಜನಗೂಡಿನ ‘ನಂಜು’
ಬೆಂಗಳೂರು: ಕರ್ನಾಟಕದಲ್ಲಿ ಇಂದು ಮತ್ತೆ ಏಳು ಮಂದಿಗೆ ಕೊರೊನಾಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 214ಕ್ಕೆ ಏರಿಕೆಕೊಂಡಿದೆ.
Advertisement
ನಂಜನಗೂಡಿನ ಜ್ಯೂಬಿಲಿಯೆಂಟ್ ಫ್ಯಾಕ್ಟರಿಯ ಮೊದಲ ರೋಗಿಯಿಂದಲೇ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ಇಂದು ಪತ್ತೆಯಾದ ಏಳು ಪ್ರಕರಣಗಳಲ್ಲಿ ಮೈಸೂರಿನ ನಂಜನಗೂಡಿನ ಕಾರ್ಖಾನೆಯ ಐವರು ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ನಂಜನಗೂಡು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೈಸೂರು ಭಾಗದ ಜನರಲ್ಲಿ ಆತಂಕವನ್ನುಂಟು ಮಾಡುತ್ತಿದೆ. ಇನ್ನು ನಂಜನಗೂಡಿನ ಮೊದಲ ಸೋಂಕಿತ ಗುಣಮುಖನಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ರೂ ಆತ ಮನೆಗೆ ಹೋಗಲು ಒಪ್ಪುತ್ತಿಲ್ಲ.
Advertisement
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 7 ಹೊಸ #Covid19 ಪ್ರಕರಣಗಳು ಖಚಿತವಾಗಿತದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 214ಕ್ಕೆ ಏರಿದೆ. ಇದುವರೆಗೆ 37 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. #IndiaFightsCornona pic.twitter.com/M5MrNDpqxQ
— B Sriramulu (@sriramulubjp) April 11, 2020
Advertisement
ಇಂದು ಪತ್ತೆಯಾದ ಹೊಸ ಏಳು ಕೊರೊನಾ ರೋಗಿಗಳ ಮಾಹಿತಿ ಇಲ್ಲಿದೆ.
1. ರೋಗಿ ನಂಬರ್ 208 : 32 ವರ್ಷದ ವ್ಯಕ್ತಿಯಾಗಿದ್ದು, ಬೆಂಗಳೂರು ನಿವಾಸಿ, ರೋಗಿ 196ರ ಜೊತೆ ಸಂಪರ್ಕ ಹೊಂದಿದ್ದನು. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2. ರೋಗಿ ನಂಬರ್ 209 : 46 ವರ್ಷದ ವ್ಯಕ್ತಿಯಾಗಿದ್ದು, ಮೈಸೂರು ನಿವಾಸಿ. ರೋಗಿ ನಂಬರ್ 88 ರ ಸಂಪರ್ಕದಲ್ಲಿದ್ದರು. ಫಾರ್ಮ ಕಂಪನಿಯ ಸಿಬ್ಬಂದಿ, ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
3. ರೋಗಿ ನಂಬರ್ 210 : 43 ವರ್ಷದ ವ್ಯಕ್ತಿಯಾಗಿದ್ದು, ಮೈಸೂರು ನಿವಾಸಿ. ರೋಗಿ ನಂಬರ್ 88 ರ ಸಂಪರ್ಕದಲ್ಲಿದ್ದರು. ನಂಜನಗೂಡಿನ ಔಷಧ ಕಂಪನಿಯ ಸಿಬ್ಬಂದಿ. ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
4. ರೋಗಿ ನಂಬರ್ 211: 50 ವರ್ಷದ ಮಹಿಳೆಯಾಗಿದ್ದು, ಬೀದರ್ ನಿವಾಸಿಯಾಗಿದ್ದಾರೆ. ಇವರು ರೋಗಿ ನಂಬರ್ 122ರ ಸಂಪರ್ಕದಲ್ಲಿದ್ದರು. ರೋಗಿ 122ರ ಅಣ್ಣನ ಹೆಂಡತಿಯಾಗಿದ್ದು, ಇವರನ್ನು ಬೀದರ್ ನಲ್ಲಿ ನಿಗದಿಯ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
5. ರೋಗಿ ನಂಬರ್ 212: 27 ವರ್ಷದ ಪುರುಷನಾಗಿದ್ದು, ಮೈಸೂರಿನ ನಿವಾಸಿ. ರೋಗಿ ನಂಬರ್ 88ರ ಸಂಪರ್ಕದಲ್ಲಿದ್ದರು. ನಂಜನಗೂಡಿನ ಔಷಧ ಕಂಪನಿಯ ಸಿಬ್ಬಂದಿ. ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
6. ರೋಗಿ ನಂಬರ್ 213: 31 ವರ್ಷದ ಪುರುಷನಾಗಿದ್ದು, ನಂಜನಗೂಡಿನ ಔಷಧ ಕಂಪನಿಯ ಸಿಬ್ಬಂದಿ. ರೋಗಿ ನಂಬರ್ 88ರ ಸಂಪರ್ಕದಲ್ಲಿದ್ದರು. ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
7. ರೋಗಿ ನಂಬರ್ 214: 26 ವರ್ಷದ ಪುರುಷನಾಗಿದ್ದು, ನಂಜನಗೂಡಿನ ಔಷಧ ಕಂಪನಿಯ ಸಿಬ್ಬಂದಿ. ರೋಗಿ ನಂಬರ್ 88ರ ಸಂಪರ್ಕದಲ್ಲಿದ್ದರು. ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಮೈಸೂರಿನಲ್ಲಿ 5, ಬೆಂಗಳೂರು ಮತ್ತು ಬೀದರ್ ನಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿದೆ. ಬೀದರ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆಯಾದ್ರೆ, ಬೆಂಗಳೂರಿನಲ್ಲಿ 71ಕ್ಕೆ ಏರಿಕೆ ಆಗಿದೆ. ಬೆಂಗಳೂರಿನಲ್ಲಿಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವುದನ್ನು ಗಮನಿಸಿದ್ರೆ ರಾಜ್ಯ ರಾಜಧಾನಿ ರೆಡ್ ಝೋನ್ ನಲ್ಲಿದೆಯಾ ಎಂಬ ಪ್ರಶ್ನೆ ಪದೇ ಪದೇ ಹುಟ್ಟಿಕೊಳ್ಳುತ್ತಿದೆ. ಈಗಾಗಲೇ ಬೆಂಗಳೂರಿನ ಬಾಪೂಜಿ ನಗರ, ಪಾದರಾಯನಪುರ ಮತ್ತು ಜೆಜೆ ನಗರ ಸೀಲ್‍ಡೌನ್ ಮಾಡಲಾಗಿದೆ.