ಬೆಂಗಳೂರು: ಹಸಿದವರಿಗೆ ಅನ್ನ ನೀಡದ ಸರ್ಕಾರ ಜನದ್ರೋಹಿ ಸರ್ಕಾರವೆಂದು ಕರೆಸಿಕೊಳ್ಳುತ್ತದೆ ಎಂದು ರಾಜಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಪರೋಕ್ಷವಾಗಿ ಕೇಂದ್ರ ಸರ್ಕಾರದ (Union Government) ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
Advertisement
ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, 10 ದಿನಗಳ ಕಾಲ ಈ ಅಧಿವೇಶನ ನಡೆಯಲಿದೆ. ಸೋಮವಾರ ಅಧಿವೇಶನಕ್ಕೆ ಹಾಜರಾದ ರಾಜಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನ ಹೂಗುಚ್ಛ ನೀಡಿ ಸಿಎಂ ಸಿದ್ದರಾಮಯ್ಯ (Siddaramaiah) ಸ್ವಾಗತಿಸಿದರು. ಈ ವೇಳೆ ಕಾನೂನು ಮಂತ್ರಿ ಹೆಚ್.ಕೆ ಪಾಟೀಲ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ನಂತರ ಜಂಟಿ ಸದನವನ್ನುದ್ದೇಶಿಸಿ ರಾಜ್ಯಪಾಲರು ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದಿದರು.
Advertisement
Advertisement
ಕಳೆದ 34 ವರ್ಷಗಳಲ್ಲಿ ಯಾರಿಗೂ ಇಷ್ಟು ದೊಡ್ಡ ಬಹುಮತ ಸಿಕ್ಕಿರಲಿಲ್ಲ. ಯಾರಿಗೂ ನೀಡದ ಬಹುಮತದೊಂದಿಗೆ ಜನ ಈ ಸರ್ಕಾರವನ್ನ ಆಯ್ಕೆ ಮಾಡಿದ್ದಾರೆ. ಹಾಗಾಗಿ ಜನಕೇಂದ್ರಿತ ಅರ್ಥ ವ್ಯವಸ್ಥೆ, ಜನಕೇಂದ್ರಿತ ಶಾಸನಗಳನ್ನ ಈ ಸರ್ಕಾರ ಜಾರಿಗೊಳಿಸುತ್ತೆ. ಎಲ್ಲ ಸಮುದಾಯಗಳ ಜೊತೆಗೆ ಅಭಿವೃದ್ಧಿ ಹಾದಿಯಲ್ಲಿ ಕೊಂಡೊಯ್ಯುವ ಮೂಲಕ ಸೌಹಾರ್ದಯುತ ಸಂದೇಶವನ್ನ ಸರ್ಕಾರ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿಎಂ ಕಚೇರಿಗೆ ಶಾಸಕರ ಲೆಟರ್ ತಗೊಂಡು ಹೋದ್ರೆ 30 ಲಕ್ಷ ಕೇಳ್ತಾರೆ: ಹೆಚ್‍ಡಿಕೆ ಹೊಸ ಆರೋಪ
Advertisement
ಈ ಹಿಂದೆ ಸಂಕುಚಿತ ಮನಸ್ಸುಗಳು ಸಮಾಜದಲ್ಲಿ ಜಾತಿ-ಜಾತಿಗಳ ನಡುವೆ ತಾರತಮ್ಯ ಸೃಷ್ಟಿಸಿದ್ದವು, ಒಡಕು ಮೂಡಿಸಿದ್ದವು. ಆದ್ರೆ ಈ ಸರ್ಕಾರ ದ್ವೇಷರಹಿತ, ಪ್ರೀತಿ ಯುಕ್ತ ಸಮಾಜ ನಿರ್ಮಾಣದ ಗುರಿ ಹೊಂದಿದೆ. ಪಂಚ ಗ್ಯಾರಂಟಿಗಳ ಜಾರಿಯಲ್ಲಿ ಶ್ರದ್ಧೆ, ಬದ್ಧತೆ, ನೈಜ ಕಾಳಜಿ ತೋರುತ್ತದೆ. ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದೆ. 5 ಕೆಜಿ ಅಕ್ಕಿ, ಉಳಿದ 5 ಕೆಜಿ ಅಕ್ಕಿ ಬದಲು ಹಣ ನೀಡಲು ಮುಂದಾಗಿದೆ. ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಅಂತಹ ಯೋಜನೆಗಳ ಮೂಲಕ ಬಡಜನರ ಹಸಿವು ನೀಗಿಸುತ್ತಿದೆ. ಯುವನಿಧಿ ಯೋಜನೆ ಅಡಿಯಲ್ಲಿ ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ನೀಡಲಿದೆ. ಗೃಹಜ್ಯೋತಿ ಮೂಲಕ 2.14 ಕೋಟಿ ಮನೆಗಳಿಗೆ ಷರತ್ತುಗಳೊಂದಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದೆ ಎಂದು ಶ್ಲಾಘಿಸಿದರು.
ಕೆಲವು ಸಂಕುಚಿತ ಮನಸ್ಸುಗಳು ಗಂಡು-ಹೆಣ್ಣುಗಳ ನಡುವೆ ಹಾಗೂ ಸಮಾಜದಲ್ಲಿ ವಿವಿಧ ಸಮುದಾಯಗಳ ನಡುವೆ ತಾರತಮ್ಯ, ಒಡಕುಗಳನ್ನು ಸೃಷ್ಟಿಸಿದ್ದವು. ಸಮಾಜದ ವಿವಿಧ ಪದರದಲ್ಲಿ ಈ ರೀತಿಯ ಮನಸ್ಥಿತಿಯ ಅವಶೇಷಗಳು ಇನ್ನೂ ಜೀವಂತವಾಗಿ ಉಳಿದುಕೊಂಡಿದೆ. ಆದರೀಗ ಸಂವಿಧಾನ ತೋರಿಸುವ ದಾರಿಯಲ್ಲಿ ನಡೆದು ಸಮಾಜದ ಎಲ್ಲಾ ವರ್ಗಗಳ ಜನರನ್ನ ಅಭಿವೃದ್ಧಿ ಮತ್ತು ನೆಮ್ಮದಿಯ ಕಡೆಗೆ ಮುನ್ನಡೆಸಲು ಸರ್ಕಾರ ಸಿದ್ಧವಾಗಿದೆ. ರಾಜ್ಯವನ್ನ ಆರ್ಥಿಕ ಸಂಕಷ್ಟದ ಸ್ಥಿತಿಯಿಂದ ಮೇಲೆತ್ತುವುದೂ ಸರ್ಕಾರದ ಆದ್ಯತೆಯಾಗಿದೆ. ರಾಜ್ಯದಲ್ಲಿ ಜನ ಕಲ್ಯಾಣ ಮತ್ತು ಆರ್ಥಿಕ ಸ್ಥಿತಿ ಎರಡನ್ನೂ ಸಮತೂಕದಲ್ಲಿ ನಿಭಾಯಿಸಿ ಹೊಸ ಆಡಳಿತ ಮಾದರಿ ನೀಡುವುದು ಸರ್ಕಾರದ ಉದ್ದೇಶವಾಗಿದೆ. ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳ ಮೂಲಕ ಇದನ್ನ ಸಾಧಿಸಲು ಹೊರಟಿದೆ. ಇದರ ಅನುಷ್ಠಾನವನ್ನ ಶ್ರದ್ಧೆಯಿಂದ ಸರ್ಕಾರ ಮಾಡಲಿದೆ. ಹಸಿದವರಿಗೆ ಅನ್ನ ನೀಡದ ಸರ್ಕಾರ ಅತ್ಯಂತ ಜನದ್ರೋಹಿ ಸರ್ಕಾರ ಎಂದು ಕರೆಸಿಕೊಳ್ಳುತ್ತದೆ ಎಂದು ಅಸಮಾಧಾನ ಹೊರಹಾಕಿದರು. ಈ ಮೂಲಕ ಪರೋಕ್ಷವಾಗಿ ಕೇಂದ್ರ ಸರ್ಕಾರಕ್ಕೆ ಟಾಂಗ್ ಕೊಟ್ಟರು.
ಇನ್ನೂ ಭ್ರಷ್ಟಾಚಾರ ನಿರ್ಮೂಲನೆ, ಸಾಮಾಜಿಕ ನ್ಯಾಯ ಪಾಲನೆ ಸರ್ಕಾರದ ಗುರಿಯಾಗಿದೆ. ಏಕೆಂದರೆ ಇಂದು ಜನಸಂಖ್ಯೆಯ ಬಹುಭಾಗ ಸುಶಿಕ್ಷಿತವಾಗುತ್ತಿದ್ದಂತೆ ಅತ್ಯಾಧುನಿಕ ತಂತ್ರಜ್ಞಾನ ಬೆಳಯುತ್ತಿದ್ದು, ಜನರ ದುಷ್ಟ ಚಿಂತನೆಗಳು ಜಗತ್ತಿನಲ್ಲಿ ತಾಂಡವವಾಡುತ್ತಿವೆ. ಸಮಾಜದಲ್ಲಿ ಸಾಮರಸ್ಯ ಕದಡುವ ಗುಣವುಳ್ಳ ಬೆರಳೆಣಿಕೆಯ ಚಿಂತನೆಗಳು ತಲೆಯೆತ್ತುತ್ತಿವೆ. ಆದ್ದರಿಂದ ಜನರನ್ನ ಪರಸ್ಪರ ಬೆಸೆಯುವ ಕ್ರಮಗಳನ್ನು ಸರ್ಕಾರ ಕೈಗೊಳ್ಳುವುದು ಅವಶ್ಯಕವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬ್ರೇಕಪ್ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಟೈಗರ್ ಶ್ರಾಫ್- ದಿಶಾ ಪಟಾನಿ ಜೋಡಿ
Web Stories