– ಫೆಡರೇಷನ್ ಕಪ್ ಚಾಂಪಿಯನ್‌ಶಿಪ್‌ನಲ್ಲಿ ಸೆಕೆಂಡ್ ರನ್ನರ್ ಅಪ್
ಬಾಗಲಕೋಟೆ: ಡಿ. 28 ಮತ್ತು 29 ರಂದು ಉತ್ತರ ಪ್ರದೇಶದ ವಾರಣಾಸಿಯ ಬನಾರಸ್ ಹಿಂದೂ ವಿಶ್ವಾವಿದ್ಯಾಲಯ (Banaras Hindu University) ಒಳಾಂಗಣ ಕ್ರೀಡಾಂಗಣ ನಡೆದ ಆಲ್ ಇಂಡಿಯಾ ಇಂಟರ್ ಸ್ಕೂಲ್ ಮತ್ತು ಸೀನಿಯರ್ ಕರಾಟೆ ಚಾಂಪಿಯನ್‌ಶಿಪ್ (Karate Championship) ಫೆಡೆರೇಷನ್ ಕಪ್ ಪಂದ್ಯಾವಳಿಯಲ್ಲಿ ಕರ್ನಾಟಕದ (Karnataka) 18 ವಿದ್ಯಾರ್ಥಿಗಳು ಭಾಗವಹಿಸಿ ಪದಕಗಳ ರಾಶಿಯನ್ನೇ ಬೇಟೆಯನ್ನಾಡಿದ್ದಾರೆ.
Advertisement
ದೆಹಲಿ, ಪಶ್ಚಿಮ ಬಂಗಾಳ, ಹರ್ಯಾಣ, ಆಸ್ಸಾಂ, ಮಣಿಪುರ, ಜಾರ್ಖಂಡ್ ಬಿಹಾರ, ತಮಿಳುನಾಡು, ಪಂಜಾಬ್ ಸೇರಿದಂತೆ 17 ರಾಜ್ಯಗಳಿಂದ ಸುಮಾರು 2500 ಕ್ಕೂ ಹೆಚ್ಚು ಕರಾಟೆ ಪಟುಗಳ ಪಾಲ್ಗೊಂಡಿದ್ದು, ನಮ್ಮ ರಾಜ್ಯದ ಕರಾಟೆ ಪಟುಗಳು ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ ಸ್ಪರ್ಧಿಸಿ 8 ಚಿನ್ನದ ಪದಕ, 12 ಬೆಳ್ಳಿ ಪದಕ ಹಾಗೂ 09 ಕಂಚು ಒಟ್ಟು 29 ಪದಕಗಳನ್ನು ಬಾಚಿಕೊಳ್ಳುವ ಮೂಲಕ ಚಾಂಪಿಯನ್‌ಶೀಪ್‌ನಲ್ಲಿ “ಸೆಕೆಂಡ್ ರನ್ನರ್ ಅಪ್” ಪ್ರಶಸ್ತಿಯನ್ನು ಕರ್ನಾಟಕ ತಂಡ ಪಡೆದುಕೊಂಡಿದೆ.
Advertisement
Advertisement
ಕರ್ನಾಟಕದ ವಿದ್ಯಾರ್ಥಿಗಳ ಸಾಧನೆಗೆ ಭಾರತದ ಡಬ್ಲುಎಂಕೆಎಫ್ ಮುಖ್ಯ ರೇಫ್ರಿ ಹಾನ್ಸಿ ಪ್ರೇಮಜಿತ್ ಸೇನ್, ನಾರ್ತ್ ಇಂಡಿಯಾ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಹಾನ್ಸಿ ರಜನಿಶ್ ಚೌಧರಿ, ಬಾಗಲಕೋಟೆ ಶಾಸಕ ಎಚ್.ವೈ ಮೇಟಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಪಂ ಸಿಇಓ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಜಿ ಡೂಗನವರ, ಮೇಲ್ವಿಚಾರಕ ರಂಗಪ್ಪ ಕ್ಯಾಲಕೊಂಡ, ಕ್ರೀಡಾ ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿ ಸಾಧಕರಿಗೆ ಅಭಿನಂದಿಸಿದ್ದಾರೆ ಎಂದು ರಾಜ್ಯದ ಚೀಫ್ ಕೋಚ್ ಎಸ್.ಆರ್.ರಾಠೋಡ ತಿಳಿಸಿದ್ದಾರೆ.
Advertisement
ಚಾಂಪಿಯನ್‌ಶಿಪ್‌ನಲ್ಲಿ ಪದಕಗಳನ್ನು ಜಯಿಸಿ ತಾಯ್ನಾಡಿಗೆ ಬಂದಿಳಿದ ವಿದ್ಯಾರ್ಥಿಗಳನ್ನು ಬಾಗಲಕೋಟೆ ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿಯಾಗಿ ಕರಾಟೆ ಅಭಿಮಾನಿಗಳು ಹಾಗೂ ಪಾಲಕರು ಸ್ವಾಗತಿಸಿದರು.
ಪದಕ ಪಡೆದ ಕ್ರೀಡಾಪಟುಗಳು : ಮಹಮ್ಮದ್ ಮಾಜ್ ಗಲಗಲಿ (2 ಚಿನ್ನ) ಆನಂದ ನಾಯ್ಕ್ (ಚಿನ್ನ ಮತ್ತು ಬೆಳ್ಳಿ) ಶ್ರೇಯಸ್ಸ್ ನಾಗರವಳ್ಳಿ (ಚಿನ್ನ ಮತ್ತು ಬೆಳ್ಳಿ) ಅರುಣ ಧನ್ನೂರ (ಚಿನ್ನ ಮತ್ತು ಬೆಳ್ಳಿ) ಪ್ರಭುಸ್ವಾಮಿ ಆರಾಧ್ಯಮಠ (ಚಿನ್ನ ಮತ್ತು ಕಂಚು) ಸಾಗರ ಚವ್ಹಾಣ (ಚಿನ್ನ) ಪ್ರಜ್ವಲ ರಾಠೋಡ (ಚಿನ್ನ) ಸಾತ್ವಿಕ ಶೇಬನ್ನವರ (2 ಬೆಳ್ಳಿ) ಸಾಗರಕುಮಾರ ಮರಕುಂಬಿ (ಬೆಳ್ಳಿ ಮತ್ತು ಕಂಚು) ರಾಮಕೃಷ್ಣ ದಾಸರ (ಬೆಳ್ಳಿ ಮತ್ತು ಕಂಚು) ಸಾಯಿಪ್ರಸಾದ ಪೂಜಾರಿ (ಬೆಳ್ಳಿ ಮತ್ತು ಕಂಚು) ಶರಣಗೌಡ ಪಾಟೀಲ (ಬೆಳ್ಳಿ) ಕರಣ ರಾಠೋಡ (ಬೆಳ್ಳಿ) ಅಕ್ಷಿತ ರಾಠೋಡ (ಬೆಳ್ಳಿ) ಜಯಂತ ಗೋರಗುಂಡಗಿ (ಬೆಳ್ಳಿ) ಈಶ್ವರಯ್ಯ ಗುರುಶಾಂತನವರ (2 ಕಂಚು) ತನ್ಮಯ ರಾವ್ (2 ಕಂಚು) ಯಶವಂತ ನಾಯಕ (2 ಕಂಚು) ಪಡೆದಿದ್ದಾರೆ.
ಪಂದ್ಯಾವಳಿಯಲ್ಲಿ ಕರ್ನಾಟಕದಿಂದ ರೆಫ್ರಿಯಾಗಿ ಚೀಫ್ ಕೋಚ್ ಎಸ್.ಆರ್ ರಾಠೋಡ, ಶಾಂತು ಚವ್ಹಾಣ, ಸಾಗರಕುಮಾರ್ ಮರಕುಂಬಿ, ರಾಮಕೃಷ್ಣ ದಾಸರ ಮತ್ತು ಆನಂದ ನಾಯ್ಕ ಭಾಗವಹಿಸಿದ್ದರು.