ಮಗನ ಸಾಧನೆ ನೋಡೋಕೆ ಅವನ ತಂದೆ ನಮ್ಮೊಂದಿಗಿಲ್ಲ: ಮೈಸೂರಿನ ಶಿಲ್ಪಿ ಯೋಗಿರಾಜ್‌ ತಾಯಿ ಮಾತು

Public TV
2 Min Read
yogiraj arun mother

– ಮೈಸೂರಿನ ಯೋಗಿರಾಜ್‌ ಕೆತ್ತಿರುವ ರಾಮನ ಮೂರ್ತಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ

ನವದೆಹಲಿ: ಜ.22 ರಂದು ಅಯೋಧ್ಯೆ (Ayodhya) ರಾಮಮಂದಿರದಲ್ಲಿ (Ram Mandir) ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆಗೆ ಮೈಸೂರಿನ ಶಿಲ್ಪಿ ಯೋಗಿರಾಜ್‌ ಅರುಣ್‌ ಕೆತ್ತನೆ ಮಾಡಿರುವ ಮೂರ್ತಿ ಆಯ್ಕೆಯಾಗಿದೆ. ಇದಕ್ಕೆ ಯೋಗಿರಾಜ್‌ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಸೋಮವಾರ ಎಕ್ಸ್‌ ಖಾತೆಯಲ್ಲಿ ಈ ವಿಚಾರವನ್ನು ದೃಢಪಡಿಸಿದ್ದಾರೆ. “ಎಲ್ಲಿ ರಾಮನೋ ಅಲ್ಲಿ ಹನುಮನು”. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ಕೆ ವಿಗ್ರಹ ಆಯ್ಕೆ ಅಂತಿಮಗೊಂಡಿದೆ. ನಮ್ಮ ನಾಡಿನ ಹೆಸರಾಂತ ಶಿಲ್ಪಿ ನಮ್ಮ ಹೆಮ್ಮೆಯ ಯೋಗಿರಾಜ್‌ ಅರಣ್‌ (Yogiraj Arun) ಅವರು ಕೆತ್ತಿರುವ ಶ್ರೀರಾಮನ ವಿಗ್ರಹ ಪುಣ್ಯಭೂಮಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ರಾಮ ಹನುಮರ ಅವಿನಾಭಾವ ಸಂಬಂಧಕ್ಕೆ ಇದು ಮತ್ತೊಂದು ನಿದರ್ಶನ. ಹನುಮನ ನಾಡು ಕರ್ನಾಟಕದಿಂದ ರಾಮಲಲ್ಲಾನಿಗೆ ಇದೊಂದು ಮಹತ್ವಪೂರ್ಣ ಸೇವೆ ಎಂದರೆ ತಪ್ಪಾಗಲಾರದು ಎಂದು ಜೋಶಿ ಟ್ವೀಟ್‌ ಮಾಡಿದ್ದರು. ಇದನ್ನೂ ಓದಿ: Ayodhya Ram Mandir – ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಪ್ರತಿಮೆ ಆಯ್ಕೆ?

ಯೋಗಿರಾಜ್ ಅವರ ತಾಯಿ ಸರಸ್ವತಿ, ನನ್ನ ಮಗ 6 ತಿಂಗಳ ಹಿಂದೆಯೇ ಅಯೋಧ್ಯೆಗೆ ಹೋಗಿದ್ದಾನೆ. ಅವನ ಬೆಳವಣಿಗೆ ಕಂಡು ಖುಷಿಯಾಗಿದೆ. ಈ ಸಾಧನೆ ನೋಡುವುದಕ್ಕೆ ಅವನ ತಂದೆ ನಮ್ಮೊಂದಿಗೆ ಇಲ್ಲದಿರುವುದು ಬೇಸರದ ಸಂಗತಿ ಎಂದು ಮಾತನಾಡಿದ್ದಾರೆ.

ಇದು ನಮಗೆ ಅತ್ಯಂತ ಸಂತೋಷದ ಕ್ಷಣ. ಮಗ ಶಿಲ್ಪ ಕೆತ್ತುವುದನ್ನು ನೋಡಲು ಬಯಸಿದ್ದೆ. ಆದರೆ ಅದು ಆಗಲಿಲ್ಲ. ಪ್ರತಿಷ್ಠಾಪನೆ ದಿನ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾನೆ. ಆ ದಿನ ನಾನು ಅಯೋಧ್ಯೆಗೆ ಹೋಗುತ್ತೇನೆ ಎಂದು ಖುಷಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಶ್ರೀರಾಮನ ಭಕ್ತರಿಗೆ ಮಾತ್ರ ಅಯೋಧ್ಯೆಗೆ ಆಹ್ವಾನ: ಉದ್ಧವ್ ಠಾಕ್ರೆಗೆ ಆಚಾರ್ಯ ಸತ್ಯೇಂದ್ರ ದಾಸ್ ತಿರುಗೇಟು

ಇದೇ ಜ.22 ರಂದು ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗಲಿದ್ದಾರೆ.

Share This Article