ಸೋಮವಾರದಿಂದ ಶಾಲೆಗಳ ಪ್ರಾರಂಭಕ್ಕೆ ಸಕಲ ಸಿದ್ಧತೆ – ವಿದ್ಯಾರ್ಥಿಗಳ ಸ್ವಾಗತಕ್ಕೆ ತಳಿರು ತೋರಣಗಳಿಂದ ಸಿಂಗಾರ

Public TV
2 Min Read
SCHOOL

ಬೆಂಗಳೂರು: 2022-23ನೇ ಸಾಲಿನ ಶೈಕ್ಷಣಿಕ ವರ್ಷ ನಾಳೆಯಿಂದ ಪ್ರಾರಂಭ ಆಗಲಿದೆ. ಎರಡು ವರ್ಷಗಳ ಕೊರೊನಾ ಅಲೆಯಲ್ಲಾದ ಕಲಿಕೆ ನಷ್ಟ ತುಂಬುವ ಹಿನ್ನೆಲೆಯಲ್ಲಿ 15 ದಿನ ಮುಂಚಿತವಾಗಿ ಶಿಕ್ಷಣ ಇಲಾಖೆ ಶಾಲೆಗಳನ್ನು ಪ್ರಾರಂಭ ಮಾಡುತ್ತಿದೆ. ಈ 15 ದಿನ ಕಾಮನಬಿಲ್ಲು ಮತ್ತು ಕಲಿಕಾ ಚೇತರಿಕೆ ಅನ್ನೋ ವಿಶೇಷ ಕಾರ್ಯಕ್ರಮಗಳನ್ನು 1 ರಿಂದ 10 ನೇ ತರಗತಿಗಳಿಗೆ ಅನುಷ್ಠಾನ ಮಾಡಲಾಗುತ್ತಿದೆ.

School

ಶಾಲೆಗಳ ಪ್ರಾರಂಭಕ್ಕೆ ಮದುವಣಗಿತ್ತಿಯಂತೆ ಶಾಲೆಗಳು ಸಿಂಗಾರವಾಗಿದೆ. ಭಾನುವಾರವಾದರು ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ಶಾಲೆಗಳನ್ನು ಸಿದ್ಧ ಮಾಡುವ ಕೆಲಸದಲ್ಲಿ ತೊಡಗಿದ್ದರು. ಹೆಬ್ಬಾಳದ ಸರ್ಕಾರಿ ಶಾಲೆಯಲ್ಲಿ ಖುದ್ದು ಶಿಕ್ಷಕರು ಮತ್ತು ಸಿಬ್ಬಂದಿ ಕೊಠಡಿಗಳನ್ನು ಸ್ವಚ್ಛಗೊಳಿಸೋದು, ಶಾಲೆ ಆವರಣ ಸ್ವಚ್ಛ ಮಾಡೋ ಕೆಲಸದಲ್ಲಿ ನಿರತರಾಗಿದ್ದರು. ಇದನ್ನೂ ಓದಿ: ನ್ಯಾಯ ಸಿಗದಿದ್ರೆ ನಾವೂ ಟೆರರಿಸ್ಟ್‌ಗಳ ಜೊತೆ ಸೇರುತ್ತೇವೆ – ರಕ್ತದಲ್ಲಿ ಮೋದಿಗೆ ಪತ್ರ ಬರೆದ ನೊಂದ ಪಿಎಸ್‌ಐ ಅಭ್ಯರ್ಥಿಗಳು

BC NAGESH 1

ಕೊರೊನಾ ತೀವ್ರತೆ ಕಡಿಮೆ ಇದ್ದರೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಶಿಕ್ಷಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಮಕ್ಕಳನ್ನು ಮೊದಲ ದಿನ ಶಾಲೆಗೆ ತಳಿರು-ತೋರಣಗಳಿಂದ ಸ್ವಾಗತ ಮಾಡಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಶಾಲೆ ಪ್ರಾರಂಭಕ್ಕೆ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಇದನ್ನೂ ಓದಿ: ತಲೆಕೂದಲು ಕಸಿಯಿಂದ ವ್ಯಕ್ತಿ ಸಾವು – ಅಕ್ರಮ ಸಲೂನ್‌ಗಳ ವಿರುದ್ಧ ತನಿಖೆಗೆ ಕೋರ್ಟ್ ಸೂಚನೆ

BC NAGESH

ವಿದ್ಯಾರ್ಥಿಗಳಿಗೆ ನಿತ್ಯ ಶಾಲೆಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್, ಆಕ್ಸಿಜನ್ ಲೆವೆಲ್ ಚೆಕ್ ಮಾಡಬೇಕು. ವಿದ್ಯಾರ್ಥಿಗಳು ಶಾಲೆಗೆ ಆಗಮಿಸುವ ವೇಳೆ, ನಿರ್ಗಮನದ ವೇಳೆ ಸಾಮಾಜಿಕ ಅಂತರಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಮಾಸ್ಕ್ ಬಗ್ಗೆ ಅರಿವು ಮೂಡಿಸುವ ಕೆಲಸ ಶಿಕ್ಷಕರು ಮಾಡಬೇಕು. ಶಿಕ್ಷಕರು, ಶಾಲಾ ಸಿಬ್ಬಂದಿ ಕಡ್ಡಾಯವಾಗಿ ಎರಡು ಡೋಸ್ ಮತ್ತು ಬೂಸ್ಟರ್ ಡೋಸ್ ಲಸಿಕೆ ಹಾಕಿಸಿರಬೇಕು. ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಶಾಲಾ ಕೊಠಡಿಗಳಿಗೆ ಸ್ಯಾನಿಟೈಸ್ ಮಾಡಲು ಕ್ರಮವಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚನೆ ನೀಡಲಾಗಿದೆ.

ಶಾಲೆಗಳ ಸಾರಿಗೆ ವ್ಯವಸ್ಥೆಯಲ್ಲಿ ಮಾರ್ಗಸೂಚಿ ಪಾಲನೆ ಮಾಡಬೇಕು. ಶಾಲೆಯ ಒಳಗೆ ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರದ ನಿಯಮ ಪಾಲನೆಗೆ ಕ್ರಮ ತೆಗೆದುಕೊಳ್ಳಬೇಕು. ಬಿಸಿಯೂಟ ಮಾಡುವವರು ಕಡ್ಡಾಯವಾಗಿ ಲಸಿಕೆ ಹಾಕಿಸಿರಬೇಕು. ಅಡುಗೆ ಮನೆ ಶುಚಿತ್ವಕ್ಕೆ ಕ್ರಮವಹಿಸಬೇಕು. ಶಾಲೆಯಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ಶುಚಿತ್ವ ಕಾಪಾಡಲು ಕ್ರಮವಹಿಸಬೇಕು. ಆರೋಗ್ಯದಲ್ಲಿ ವ್ಯತ್ಯಾಸ ಇರುವ ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಅವಕಾಶ ಕೊಡಬಾರದು. ಶಾಲೆಗಳಲ್ಲಿ ಕೋವಿಡ್ ಪ್ರಕರಣ ಕಂಡು ಬಂದರೆ ಕೂಡಲೇ ಇಡೀ ತರಗತಿಯ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಿಸಬೇಕು ಎಂಬ ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಶಾಲೆ ಪ್ರಾರಂಭದ ಸಿದ್ಧತೆ ಮಾಡಿಕೊಳ್ಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *