ಬೆಂಗಳೂರು: ರಾಜ್ಯದ ಜಲಾಶಯಗಳ (Karnataka Dam) ನೀರಿನ ಮಟ್ಟ ಭಾರೀ ಕುಸಿತಗೊಂಡಿದ್ದು, ಮಳೆ (Rain) ಬಾರದೇ ಇದ್ದರೆ ಈ ಬಾರಿ ಬೇಸಿಗೆಯಲ್ಲಿ ನೀರಿಗೆ ಸಮಸ್ಯೆಯಾಗುವುದು (Water Scarcity) ಖಚಿತ.
ಹೌದು ಕಳೆದ ಬಾರಿ ಹೋಲಿಕೆ ಮಾಡಿದರೆ ಜಲಾಶಯಗಳ ನೀರಿನ ಮಟ್ಟ 42% ಕುಸಿತಗೊಂಡಿದೆ. ಕಳೆದ ವರ್ಷದ ಜ.11 ರಂದು ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹಾಗೂ ಈ ವರ್ಷದ ನೀರಿನ ಮಟ್ಟದ ಹೋಲಿಕೆ ಮಾಡಿ ಕರ್ನಾಟಕ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದಿಂದ (KSNDMC) ದಾಖಲೆ ಬಿಡುಗಡೆ ಮಾಡಿದೆ. ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆಗೆ 55 ರಾಷ್ಟ್ರಗಳ 100ಕ್ಕೂ ಹೆಚ್ಚು ಗಣ್ಯರಿಗೆ ಆಹ್ವಾನ – ಯಾವ್ಯಾವ ದೇಶಕ್ಕೆ ಆಮಂತ್ರಣ?
Advertisement
Advertisement
ಒಟ್ಟು 895 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ರಾಜ್ಯದ ಜಲಾಶಯಗಳಿಗಿದೆ. ಸದ್ಯ ಈಗ 378 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಈ ಅವಧಿಯಲ್ಲಿ ಬರೋಬ್ಬರಿ 619 ಟಿಎಂಸಿ ನೀರಿನ ಸಂಗ್ರಹವಿತ್ತು. ಕೆಲವೊಂದು ಜಲಾಶಯಗಳು 69% ರಷ್ಟು ನೀರಿನ ಕೊರತೆಯನ್ನು ಎದುರಿಸುತ್ತಿದೆ ಎಂದು ಹೇಳಿದೆ. ಇದನ್ನೂ ಓದಿ:ಮೇಯರ್ ಚುನಾವಣೆ : ಮಾಲ್ಡೀವ್ಸ್ ಆಡಳಿತ ಪಕ್ಷಕ್ಕೆ ಹೀನಾಯ ಸೋಲು – ಭಾರತದ ಪರ ಪಕ್ಷಕ್ಕೆ ಭರ್ಜರಿ ಜಯ
Advertisement
ಕಳೆದ ವರ್ಷ ಲಿಂಗನಮಕ್ಕಿ ಜಲಾಶಯದಲ್ಲಿ 95.19 ಟಿಎಂಸಿ ನೀರಿದ್ದರೆ ಈ ಬಾರಿ 52.98 ಟಿಎಂಸಿ ನೀರು ಸಂಗ್ರಹವಾಗಿದೆ. ಕೆಎಆರ್‌ಎಸ್‌ನಲ್ಲಿ ಕಳೆದ ವರ್ಷ 41.13 ಟಿಎಂಸಿ ನೀರಿದ್ದರೆ ಈ ಬಾರಿ 19.81 ಟಿಂಎಂಸಿ ನೀರು ಸಂಗ್ರಹವಾಗಿದೆ.
Advertisement
ಆಲಮಟ್ಟಿಯಲ್ಲಿ 2023ರಲ್ಲಿ87.23 ಟಿಎಂಸಿ ಇದ್ದರೆ ಈ ಬಾರಿ 54.76 ಟಿಎಂಸಿ ನೀರು ಸಂಗ್ರಹವಾಗಿದೆ. ತುಂಗಾಭದ್ರ ಜಲಾಶಯದಲ್ಲಿ ಕಳೆದ ವರ್ಷ 67.75 ಟಿಎಂಸಿ ನೀರಿದ್ದರೆ ಈ ಬಾರಿ 10.20 ಟಿಎಂಸಿ ನೀರು ಸಂಗ್ರಹವಾಗಿದೆ.