ಬೆಂಗಳೂರು: ಹುಬ್ಬಳ್ಳಿ ಕರಸೇವಕರ ಬಂಧನ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ (BJP) ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಹೈಕಮಾಂಡ್‌ಗೆ (Congress) ವರದಿ ನೀಡಿದೆ.
ಹುಬ್ಬಳ್ಳಿ ಪ್ರಕರಣದ (Hubballi Case) ಬಗ್ಗೆ ವರದಿ ಕೇಳಿದ ಕಾಂಗ್ರೆಸ್ ಹೈಕಮಾಂಡ್‌ಗೆ ಲಾಂಗ್ ಪೆಂಡಿಂಗ್ ಕೇಸ್ ವರದಿ ನೀಡಲಾಗಿದೆ. ಕಳೆದ ಒಂದು ತಿಂಗಳಿನಿಂದಲೂ ದೀರ್ಘ ಸಮಯದಿಂದ ಇದ್ದ ಪ್ರಕರಣಗಳ ಕ್ಲೀಯರ್ ಡ್ರೈವ್ ನಡೆಯುತ್ತಿದೆ. ಸಹಜವಾಗಿ ಎಲ್ಲ ಕಡೆ ಲಾಂಗ್ ಪೆಂಡಿಂಗ್ ಕೇಸ್ ಕ್ಲಿಯರ್ ವೇಳೆ ಕರಸೇವಕರದ್ದೂ ಸೇರಿದೆ ಎಂಬ ವರದಿ ನೀಡಲಾಗಿದೆ.
Advertisement
ಬಿಜೆಪಿ ಅವರು ಹುಬ್ಬಳ್ಳಿ ಪ್ರಕರಣವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ರಾಮಮಂದಿರ ಲೋಕಾರ್ಪಣೆ ಸಮಯದಲ್ಲಿ ಈ ಪ್ರಕರಣ ಸುದ್ದಿ ಆಗುತ್ತಿರುವುದು ಕಾಕತಾಳೀಯ ಎಂದು ವರದಿಯಲ್ಲಿ ಕಾಂಗ್ರೆಸ್ ತಿಳಿಸಿದೆ. ಇದನ್ನೂ ಓದಿ: ರಾಮಜನ್ಮಭೂಮಿ ಹೋರಾಟದ ಕೇಸ್‌ಗೆ ಮರುಜೀವ – 31 ವರ್ಷದ ಬಳಿಕ ಹುಬ್ಬಳ್ಳಿ ಆರೋಪಿ ಬಂಧನ
Advertisement
Advertisement
ಈ ಮಧ್ಯೆ ರಾಮ ಮಂದಿರ ಉದ್ಘಾಟನೆ ವೇಳೆ ಇದೆಲ್ಲ ಬೇಕಿತ್ತಾ ಎಂದು ಕಾಂಗ್ರೆಸ್ ಹಿರಿಯ ನಾಯಕರು ಅಸಮಾಧಾನ ಹೊರಹಾಕಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
Advertisement
ಪರಮೇಶ್ವರ್ ಹೇಳಿದ್ದೇನು?
ಹುಬ್ಬಳ್ಳಿ ಗಲಭೆ (Hubballi Riots) ವಿಚಾರವಾಗಿ ಹಿಂದೂ (Hindu) ಕಾರ್ಯಕರ್ತರ ಬಂಧನ ಉದ್ದೇಶಪೂರ್ವಕ ಅಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ (Parameshwar) ಹಿಂದೆ ಹೇಳಿದ್ದರು.
ಒಬ್ಬರನ್ನೇ ಬಂಧನ ಮಾಡಿಲ್ಲ, ಆಕಸ್ಮಿಕವಾಗಿ ಆಗಿರಬಹುದು. ಈ ಸಮಯದಲ್ಲಿ ಉದ್ದೇಶ ಪೂರ್ವಕವಾಗಿ ಯಾರಾದರೂ ಬಂಧನ ಮಾಡುತ್ತಾರಾ? ವರ್ಷಾನುಗಟ್ಟಲೇ ಬಾಕಿ ಉಳಿದಿರುವ ಕೇಸ್‌ಗಳನ್ನು ಕ್ಲೀಯರ್ ಮಾಡಲು ಹೇಳಿದ್ದೇವೆ. ಅದರಲ್ಲಿ ಹುಬ್ಬಳ್ಳಿಯಲ್ಲಿ 32 ಕೇಸುಗಳು ಪೆಂಡಿಂಗ್ ಇತ್ತು . ಅದನ್ನು ಓಪನ್ ಮಾಡಿ ಕ್ಲೀಯರ್ ಮಾಡುವ ವೇಳೆ ಈ ಕೇಸ್ ಬಂದಿದೆ. ಈ ಪ್ರಕರಣದಲ್ಲಿ ಅರೆಸ್ಟ್ ಮಾಡಿ ಕಸ್ಟಡಿಗೆ ಕೊಟ್ಟಿದಾರೆ. ಎಲ್ಲರಿಗೂ ಹೇಗೆ ಮಾಡಿದ್ದಾರೆ ಇವರಿಗೂ ಹಾಗೆ ಮಾಡಿದ್ದಾರೆ ಎಂದಿದ್ದರು.
ಇದರಲ್ಲಿ ಬೇರೆ ಯಾವುದೇ ಉದ್ದೇಶ ಇಟ್ಟುಕೊಂಡಿಲ್ಲ. ಹಿಂದೂ ಕಾರ್ಯಕರ್ತರು ಇನ್ನೊಂದು ಕಾರ್ಯಕರ್ತರು ಎನ್ನುವ ಟಾರ್ಗೆಟ್ ಮಾಡಿ ಮಾಡುವ ಪ್ರಯತ್ನ ಮಾಡಿಲ್ಲ.ಕಾನೂನಿನ ಪ್ರಕಾರ ಯಾವ ಕ್ರಮ ಆಗಬೇಕು ಪೊಲೀಸ್ ಇಲಾಖೆ ಮಾಡುತ್ತದೆ. ಇದಕ್ಕೆ ಕೋಮು ಬಣ್ಣ ಕಟ್ಟುವುದು ಸೂಕ್ತ ಅಲ್ಲ ಎಂದು ತಿಳಿಸಿದರು.