ಹುಬ್ಬಳ್ಳಿ: ಬಿಜೆಪಿಯಿಂದ ರಾಜ್ಯಸಭೆಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಉದ್ಯಮಿ, ಮಾಜಿ ರಾಜ್ಯಸಭಾ ಸದಸ್ಯ ವಿಜಯ ಸಂಕೇಶ್ವರ್ ಅಸಮಾಧಾನಗೊಂಡಿದ್ದಾರೆ ಅಂತಾ ಹೇಳಲಾಗುತ್ತಿದೆ
ಹಾಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಗೆ ಮತ್ತೊಮ್ಮೆ ಟಿಕೆಟ್ ನೀಡಿದ್ದು, ವಿಜಯ ಸಂಕೇಶ್ವರ್ ಆಪ್ತ ವಲಯವನ್ನು ಕೆರೆಳಿಸಿದೆ. ಹೀಗಾಗಿ ಬಿಜೆಪಿಗೆ ರಾಜೀನಾಮೆ ನೀಡ್ತಾರೆ ಅನ್ನೋ ಸುದ್ದಿ ಅವರ ಆಪ್ತ ವಲಯದಲ್ಲಿ ಹರಿದಾಡ್ತಿದೆ. ಇದಕ್ಕೆಲ್ಲಾ ತೆರೆ ಎಳೆಯುವ ಸಲುವಾಗಿ ಸ್ವತಃ ಸಂಕೇಶ್ವರ್, ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದು ತೀವ್ರ ಕುತೂಹಲ ಮೂಡಿಸಿದೆ.
ವಿಜಯ ಸಂಕೇಶ್ವರ್ ಲಿಂಗಾಯತ ಸಮಾಜದವರು. ಬಿಜೆಪಿಯು ವೋಟ್ ಬ್ಯಾಂಕ್ ಎಂದು ಹೆಚ್ಚು ಅವಲಂಬಿತ ಆಗಿರುವ ಜಾತಿ ಅದು. ಬಿಜೆಪಿಯಲ್ಲಿ ವಿಜಯ ಸಂಕೇಶ್ವರ್ ಹಳಬರು ಹಾಗೂ ಹಿರಿಯರು ಕೂಡ ಆಗಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ಸಂಕೇಶ್ವರ್ ಸಂಸದರಾಗಿದ್ದರು. ಜತೆಗೆ ಹುಬ್ಬಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಪ್ರಬಲವಾದ ಹಿಡಿತವನ್ನು ಹೊಂದಿದವರಾಗಿದ್ದಾರೆ.