– ಕದ್ರಾ ಜಲಾಶಯದಿಂದ 67 ಸಾವಿರ ಕ್ಯುಸೆಕ್ ನೀರು ಹೊರಕ್ಕೆ
ಬೆಂಗಳೂರು: ರಾಜ್ಯದಲ್ಲಿ ಮಳೆಯ (Karnataka Rains) ಪ್ರಮಾಣ ಕೊಂಚ ಇಳಿಕೆಯಾದರೂ ಅವಾಂತರಗಳು ಮುಂದುವರಿದಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫಲ್ಗುಣಿ ನದಿಯ ಅಬ್ಬರ ಮುಂದುವರಿಯುತ್ತಲೇ ಇದೆ.
ಮಂಗಳೂರಿನಲ್ಲಿ (Mangaluru) ಅದ್ಯಪಾಡಿ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, 30ಕ್ಕೂ ಹೆಚ್ಚು ಮನೆಗಳಿಗೆ ಜಲ ದಿಗ್ಭಂಧನವಾಗಿದೆ. ಸಂತ್ರಸ್ತರನ್ನ ದೋಣಿಗಳ ಮೂಲಕ ಸ್ಥಳಾಂತರಿಸಲಾಗಿದೆ. ನೆರೆ ಪ್ರದೇಶಗಳ ಡ್ರೋನ್ ದೃಶ್ಯಗಳು ಸೆರೆಯಾಗಿವೆ. ಉತ್ತರ ಕನ್ನಡದಲ್ಲೂ ನದಿಗಳು (UttaraKannada Rivers) ಅಪಾಯ ಮಟ್ಟ ಮೀರಿ ಹರಿಯುತ್ತಿವೆ.
ಕದ್ರಾ ಜಲಾಶಯದಿಂದ 67 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರು ಹೊರಬಿಟ್ಟಿರುವ ಕಾರಣ 20ಕ್ಕೂ ಹೆಚ್ಚು ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಈಗಾಗಲೇ ಮಹಾ ಮಾಯಿ ದೇವಸ್ಥಾನ ಮುಳುಗಡೆಯಾಗಿದೆ. ಇದನ್ನೂ ಓದಿ: ವಯನಾಡಿನಲ್ಲಿ ಸಾವಿನ ಸುರಿ`ಮಳೆ’ – ಗುರುತು ಸಿಗದಷ್ಟು ಛಿದ್ರಗೊಂಡಿರುವ ದೇಹಗಳು; ಶವಗಳ ಶೋಧಕ್ಕೆ ಶ್ವಾನಪಡೆ!
ಲಿಂಗನಮಕ್ಕಿ ಜಲಾಶಯದಿಂದ ಅಪಾರ ನೀರು ರಿಲೀಸ್ ಮಾಡಲಾಗಿದೆ. ಹೊಸನಗರದ ಸವೆಹಕ್ಲು ಡ್ಯಾಂ ಕೋಡಿ ಬಿದ್ದಿದ್ದು, ಜಲಪಾತದಂತೆ ನೀರು ಹರಿಯುತ್ತಿದೆ. ಮಹಾರಾಷ್ಟ್ರ ಪಶ್ಚಿಮ ಘಟ್ಟಗಳಲ್ಲಿ ಮಳೆ ತಗ್ಗಿದರೂ ಬೆಳಗಾವಿ ಭಾಗದಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದೆ. ಇದನ್ನೂ ಓದಿ: ಪ್ರೀತಿಯ ಭಾರತೀಯ ಸೇನೆ..; ವಯನಾಡಲ್ಲಿ ರಕ್ಷಣೆಗೆ ನಿಂತ ಸೈನಿಕರಿಗೆ ಪುಟ್ಟ ಬಾಲಕ ಸೆಲ್ಯೂಟ್
ಅಥಣಿ ತಾಲೂಕಿನ ಸವದಿ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ಹಾಸನದ ಶಿರಾಡಿಘಾಟ್ ರಸ್ತೆಯ ಭೂ ಕುಸಿತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆಲಮಟ್ಟಿ ಜಲಾಶಯ ತುಂಬಿ ಹರಿವ ದೃಶ್ಯಗಳು ರುದ್ರ ರಮಣೀಯವಾಗಿವೆ. ಇನ್ನು, ಜೋಗದ ಅದ್ಭುತ ದೃಶ್ಯ ಡ್ರೋನ್ ಕಣ್ಣಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಶಿರಾಡಿಘಾಟ್ ಭೂಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ – ಕೇಂದ್ರಕ್ಕೆ ಮನವರಿಕೆ ಮಾಡುತ್ತೇವೆಂದ ಸಿಎಂ